ಕೊರೊನಾ ಎಫೆಕ್ಟ್ : ಮದ್ಯಪಾನಿಗಳಿಗೆ ಆರೋಗ್ಯಕರ ಸಲಹೆಗಳು ಇಲ್ಲಿವೆ..

ಕೊರೊನಾ ಸೋಂಕಿನಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ದಿನಬಳಕೆಯ ವಸ್ತುಗಳು ಹೊರತು ಪಡಿಸಿ ಎಲ್ಲವೂ ಲಾಕ್ ಡೌನ್ ಮಾಡಲಾಗಿದೆ. ದಿನನಿತ್ಯದ ವಸ್ತುಗಳ ಖರೀದಿಗೂ ಸಮಯ ನಿಗಧಿ ಮಾಡಲಾಗಿದೆ. ಹೀಗಾಗಿ ಇಡೀ ವಿಶ್ವವೇ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಸಣ್ಣ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಇನ್ನೂ ರೈತರ ಪಾಡು ಹೇಳೋಹಾಗೇ ಇಲ್ಲ. ಬೆಳೆದ ಬೆಳೆಯನ್ನ ಮಾರುಕಟ್ಟೆಗೂ ತಲುಪಿಸಲಾಗದೇ ರೈತನ ಬೆಳೆ ನಾಶವಾಗುತ್ತಿದೆ. ಕೆಲ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಕ್ ಡೌನ್ ನಿಂದ ಇಷ್ಟೆಲ್ಲಾ ನಷ್ಟವಾದರೂ ಒಂದೇ ಒಂದು ವಿಚಾಋಕ್ಕೆ ಮಹಿಳಾ ಸಮಾಜ ಕೊಂಚ ಮಟ್ಟಿಗೆ ಲಾಕ್ ಡೌನ್ ಆಗಿದ್ದು ಒಳ್ಳೆದಾಯಿತು ಎನ್ನುತ್ತಿದೆ. ಅದು ಯಾಕೆ ಗೊತ್ತಾ..? ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದರಿಂದ. ಹೀಗಾಗಿ ಲಾಕ್ ಡೌನ್ ನಿಂದ ನಷ್ಟದೊಂದಿಗೆ ನಷ್ಟವೂ ಇದೆ ಎನ್ನಲಾಗಿದೆ.

ಹೌದು…. ಮದ್ಯಪಾನಿಗಳಿಗೆ ಮದ್ಯ ಸಿಗದೇ ಎಷ್ಟೋ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ. ಸುಖಿ ಸಂಸಾರವನ್ನ ಮಾಡುತ್ತಿವೆ. ಲಾಕ್ ಡೌನ್ ಮಾಡಿದ್ದು ಒಳ್ಳೆದ್ದೇ ಆಯ್ತು ಎನ್ನುವ ಮಟ್ಟಿಗೆ ಮದ್ಯಪಾನಿಗಳ ಕುಟುಂಬಗಳು ಸಂತಸ ವ್ಯಕ್ತಪಡಿಸಿವೆ. ಆದರೆ ಮದ್ಯಪಾನಿಗಳು ಮಾತ್ರ ಮದ್ಯ ಸಿಗದೇ ಪರದಾಡುತ್ತಿದ್ದಾರೆ. ಮದ್ಯಪಾನಿಗಳ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಸಿಗರೇಟ್, ಮದ್ಯ ವೆಸನಿಗಳು ದಿನನಿತ್ಯ ಮದ್ಯ ಸೇವಿಸಿ ಏಕಾಏಕಿ ಮದ್ಯವಿಲ್ಲದೇ ಆರೋಗ್ಯದಲ್ಲಿ ಏರುಪೇರಾಗುವುದು ಕಂಡು ಬರುತ್ತದೆ.

ಸಾಮಾನ್ಯವಾಗಿ ಮದ್ಯಸೇವನೆ ಏಕಾಏಕಿಯಾಗಿ ನಿಲ್ಲಿಸಿದರೆ, ನಡುಕ, ಅಸಮಧಾನ, ಮದ್ಯ ಸೇವನೆಗೆ ಆತುರ, ಮನೆ ಬಿಟ್ಟು ಹೋಗಬೇಕು ಎನ್ನಿಸುವಂತಾಗುವುದು, ಏಕಾಂಗಿಯಾಗಿ ಇರಬೇಕು ಎನ್ನಿಸುವುದು ಹೀಗೇ ನಾನಾ ಅನಾರೋಗ್ಯ ಲಕ್ಷಣಗಳು ಕಂಡು ಬರುತ್ತವೆ. ಆದರೆ ಇದಕ್ಕೆ ಮದ್ದು ಏನು..? ಇದಕ್ಕೆ ಇಲ್ಲಿದೆ ಆರೋಗ್ಯಕರ ಪರಿಹಾರ..

ಮನಸ್ಸು ಒಂದೇ ಕಡೆಗೆ ಕೇಂದ್ರಿಕರಿಸದಿರಿ – ಮದ್ಯಪಾನಿಗಳು ಆಗಾಗ ಬೇರೆ ಬೇರೆ ಯೋಚನೆಗಳನ್ನ ಮಾಡಿ. ಮನಸ್ಸು ಒಂದೇ ಕಡೆಗೆ ಇರದಂತೆ ನೋಡಿಕೊಳ್ಳಿ. ಕೆಲಸದ ಬಗ್ಗೆ ಯೋಚಿಸಿ, ಕುಟುಂಬದ ಬಗ್ಗೆ ಯೋಚಿಸಿ. ಮುಂದಿನ ಜೀವನದ ಬಗ್ಗೆ ಯೋಚಿಸಿ. ಮನಸ್ಸು ಒಂದೇ ಕಡೆಗೆ ಕೇಂದ್ರೀ ಕರಿಸಬೇಡಿ.

ಕುಟುಂಬದವರೊಂದಿಗೆ ಹೆಚ್ಚಾಗಿ ಬೆರೆಯಿರಿ – ಇದು ಕುಟುಂಬದವರೊಂದಿಗೆ ಹೆಚ್ಚಾಗಿ ಬೆರೋಯೊಕೆ ಇರುವ ಸಮಯ. ಈ ಸಮಯವನ್ನು ವ್ಯತ್ಯಯ ಮಾಡಿಕೊಳ್ಳಬೇಡಿ. ನೀವು ನಿಮ್ಮವರೊಂದಿಗೆ ಬೆರೆಯಿರಿ. ನಿಮ್ಮ ಬಂಧು ಬಳಗದವರೊಂದಿಗೆ ಸಂತೋಷದಿಂದ ಫೋನ್ ಕಾಲ್, ವಿಡಿಯೋ ಕಾಲ್ ಮಾಡಿ ಮಾತನಾಡಿ. ಸಿಹಿ ಕಹಿ ಘಟನೆಗಳನ್ನ ಹಂಚಿಕೊಳ್ಳಿ.

ಮದ್ಯಪಾನವನ್ನು ಸಂಪೂರ್ಣವಾಗಿ ಮರೆಯಲು ಪ್ರಯತ್ನಿಸಿ – ಮದ್ಯಪಾನ ಮಾಡುತ್ತಿದ್ದೆ ಅನ್ನೋ ವಿಚಾರವನ್ನೇ ಮರೆತು ಬಿಡಿ. ಆ ಬಗ್ಗೆ ಯೋಚಿಸಲೇಬೇಡಿ. ನಿಮ್ಮಆರೋಗ್ಯದಲ್ಲಿ ಆಗುವ ಬದಲಾವಣೆಗಳು ಮದ್ಯಪಾನವನ್ನ ನೆನಪಿಸಬಹುದು. ಆದರೆ ಅದು ಸಾಮಾನ್ಯ ಎನ್ನುವಂತೆ ಭಾವಿಸಿ. ಮದ್ಯಪಾನವಿಲ್ಲದೇ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎನ್ನುವುದನ್ನ ಮರೆತು ಬಿಡಿ.

ಮನೆಯ ಸಣ್ಣ ಪುಟ್ಟ ಕೆಲಸಗಳಲ್ಲಿ ಭಾಗಿಯಾಗಿ – ಮನೆಯಲ್ಲಿ ಅದೆಷ್ಟೋ ಕೆಲಸಗಳು ಇರುತ್ತವೆ. ಆ ಕೆಲಸಗಳಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ. ನಿಮ್ಮ ಕುಟುಂಬದವರು ಮಾಡುವ ಕೆಲಸಗಳನ್ನು ನೀವು ಮಾಡಿ. ದೇಹವನ್ನು ಶ್ರಮಿಸಿ. ಆರಂಭದಲ್ಲಿ ಕಷ್ಟವಾದರೂ ನಂತರದಲ್ಲಿ ಇದು ಸುಲಭವಾಗಬಹುದು.

ಮನೆಯಲ್ಲೇ ಕುಳಿತು ಕೆಲಸ ಮಾಡಿ ಸಂಬಳ ಪಡೆಯುವ ಕೆಲಸ ಹುಡುಕಿ– ಇಷ್ಟು ದಿನ ನೀವು ಕಳೆದುಕೊಂಡ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. ನಿಮ್ಮ ಕುಟುಂಬಕ್ಕಾಗಿ ನೀವೇನು ಮಾಡಿದ್ದೀರಿಇ ಅನ್ನೋದನ್ನ ಯೋಚಿಸಿ. ನಿಮಗೆ ಉತ್ತರ ಶೂನ್ಯ ಅನ್ನಿಸಿದಲ್ಲಿ ಕೆಲಸ ಆರಂಭಿಸಿ. ಮನೆಯಿಂದಲೇ ದುಡಿಯಿರಿ. ನಿಮ್ಮ ಗಮನ ತನ್ನಿಂದ ತಾನೆ ಬೇರೆ ಸೆಳೆಯುತ್ತದೆ.

ಆರೋಗ್ಯದಲ್ಲಿ ತೀವ್ರ ಏರುಪೇರಾದರೆ ವೈದ್ಯರ ಸಂಪರ್ಕ- ಇಷ್ಟಲ್ಲಾ ಕ್ರಮಗಳನ್ನು ಕೈಗೊಂಡ ಬಳಿಕವೂ ನಿಮ್ಮ ಆರೋಗ್ಯ ನಿಮ್ಮ ಕೈಲಿಲ್ಲಾ ಅಂತೆನಿಸಿದರೆ ವೈದ್ಯರನ್ನು ಸಂಪರ್ಕಿಸಿ. ಅವರ ನೀಡುವ ಸಲಹೆಗಳನ್ನ ಪಾಲಿಸಿ.

ಹೀಗೆ ಮಾಡುವುದರಿಂದ ಮದ್ಯಪಾನವನ್ನು ನೀವು ಬಿಡಬಹುದು. ಅಲ್ಲದೇ ಮದ್ಯಪಾನವನ್ನು ಬಿಡಲು ಇದು ಒಂದು ಸೂಕ್ತ ಸಮಯ. ನಿಮ್ಮನ್ನ ನೀವು ಬದಲಾಯಿಸಿಕೊಳ್ಳಿ. ಸಂತೋಷದಿಂದಿರಿ ಸಂತೋಷದಿಂದಿರಲು ಬಿಡಿ. ಕೊರೊನಾ ತಡೆಗೆ ಮಾತ್ರವಲ್ಲ ಮದ್ಯಪಾನ ತಡೆಯಲು ಕೈ ಜೋಡಿಸಿ.

 

Spread the love

Leave a Reply

Your email address will not be published. Required fields are marked *