ಕೊರೊನಾ ರಂಪಾಟ – ಸಾರ್ವಜನಿಕ ನಡುವಳಿಕೆ ಪ್ರದರ್ಶಿಸಿ : ಭಾರತ ಚೀನಾ ಆಗೋದನ್ನ ತಪ್ಪಿಸಿ

ಕೊರೊನಾ ರಂಪಾಟಕ್ಕೆ ವಿಶ್ವವೇ ತತ್ತರಿಸಿ ಹೋಗಿದೆ. ಕೊರೊನಾ ಸೋಂಕು 70 ದೇಶದಲ್ಲಿ ಭಯದ ಬಾವುಟ ನೆಟ್ಟು ಬಿಟ್ಟಿದೆ. ಇದಕ್ಕೆ ಕಾರಣ ನಿರ್ಲಕ್ಷ್ಯ. ಚೀನಾ ತೋರಿದ ನಿರ್ಲಕ್ಷ್ಯದಿಂದ  ಇಟಲಿ, ಇರಾನ್, ದಕ್ಷಿಣ ಕೋರಿಯಾ, ಸ್ಪೇನ್, ಇಂಗ್ಲೆಂಡ್ ಭಯಬೀಡಿತವಾಗಿದೆ. ಇಟಲಿಯಿಂದ ಕೊಚ್ಚಿಗೆ ಬಂದ ಮೂರು ಜನ ತೋರಿದ ನಿರ್ಲಕ್ಷ್ಯದಿಂದ ಸದ್ಯ ಮೂರು ಸಾವಿರ ಮಂದಿಗೆ ಭಯ ಶುರುವಾಗಿದೆ.

ಹೌದು.. ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಸೋಂಕು ಕಾಣಿಸಿಕೊಂಡ ಒಂದೇ ಕುಟುಂಬದ ಮೂವರು ಗುಣಮುಖರಾಗಿದ್ದರು. ಆದರೆ ಹೊಸದಾಗಿ 6 ಪ್ರಕರಣ ಪತ್ತೆಯಾಗಿವೆ. ಇಟಲಿಯಿಂದ ಕೊಚ್ಚಿಗೆ ಬಂದ ಅಜ್ಜ-ಅಜ್ಜಿ ಮತ್ತು ಮಗ ಈ ಮೂವರಿಂದ ಮನೆಯಲ್ಲಿರುವ ಇಬ್ಬರಿಗೆ ಕೊರೊನಾ ಬಂದಿದೆ. ಇವರು ಚಿಕಿತ್ಸೆ ಮಾಡಿಸಿಕೊಳ್ಳದೇ ತೋರಿದ ನಿರ್ಲಕ್ಷ್ಯಕ್ಕೆ ಕೇರಳದಲ್ಲಿ 3 ಸಾವಿರ ಮಂದಿ ಭಯದಲ್ಲಿ ಜೀವನ ಮಾಡುತ್ತಿದ್ದಾರೆ. ಇವರು ತೋರಿಸಿಕೊಂಡಿದ್ದರೆ ಕೊರೊನಾ ಸೋಂಕುವಿನಿಂದ ಚಿಕಿತ್ಸೆ ಪಡೆದು ಗುಣಮುಖರಾಗಬಹುದಿತ್ತು. ಆದರೆ ಇವರು ಹಾಗೆ ಮಾಡಲಿಲ್ಲ. ಇವರು ತೋರಿದ ನಿರ್ಲಕ್ಷ್ಯಕ್ಕೆ ಮೂರು ಸಾವಿರ ಮಂದಿ ಭಯದಲ್ಲಿ ಜೀವನ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಕರ್ನಾಟದಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಆತಂಕ  ಸೃಷ್ಟಿ ಮಾಡಿದೆ. ಇದರ ಜೊತೆಗೆ ಮಂಗಳೂರಿನ ಕೊರೋನಾ ಶಂಕಿತ ರಾತ್ರೋರಾತ್ರಿ ಪರಾರಿಯಾಗಿ ಜನರ ನಿದ್ದೆಗೆಡಿಸಿದ್ದಾನೆ. ಇಂದೇ ಒಂದು ನಿರ್ಲಕ್ಷ್ಯ ಮನುಷ್ಯನನ್ನು ಹಾಳುಭಾವಿಗೆ ತಳ್ಳುತ್ತಿದೆ. ಒಂದು ವೇಳೆ ಆತ ಚಿಕಿತ್ಸೆಗೆ ಒಳಪಟ್ಟು ಸ್ಪಂದಿಸಿದ್ದರೆ ಸೋಂಕು ಇದಿಯೋ ಇಲ್ಲವೋ ಎನ್ನುವುದು ಗೊತ್ತಾಗುತ್ತಿತ್ತು. ಇದ್ದರೆ ಸೂಕ್ತ ಚಿಕಿತ್ಸೆ ನೀಡಬಹುದಾಗಿತ್ತು. ಆದರೆ ಆತ ತೋರಿದ ನಿರ್ಲಕ್ಷ್ಯದಿಂದ ಮಂಗಳೂರು ಜನತೆ ಆತಂಕಕ್ಕೀಡಾಗಿದೆ.

ಸೋಂಕಿತರನ್ನು ಗುರುತಿಸಿದೆ ಇದೇ ತಪ್ಪು ಚೀನಾ ಮಾಡಿ 3120 ಜನರ ಪ್ರಾಣವನ್ನ ಬಲಿ ಪಡೆದುಕೊಂಡಿದೆ. ಜನರಿಂದ ಸದಾ ಗಿಜುಗುಡುತ್ತಿದ್ದ ವುಹಾನ್ ಪ್ರಾಂತ್ಯದಲ್ಲಿ ಜನ ಪ್ರಾಣಿಗಳಂತೆ ಬೀದಿಯಲ್ಲಿ ಬಿದ್ದು ಸಾವನ್ನಪ್ಪಿದರು. ಅಷ್ಟೇ ಅಲ್ಲ ಕೊರೊನಾ ನಿರ್ಲಕ್ಷ್ಯ ದಿಂದಾಗಿ ಇಡೀ ಚೀನಾವೇ ಸ್ಮಶಾನವಾಗಿದೆ. ಇಡೀ ವಿಶ್ವವೇ ತಲ್ಲಣಗೊಂಡಿದೆ.  ಇದಕ್ಕೆ ಕಾರಣ ನಿರ್ಲಕ್ಷ್ಯವಲ್ಲದೆ ಇನ್ನೇನು..? ಹಾಗಾದರೆ ಚೀನಾದಂತೆ ಭಾರತವೂ ಆಗದಿರಲು ಏನು ಮಾಡಬೇಕು..? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಮೊದಲು ಪ್ರತಿಯೊಬ್ಬರು ಜವಬ್ದಾರಿಯುತ ನಡುವಳಿಕೆ ಪ್ರದರ್ಶಿಸಬೇಕು.

ಕೊರೊನಾ ವೈರಸ್ ಇರುವ ಯಾವುದೇ ದೇಶದಿಂದ ನಮ್ಮದೇ ದೇಶಕ್ಕೆ ಅಥವಾ ರಾಜ್ಯಕ್ಕೆ ಬಂದ ಜನರ ಆರೋಗ್ಯದಲ್ಲಿ ಏರುಪೇರಾದರೆ ಚಿಕಿತ್ಸೆಗೆ ಸಲಹೆ ನೀಡಿ.

ಒಂದು ವೇಳೆ ನಿಮ್ಮಲ್ಲಿ ಒಬ್ಬರಿಗೆ ಕೊರೊನಾ ಲಕ್ಷಣಗಳು ಕಂಡುಬಂದಲ್ಲಿ ತುರ್ತಾಗಿ ಚಿಕಿತ್ಸೆಗೆ ಒಳಪಡಿಸಿ.

ಆರೋಗ್ಯ ತಪಾಸಣೆಗೆ ಸ್ಪಂದಿಸದೇ ಇದ್ದಲ್ಲಿ ಅಂತವರ ವಿರುದ್ಧ ಆರೋಗ್ಯ ಇಲಾಖೆಗೆ ದೂರು ನೀಡಿ.

ದೇಶದಲ್ಲಿ 52 ಪರೀಕ್ಷಾ ಕೇಂದ್ರಗಳಿದ್ದು ಇದರಲ್ಲಿ 5 ಕೇಂದ್ರಗಳು ನಮ್ಮ ರಾಜ್ಯದಲ್ಲಿವೆ. (ಮೈಸೂರು, ಹಾಸನ, ಶಿವಮೊಗ್ಗ, ಬೆಂಗಳೂರು)

ಕೊರೊನಾ ಲಕ್ಷಣವಿರುವ ವ್ಯಕ್ತಿಗಳಿಂದ ದೂರವಿರಿ, ಮಾಸ್ಕ್ ಗಳನ್ನ ಧರಿಸಿ, ಕೈಗಳನ್ನ ಕುಲುಕದಿರಿ.

ಇಂತೆಲ್ಲಾ ಸಣ್ಣ ವಿಚಾರಗಳು ದೇಶದ ಆರೋಗ್ಯ ಸ್ಥಿತಿಯನ್ನ ಕಾಪಾಡಲು ಸಾಧ್ಯ ಮಾಡುತ್ತವೆ. ಹೀಗಾಗಿ ತಾ ವುಗಳು ನಾಗರೀಕರಾಗಿ ಜವಬ್ದಾರಿಯುತ ನಡುವಳಿಕೆ ಪ್ರದರ್ಶಿಸಬೇಕು. ಅನುಮಾನ ಬಂದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ನಿಮ್ಮಂದ ಮತ್ತೊಬ್ಬರಿಗೆ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಚೀನಾದ ಸ್ಥಿತಿ ನಮ್ಮ ದೇಶಕ್ಕೆ ಬರಲು ಸಾಧ್ಯವಿಲ್ಲ. ಒಂದು ವೇಳೆ ಸರ್ಆವಜನಿಕರು ನಿರ್ಲಕ್ಷ್ಯ ತೋರಿದಲ್ಲಿ ಚೀನಾ ಜನರಿಗಿಂತ ಅತ್ಯಂತ ಘೋರ ಸಾವನ್ನು ನಾವು ತಂದುಕೊಳ್ಳುವಲ್ಲಿ ಸಂಶಯವೇ ಇಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಕೊರೊನಾ ರಂಪಾಟ – ಸಾರ್ವಜನಿಕ ನಡುವಳಿಕೆ ಪ್ರದರ್ಶಿಸಿ : ಭಾರತ ಚೀನಾ ಆಗೋದನ್ನ ತಪ್ಪಿಸಿ

  • February 14, 2021 at 1:08 pm
    Permalink

    Hello to all, the contents present at this web page are
    truly remarkable for people knowledge, well, keep up the nice work fellows.

    Reply

Leave a Reply

Your email address will not be published.

Verified by MonsterInsights