ಕೊರೊನಾ ವೈರಸ್ ಬಂದಿರುವುದಾಗಿ ತಮಾಷೆ ಮಾಡಿದ ವಿದ್ಯಾರ್ಥಿಗಳು ಸಸ್ಪೆಂಡ್..!

ಗಂಭೀರ ವಿಷಯವನ್ನು ತಮಾಷೆ ಮಾಡಿದ್ದಕ್ಕೆ ನಾಲ್ಕು ವಿದ್ಯಾರ್ಥಿಗಳನ್ನು ಕಾಲೇಜ್ ಆಡಳಿತ ಮಂಡಳಿ ಸಸ್ಪೆಂಡ್ ಮಾಡಿದ ಘಟನೆ ಆಂಧ್ರದ ಕಡಪ ಜಿಲ್ಲೆಯಲ್ಲಿ ನಡೆದಿದೆ.

ಕೊರೊನಾ ಬಂದಿದೆ ಎಂದು ಭಯ ಹುಟ್ಟಿಸಿದ ನಾಲ್ಕು ಕಿಡಿಗೇಡಿಗಳನ್ನು ತರಾಟೆಗೆ ತೆರೆದುಕೊಂಡ ಆಡಳಿತ ಮಂಡಳಿ ಇವರ ಪಾಲಕರಿಗೂ ಎಚ್ಚರಿಕೆಯನ್ನು ನೀಡಿದೆ.

ಈಗಾಗಲೇ ವಿಶ್ವದಾದ್ಯಂತ ಕೊರೊನಾ ಸೋಂಕು ಹರಡಿ ಸಾವಿಗೀಡಾದವರ ಸಂಖ್ಯೆ 3300 ಕ್ಕೂ ಹೆಚ್ಚು ಎಂದೇಲಲಾಗುತ್ತಿದೆ. ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಭಾರತದಲ್ಲೆ 33 ಜನರಲ್ಲಿ ಸೋಕು ಇರುವುದು ದೃಢಪಟ್ಟಿದೆ. ಇನ್ನೂ ಮೊನ್ನೆಯಷ್ಟೇ ಚಾಮರಾಜನಗರದಲ್ಲಿ ಸರ್ಕಾರಿ ಮಕ್ಕಳು ಕೊರೊನಾ ನಾಟಕವಾಡಿದ ಘಟನೆ ಇನ್ನೂ ಮರೆ ಮಾಚಿಲ್ಲ.

ಇಡೀ ವಿಶ್ವವೇ ಕೊರೊನಾ ವೈರಸ್ ಸೋಂಕಿನ ಭೀತಿಗೆ ಬೆಚ್ಚಿ ಬಿದ್ದಿದೆ. 76 ದೇಶಗಳಲ್ಲಿ 99,936 ಜನರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಇದೀಗ ಈ ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸುಳ್ಳು ಸುದ್ದಿಗಳು, ಹಬ್ಬುತ್ತಿವೆ. ಈ ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಮುಂದಾಗಿರುವ ರಾಜ್ಯ ಆರೋಗ್ಯ ಇಲಾಖೆ, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹರಡುವ ಮುನ್ನ ಎಚ್ಚರ…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.