ಕೊರೊನ ಬಿಕ್ಕಟ್ಟು: ಭಾರತದಿಂದ 9000 ವಿದೇಶಿ ನಾಗರಿಕರನ್ನು ಹಿಂದಕ್ಕೆ ಕಳುಹಿಸಲು ಕಾರ್ಯಾರಂಭ

ಭಾರತದಲ್ಲಿ ಕೊರೊನ ಸೋಂಕು ಹೋರಾಟದ ಭಾಗವಾಗಿ 21 ದಿನಗಳವರೆಗೆ ಲಾಕ್ ಡೌನ್ ಮಾಡಲಾಗಿದ್ದು ಹಲವು ನಿರ್ಬಂಧಗಳನ್ನು ಹಾಕಲಾಗಿದೆ. ಇದರ ಭಾಗವಾಗಿ ಎಲ್ಲ ರೀತಿಯ ವಿಮಾನ ಸಂಪರ್ಕಗಳನ್ನು ರದ್ದು ಮಾಡಲಾಗಿದೆ.  ಈ ಸಮಯದಲ್ಲಿ ಸುಮಾರು 9000 ವಿದೇಶಿ ನಾಗರಿಕರು, ತಮ್ಮ ದೇಶಕ್ಕೆ ಹಿಂದಿರುಗಲು ಅನುವು ಮಾಡಿಕೊಡುವಂತೆ ಕೋರಿದ್ದಾರೆ.

ಮಾರ್ಚ್ 22 ರಂದು ಭಾರತ ಎಲ್ಲ ರೀತಿಯ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿತ್ತು ಹಾಗು ಮಾರ್ಚ್ 24ರಿಂದ ಪ್ರಾದೇಶಿಕ ವಿಮಾನ ಹಾರಾಟವನ್ನು ಬಂದ್ ಮಾಡಿತ್ತು. ನಂತರ ಮಾರ್ಚ್ 25 ರಿಂದ 21 ದಿನಗಳ ಲಾಕ್ ಡೌನ್ ಘೋಷಿಸಿತ್ತು.

ಈಗ ವಿದೇಶಿಯರನ್ನು ಹಿಂದಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಸುಮಾರು 500 ಜನ ಜರ್ಮನ್, ಸ್ವೀಡನ್ ಮತ್ತು ಲ್ಯಾಟಿವಿಯ ನಿವಾಸಿಗಳು ಲುಫ್ತಾನ್ಸಾ ವಿಮಾನಯಾನದ ಮೂಲಕ ಫ್ರಾಂಕ್ ಫರ್ಟ್ ತಲುಪಿದ್ದಾರೆ.

ವಿವಿಧ ವಿದೇಶಿ ರಾಯಭಾರಿ ಕಚೇರಿಗಳಿಂದ ಸುಮಾರು 9000 ವ್ಯಕ್ತಿಗಳ ಪಟ್ಟಿ ಸಿದ್ಧವಾಗಿದ್ದು, ಇವರನ್ನು ಸುರಕ್ಷಿತವಾಗಿ ಅವರ ದೇಶಗಳಿಗೆ ಕಳುಹಿಸಿಕೊಡಲು ಕೇಂದ್ರಸರ್ಕಾರ ಸಿದ್ಧತೆ ನಡೆಸುತ್ತಿದೆ. “ಈ ಸಂಖ್ಯೆ ದಿನದಿನವೂ ಹೆಚ್ಚುತ್ತಿದ್ದೆ. ನೆನ್ನೆ ಇದು ಎಂಟುಸಾವಿರ ಇತ್ತು. ಇಂದು 9000ಕ್ಕೆ ಹೆಚ್ಚಿದೆ” ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ದ ವೈರ್ ವರದಿ ಮಾಡಿದೆ.

ಲಾಕ್ ಡೌನ್ ಆಗುವುದಕ್ಕೆ ಮುಂಚೆಯೇ ಪೋಲ್ಯಾಂಡ್ ತಮ್ಮ ದೇಶದ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಹಲವು ಯೂರೋಪಿಯನ್ ದೇಶಗಳು, ರಷ್ಯ ಮತ್ತು ಹಲವು ಏಷ್ಯಾ ದೇಶಗಳು ಕೂಡ ನಾಗರಿಕರನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸರ್ಕಾರಕ್ಕೆ ಸಂಪರ್ಕಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.