ಕೊಳವೆ ಬಾವಿ ಕೊರೆಯುವಾಗ ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರು ಸಾವು…!

ಕೊಳವೆ ಬಾವಿ ಕೊರೆಯುವಾಗ ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಗಾಂಧಿ ವೃತ್ತದಲ್ಲಿ ನಡೆದಿದೆ.

ತಮಿಳುನಾಡು ಮೂಲದ ಪ್ರಭು (42) ಒರಿಸ್ಸಾ ಮೂಲದ ಕಿಲ್ಲೀಸ್ (30) ಮೃತರು. ಬೋರ್ ವೆಲ್ ಲಾರಿ ನಿಂತಿದ್ದ ಸ್ಥಳದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ಪೈಪ್ ಕೆಳಗೆ ಇಳಿಸುವಾಗ ವಿದ್ಯುತ್ ತಗುಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಪೈಪ್ ಕೆಳಗೆ ಇಳಿಸುವಾಗ ವಿದ್ಯುತ್ ಲೈನ್ ಗೆ ತಗುಲಿ ದುರಂತ ಸಂಭವಿಸಿದೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ವಿಚರಾಣೆ ನಡೆಸಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights