ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ತಿಕ್ಕಾಟ : ಮಧ್ಯಪ್ರವೇಶಕ್ಕೆ ಪೊಲೀಸರಿಗೆ ಆಗ್ರಹ
ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ಜಗಳ ನಡೆದಿದ್ದು, ಮಧ್ಯಪ್ರವೇಶಕ್ಕೆ ಪೊಲೀಸರಿಗೆ ಆಗ್ರಹಿಸಿದ ಘಟನೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಹಾಗೂ ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೇವಿಗೆ ಬಿಟ್ಟ ಕೋಣ ಕಟ್ಟಿಕೊಂಡ ಮತ್ತೊಂದು ಗ್ರಾಮದ ಜನರಿಗೆ ನಮ್ಮೂರ ದೇವಿಯ ಕೋಣ ನಮಗೆ ಬಿಡಿ ಎಂದು ಇನ್ನೊಂದು ಗ್ರಾಮದ ಜನ ಪಟ್ಟು ಹಿಡಿದಿದ್ದಾರೆ. ಇದರಿಂದ ಎರಡು ಗ್ರಾಮದ ಜನರ ನಡುವೆ ಜಗಳ ನಡೆದಿದೆ.
ಕೋಣ ಕಟ್ಟಿಕೊಂಡ ಹಾರನಹಳ್ಳಿಯ ಗ್ರಾಮಸ್ಥರು, ನಮ್ಮ ಮಾರಿಕಾಂಭಾ ದೇವಿಯಕೋಣ ವೆಂದು ಬೇಲಿಮಲ್ಲೂರ ಗ್ರಾಮಸ್ಥರು ಸದ್ಯ ಹೊನ್ನಾಳಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇನ್ನೊಂದು ಕಡೆ ಕೋಣ ಬಿಟ್ಟುಕೊಡಲು ಸಿದ್ದರಿಲ್ಲದ ಬೇಲಿಮಲ್ಲೂರು ಗ್ರಾಮಸ್ಥರ ನಡುವೆ ಒಳಜಗಳಗಳು ಉಂಟಾಗಿದೆ.