ಕೋಳಿವಾಡ ನಿವಾಸದ ಮೇಲೆ ಐಟಿ ದಾಳಿ ಪ್ರಕರಣ : ಬಿಜೆಪಿ ನಗರಸಭೆ ಸದಸ್ಯನ ವಿರುದ್ಧ ದೂರು
ರಾಣೇಬೆನ್ನೂರು ಉಪಚುನಾವಣೆ ಹಿನ್ನೆಲೆ, ನಿನ್ನೆ ಕೋಳಿವಾಡ ನಿವಾಸದಲ್ಲಿ ಹಣವಿದೆ ಎನ್ನುವ ಮಾಹಿತಿ ಮೇರೆಗೆ ಅಬಕಾರಿ ಹಾಗೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಆದರೆ ಯಾವುದೇ ಹಣ ಸಿಗದೇ ಇದ್ದ ಕಾರಣ ಸುಳ್ಳು ಮಾಹಿತಿ ನೀಡಿದ್ದ ಬಿಜೆಪಿ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಅವರ ಮೇಲೆ ದೂರು ದಾಖಲಿಸಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಮನೆಯಲ್ಲಿ ೧೦ ಕೋಟಿ ರುಪಾಯಿ ಇದೆ ಅನ್ನೋ ಮಾಹಿತಿ ನೀಡಿದ್ದ ಬಿಜೆಪಿ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ವಿರುದ್ಧ ದೂರು ದಾಖಲಾಗಿದೆ. ಸುಳ್ಳು ಮಾಹಿತಿ ನೀಡಿದ ಪ್ರಕಾಶ ಬುರಡಿಕಟ್ಟಿ ಮೇಲೆ ಚುನಾವಣೆಯ ಅಧಿಕಾರಿ ಜಿ.ದೇವರಾಜ್ ಅವರಿಂದ ಪ್ರಕಾಶ ಬುರಡಿಕಟ್ಟಿ ವಿರುದ್ದ ದೂರು ದಾಖಲಾಗಿದೆ. ಸುಳ್ಳು ಮಾಹಿತಿ ನೀಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಜಿ ದೇವರಾಜ್ ರಿಂದ ಪ್ರಕಾಶ ಬುರಡಿಕಟ್ಟಿ ಮೇಲೆ ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.