ಕೋವಿಡ್-19 ಹುಟ್ಟೂರು ಚೀನಾ ಸಹಜ ಸ್ಥಿತಿಯತ್ತ ಪಯಣ : ಶಾಲೆಗಳು ಓಪನ್

ಕೋವಿಡ್-19 ಹುಟ್ಟೂರಾದ ಚೀನಾ ಸದ್ಯ ನಿಟ್ಟುಸಿರು ಬಿಟ್ಟಿದ್ದು, ಇದೀಗ ಸಹಜ ಸ್ಥಿತಿಯತ್ತ ಮರುಕಳಿಸುತ್ತಿದ್ದು ಶಾಲೆಗಳನ್ನು ಪುನರಾರಂಭಗೊಳಿಸಿದೆ.

ಹೌದು.. ಇಡೀ ಜಗತ್ತಿಗೆ ಕೊರೊನಾ ವೈರಸ್ ನ್ನು ಹರಡಿದ ಚೀನಾ 74 ದಿನಗಳವರೆಗೂ ಲಾಕ್ ಡೌನ್ ಗೆ ಒಳಗಾಗಿತ್ತು. ಸದ್ಯ ಸಹಜ ಸ್ಥಿತಿಯತ್ತ ಮರುಕಳಿಸುತ್ತಿದೆ. ಇತ್ತೀಚೆಗಷ್ಟೇ, ಬಸ್, ಕ್ಯಾಬ್ ಸೇರಿದಂತೆ ಇತರೆ ಸಾರಿಗೆ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ನೀಡಿರುವ ಚೀನಾ, ತಿಂಗಳ ಕೊನೆಯಲ್ಲಿ ರೈಲು ಸೇವೆಯನ್ನು ಆರಂಭಿಸುವುದಾಗಿ ಹೇಳಿದೆ. ಈಗ ಕೊರೊನಾ ಹರಡುವ ಆತಂಕದ ನಡುವೆಯೂ ಹಲವೆಡೆ ಹಂತಹಂತವಾಗಿ ಶಾಲೆಗಳನ್ನು ಪುನರಾರಂಭಿಸಲು ಚಿಂತಿಸಿದೆ. ಮೊದಲ ಭಾಗವಾಗಿ, ಪೂರ್ವ ಚೀನಾದ ಹ್ಯಾಂಗ್ಝೌ ಎಂಬ ಸಿಟಿಯಲ್ಲಿ 4ರಿಂದ 6ನೇ ತರಗತಿಗಳು ಆರಂಭವಾಗಿವೆ. ಇಷ್ಟುದಿನ ಮನೆಯಲ್ಲಿದ್ದುಕೊಂಡು ಅಧ್ಯಯನ ಮಾಡುತ್ತಿದ್ದ ಮಕ್ಕಳಿಗೆ ತರಗತಿಯನ್ನು ಶುರುಮಾಡಲಾಗಿದೆ. ಇಷ್ಟುದಿನ ಬೆಚ್ಚಗೆ ಮನೆಯಲ್ಲಿದ್ದ ಮಕ್ಕಳು ಪುಸ್ತಕದ ಹೊತ್ತಿಗೆ ಹಿಡಿದು ತರಗತಿಗೆ ಹಾಜರಾಗುತ್ತಿವೆ.

ಚೀನಾದ ವುಹಾನ್​ ಪ್ರಾಂತ್ಯದಲ್ಲಿ ಮೊದಲು ಕಾಣಿಸಿಕೊಂಡಿದ್ದ ಕೊರೊನಾ ವೈರಸ್​, ಆ ದೇಶದ ನಿರ್ಲಕ್ಷದಿಂದಾಗಿ ಇಡೀ ಜಗತ್ತಿವೇ ಹರಡಿದ್ದು, ಸದ್ಯ 26 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಅಲ್ಲದೇ ಚೀನಾದ ವೈರಸ್​ ಕಾರಣದಿಂದಾಗಿ ವಿಶ್ವಾದ್ಯಂತ 1 ಲಕ್ಷ 84 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights