ಪವರ್ ಸ್ಟಾರ್ ಅಭಿನಯದ ‘ಯುವರತ್ನ’ ಏಪ್ರಿಲ್ 3ಕ್ಕೆ ತೆರೆಗೆ ಬರುವ ನಿರೀಕ್ಷೆಯಿದೆ.

ಇದೀಗ ಚಿತ್ರದ ಸಂಭಾಷಣೆ ಭಾಗ ಪೂರ್ಣಗೊಂಡಿದೆ. ಹಾಡಿನ ಭಾಗದ ಚಿತ್ರೀಕರಣ ನಡೆಯುತ್ತಿದೆ. ಕಾಲೇಜು ಹಿನ್ನಲೆಯಲ್ಲಿ ಚಿತ್ರೀಕರಿಸಲಾಗಿರುವ ಯುವರತ್ನದಲ್ಲಿ ಪುನೀತ್ ರಾಜ್ ಕುಮಾರ್ ಕಾಲೇಜು ಹುಡುಗನ ಪಾತ್ರ ನಿರ್ವಹಿಸುತ್ತಿದ್ದಾರೆ.

ಅಕ್ಟೋಬರ್ 7ರಂದು ಟೀಸರ್ ಬಿಡುಗಡೆಯಾಗಿತ್ತು. ಅದರಲ್ಲಿ ಪುನೀತ್ ರಗ್ ಬಿ ಆಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಡಿ ತಯಾರಾಗುತ್ತಿರುವ ಯುವರತ್ನಕ್ಕೆ ಎಸ್ ತಮನ್ ಸಂಗೀತ, ವೆಂಕಟ್ ಅಂಗುರಾಜ್ ಕ್ಯಾಮರಾ ಕೈಚಳಕವಿದೆ.