ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರಂಭ : ಎಡೆಬಿಡದ ವರುಣನ ಅರ್ಭಟ
ಇನ್ನೇನು ಮಳೆ ಕಡಿಮೆ ಆಯ್ತು ಎಂದು ನಿಟ್ಟುಸಿರು ಬಿಡುತ್ತಿದ್ದ ಮಲೆನಾಡಿನ ಜನ ಸೂರು ನಿರ್ಮಿಸಿಕೊಳ್ಳುತ್ತಿರುವಾಗಲೇ ಮತ್ತೆ ಆತಂಕ ಶುರುವಾಗಿದೆ.
ಹೌದು.. ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ ಆರಂಭವಾಗಿದ್ದು, ಜನ ಮತ್ತೆ ಆತಂಕಗೊಂಡಿದ್ದಾರೆ. ಬೆಳಗ್ಗೆಯಿಂದಲೇ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನ ದಿನನಿತ್ಯ ಕಾರ್ಯಗಳಿಗೆ ತೆರಳದಂತಾಗಿದೆ. ಚಿಕ್ಕಮಗಳೂರು, ಆಲ್ದೂರು, ಮೂಡಿಗೆರೆ, ಸಖರಾಯಪಟ್ಟಣ, ಕಡೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ.
ಬಯಲುಸೀಮೆ ಭಾಗದಲ್ಲೂ ವರುಣನ ಸಿಂಚನ ಶುರುವಾಗಿದೆ. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.