ಚಿತ್ರದುರ್ಗದ ತುಂಬೆಲ್ಲ ದೂಳು, ಗುಂಡಿ: ಸಾರ್ವಜನಿಕರ ಕಷ್ಟ ಕೇಳೋರೇ ಇಲ್ಲ
ಐಹಾಸಿಕ ಚಿತ್ರದುರ್ಗದ ತುಂಬ ಮುಗಿಲೆತ್ತರದ ಕೆಂದೂಳೋ ದೂಳು. ರಸ್ತೆಗಳೋ ಮೊಣಕಾಲುದ್ದದ ತಗ್ಗು ಗುಂಡಿಗಂಳು. ಇದರಲ್ಲಿ ಸಂಚರಿಸುವ ನಾಗರೀಕರು ಸಾಕಪ್ಪಾ ಈ ದೂಳಿನ ಸಹವಾಸ ಅಂತಿದ್ದಾರೆ. ಆದರೆ ಸಂಬಂದಪಟ್ಟ ಗುತ್ತಿಗೆದಾರರ ಕಿವಿ ಕೇಳದೆ, ಕಣ್ಣು ಕುರುಡಾಗಿವೆ.ಚಿತ್ರದುರ್ಗ ನಗರದಲ್ಲಿ ನ ಬೆಂಗಳೂರು ದಾವಣಗೆರೆ ರಸ್ತೆ ಅಗಲೀಕರಣ ಆಗುತ್ತಿದೆ.ರಸ್ತೆ ಅಗಲೀಕರಣಕ್ಕೆಂದು ಹಾಲಿ ಇದ್ದ ರಸ್ತೆಯನ್ನ ಜೆಸಿಬಿ ಮೂಲಕ ಹಗೆದು ಹಾಕಿದ್ದಾರೆ. ಆದರೆ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಇದನ್ನು ಕೆಲಸ ಮಾಡಿಸುತ್ತಿರುವ ಗುತ್ತಿಗೆದಾರರು ರಸ್ತೆಯಲ್ಲಿ ಎಷ್ಟೇ ದೂಳು, ಗುಂಡಿಗಳಾದರು ಅಸಡ್ಡೆಗೆ ವಹಿಸಿದ್ದಾನೆ.ಇದರಿಂದ ಚಿತ್ರದುರ್ಗದ ತುಂಬಾ ದೂಳಿನ ಮಯವಾಗಿದೆ ಹೋಗಿದ್ದು ಜನರು ಹೈರಾಣಾಗಿದ್ದಾರೆ.
ಚಿತ್ರದುರ್ಗ ಅಂತೇಳಿದ್ರೆ ಮದಕರಿ ನಾಯಕರ ಐತಿಹಾಸ, ಶೌರ್ಯ, ಪರಾಕ್ರಮೆ ,ವನಕೆ ಓಬವ್ವಳ ವೀರತ್ವ ಕೇಳಿಬರುತ್ತೆ. ಅಂತ ಹಿತೀಹಾಸ ಹೊಂದಿರುವ ಜಿಲ್ಲೆಯಲ್ಲಿರುವ ಏಳು ಸುತ್ತಿನ ಕೋಟೆಯನ್ನ ಒಮ್ಮೆಯಾದ್ರೂ ನೋಡಬೇಕು ಅಂತ ಪ್ರವಾಸಿಗರು ಆದರೆ ರಸ್ತೆಯುದ್ದಕ್ಕೂ ಮುಗಿಲೆತ್ತರಕ್ಕೆ ಹಾರುವ ಕೆಂದೂಳು ಅಸಹ್ಯ ಪಡುವಂತಾಗಿದೆ. ವಾಹನ ಸಂಚಾರದ ರಸ್ತೆಯುದ್ದಕ್ಕೂ ಹಗೆದು ಮಣ್ಣು,ಜಲ್ಲಿ ಹಾಕಲಾಗಿದೆ. ಇಲ್ಲಿನ ದೂಳಿನಿಂದ ತಪ್ಪಿಸಿಕೊಳ್ಳಲು ಜನರು ಮೂಗು ಬಿಗಿ ಹಿಡಿದು ಓಡಾಡುತ್ತಿದ್ದಾರೆ. ಅಲ್ಲದೆ ಮೊಣಕಾಲುದ್ದದ ಗುಂಡಿಗಳಿರುವ ರಸ್ತೆಗಳಲ್ಲಿ ಸಂಚಿರಿಸಲು ವಾಹನ ಸವಾರರು ಅರಸಾಹಸ ಪಡಬೇಕಾಗಿದೆ. ಕಳೆದ ನಾಲ್ಕೈದು ತಿಂಗಳುಗಳ ಹಿಂದೆ ಶುರುವಾಗಿದ್ದ ಸಿಸಿ ರಸ್ತೆ ಕಾಮಗಾರಿ ಅರ್ದಂಬರ್ಧವಾಗಿ ನಿಂತಿದೆ.
ಚಿತ್ರದುರ್ಗದ ರಸ್ತೆಗಳು ಚಿಕ್ಕವಾಗಿದ್ದರಿಂದ ನಾಲ್ಕೈದು ವರ್ಷಗಳಿಂದಲೂ ರಸ್ತೆಗಳು ದುರ್ಗಮವಾಗಿವೆ,ರಸ್ತೆ ಅಗಲೀಕರಣ ಆಗಬೇಕು ಅನ್ನುವ ಸಾರ್ವಜನಿಕರು, ಹಾಗೂ ಹಲವು ಸಂಘಟನಗಳ ಆಗ್ರಹವೂ ಪ್ರತಿಭಟನೆಗಳನ್ನ ಮಾಡಿ ರಸ್ತೆ ಅಗಲೀಕರಣಕ್ಕಾಗಿ ಒತ್ತಾಯ ಮಾಡಿದ್ದರು.ಹೀಗೆ ಹಲವರ ಹೋರಾಟಕ್ಕೆ ಮಣಿದು ಚಿದುರ್ಗ ನಗರದ ರಸ್ತೆಗಳನ್ನ ಅಗಲೀಕರಣ ಮಾಡಿ ಅಭಿವೃದ್ದಿ ಮಾಡಲು ಹೊರಟರಿರುವ ಜಿಲ್ಲಾಡಳಿತ ಕೋಟ್ಯಾಂತರ ರೂಪಾಯಿ ಅನುದಾನ ಬಳಸಿ ಸಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿ ಟೆಂಡರ್ ನೀಡಿದೆ.ಪಿಡಬ್ಲೂಡಿ ಇಲಾಖೆಯ ಸುಪರ್ದಿಯಲ್ಲಿ ಅಭಿವೃದ್ದಿಗಾಗಿ ರಸ್ತೆ ಕಾಮಗಾರಿಗೆ ನಡೆಯುತ್ತಿ.
ಅದಕ್ಕಾಗಿ ನಗರದ ಪ್ರಮುಖ ರಸ್ತೆಗಳನ್ನ ಹಗೆದು, ಬಗೆದು, ಕಾಮಾಗಿರಿ ಪ್ರಾರಂಭ ಮಾಡಿದ್ದಾರೆ.ಆದರೆ ಇದೀಗ ಅದೇ ರಸ್ತೆಗಳಲ್ಲಿ ಎಲ್ಲಾ ವಾಹನಗಳು ಸಂಚರಿಸುತ್ತಿವೆ. ಈ ಸಂಚಾರದ ರಭಸಕ್ಕೆ ರಸ್ತೆಯ ಕೆಂದೂಳು, ಮುಗಿಲೆತ್ತರಕ್ಕೆ ಹಾರುತ್ತಿದೆ. ಇದರ ಪರಿಣಾಮ ಜನರು ಆನಾರೋಗ್ಯಕ್ಕೆ ತುತ್ತಾಗುವಂತ ಸಂದರ್ಭಗಳು ಹೆಚ್ಚುತ್ತಿವೆ.ಅಲ್ಲದೆ ರಸ್ತೆಯ ಗುಂಡಿಗಲಕನ್ನೂ ಮುಚ್ಚದೆ ಗುತ್ತಿಗೆದಾರು ನಿರ್ಲಕ್ಷ ವಹಿಸಿದ್ದಾರೆ.ಸಾರ್ವಜನಿಕರ ಹಿತ ದೃಷ್ಠಿಯಿಂದ ರಸ್ತೆಯಲ್ಲಿನ ದೂಳು ಅಡಗಿಸಲು ಟ್ಯಾಂಕರ್ ಮೂಲಕ ದಿನಕ್ಕೆ ಮೂರು ಬಾರಿಯಾದರೂ ರಸ್ತೆಗಳಿಗೆ ನೀರು ಹಾಕಬೇಕು. ಸಮಯಕ್ಕೆ ಸರಿಯಾಗಿ ಆ ಕೆಲಸವನ್ನೂ ಮಾಡದೆ, ಇತ್ತ ಕಾಮಗಾರಿಯನ್ನೂ ವಿಳಂಬ ಮಾಡುತ್ತಿದ್ದಾರೆ.ದಿನವಿಡೀ ಹಾರುವ ಕೆಂದೂಳು ರಸ್ತೆಯ ಅಕ್ಕ ಪಕ್ಕದ ಮನೆಗಳಿಗೆ ನುಗ್ಗುತ್ತಿದೆ.ಈ ರಸ್ತೆ ನಿರ್ಮಾಣದ ಅವದಿ ಮುಗಿಯುತ್ತಾ ಬಂದರೂ ಕಾಮಗಾರಿ ಮಾತ್ರ ಪ್ರಗತಿ ಕಂಡಿಲ್ಲ.
ಇದ್ರಿಂದ ಬೇಸತ್ತಿರುವ ಸಾರ್ವಜನಿಕರು ಜಿಲ್ಲಾಡಳಿತ ಹಾಗೂ ಗುತ್ತಿಗೆದಾರರಿಗೆ ಹಿಂಡಿ ಶಾಪ ಹಾಕುತ್ತಿದ್ದಾರೆ. ಇನ್ನೂ ನಗರದ ಪ್ರತಿ ಗಲ್ಲಿ ಗಲ್ಲಿಯಲ್ಲೂ ಇದೇ ರಸ್ತೆಗಳಿದ್ದು, ಸಂಚರಿಸುವ ಪ್ರಯಾಣಿಕರು ಮಾತ್ರ ಮೂಗು ಮುಚ್ಕೊಂಡೆ ಓಡಾಡುತ್ತಿದ್ದಾರೆ.ಕಾಮಗಾರಿ ಪ್ರಾರಂಭಿಸಿ ವರ್ಷವೇ ಕಳೆಯುತ್ತಿದ್ದರೂ ಕಾಮಗಾರಿ ಮಾತ್ರ ಅಪೂರ್ಣವಾಗಿದೆ. ಗುತ್ತಿಗೆದಾರರ ಈ ನಿರ್ಲಕ್ಷ ಸಾರ್ವಜನಿಕರನ್ನ ಅನಾರೋಗ್ಯದತ್ತ ದೂಡುತ್ತಿದೆ. ಇಷ್ಟೆಲ್ಲಾ ಸಮಸ್ಯಗಳಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.ಹಾಗಾಗಿ ಸಮಸ್ಯೆ ಅನುಭವಿಸಿ ರೋಸಿದ್ದಾರ .
ಅಲ್ಲದೆ ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆ ಚಿತ್ರದುರ್ಗದಲ್ಲಿ ಎದ್ದು ಕಾಣುತ್ತಿದೆ ಅವರೂ ಕೂಡಾ ಕಾಮಗಾರಿ ಪೂರ್ಣ ಗೊಳಿಸಿ ಅಂತ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ ಅಂತ ಅಸಮದಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಕೋಟೆನಾಡಲ್ಲಿ ದುರ್ಗಮ ರಸ್ತೆಗಳಿಂದ, ಪ್ರಯಾಣಿಕರು, ಸಾರ್ವಜನಿಕರು ಹೈರಾಣಾಗಿದ್ದು, ಇಲ್ಲಿ ಬರುವ ಪ್ರವಾಸಿಗರ ಪರಿಸ್ಥಿತಿಯಂತೋ ಹೇಳತೀರದಾಗಿದೆ. ಇತಿಹಾಸಕ್ಕೆ ಪ್ರಸಿದ್ದವಾಗಿದ್ದ ದುರ್ಗ ಈಗ ದೂಳು ದುರ್ಗವಾಗಿದೆ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೇತ್ತುಕೊಂಡು ದುರ್ಗದ ರಸ್ತೆಗಳನ್ನ ಸರಿಪಡಿಸಿ, ಅರ್ದಕ್ಕೆ ನಿಂತಿರುವ ರಸ್ತೆಗಳನ್ನ ಪೂರ್ಣಗೊಳಿಸಿ ಸಾರ್ವಜನಿಕರಿಗೆ ನೆಮ್ಮದಿ ನೀಡಬೇಕಿದೆ.