ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ : ಸಿಎಂ ಯಡಿಯೂರಪ್ಪ ವಿರುದ್ದ ದೂರು ದಾಖಲು…!
ರಾಣೆಬೆನ್ನೂರಿನ ಶಹರ ಪೊಲೀಸ್ ಠಾಣೆಯಲ್ಲಿ ಸಿಎಂ ಯಡಿಯೂರಪ್ಪ ವಿರುದ್ದ ದೂರು ಎಫ್ ಎಸ್ ಟಿ ಟೀಮ್ ದೂರು ದಾಖಲಿಸಿದೆ.
ಹೌದು… ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ದೂರು ದಾಖಲಾಗಿದೆ. ಡಿಸೆಂಬರ್ 4 ರಂದು ರಾಣೆಬೆನ್ನೂರಿನ ಶಹರ ಪೊಲೀಸ್ ಠಾಣೆಯಲ್ಲಿ ಜಿ ದೇವರಾಜ್ ಎಫ್ ಎಸ್ ಟಿ ಮುಖ್ಯಸ್ಥ ರಿಂದ ಸಿಎಂ ವಿರುದ್ಧ ದೂರು ದಾಖಲಾಗಿದೆ.ನವಂಬರ್ 24 ರಂದು ರಾಣೆಬೆನ್ನೂರಿನಲ್ಲಿ ನಡೆದ ಬಿಜೆಪಿ ಪ್ರಚಾರ ಭಾಷಣದಲ್ಲಿ ಆರ್ ಶಂಕರ್ಗೆ ಎಂ ಎಲ್ ಸಿ ಮಾಡಿ ಸಚಿವರನ್ನಾಗಿ ಮಾಡೋದು ನನ್ನ ಜವಾಬ್ದಾರಿ ಎಂದಿದ್ದರು.
ಸಿಎಂ ಯಡಿಯೂರಪ್ಪ ರಾಣೆಬೆನ್ನೂರಿನ ನಗರಸಭಾ ಕ್ರೀಡಾಂಗಣದಲ್ಲಿ ಪ್ರಚಾರದ ಸಂಬಂದ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ. ಮತದಾರರ ಮೇಲೆ ಅನೂಚಿತ ಪ್ರಭಾವ ಬೀರುವಂತೆ ಬಹಿರಂಗವಾಗಿ ಭಾಷಣ ಮಾಡಿದ್ದಾರೆಂದು ಅಪರಾಧ ಸಂಖ್ಯೆ 180/2019 ಕಲಂ 171(ಸಿ) ಐಪಿಸಿ ಮತ್ತು 123 ಆರ್ ಪಿ ಆಕ್ಟ್ 1951 ಪ್ರಕಾರ ಪ್ರಕರಣ ದಾಖಲಾಗಿದೆ.