ಜಾರ್ಖಂಡ್ ನಲ್ಲೂ ‘ಗೋ ಬ್ಯಾಕ್ ಮೋದಿ’ ಟ್ರೆಂಡಿಂಗ್ : ನಮೋರನ್ನು ಟೀಕಿಸಿದ 50 ಸಾವಿರ ಟ್ವೀಟ್‌ಗಳು
ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಇಂದು ಜಾರ್ಖಂಡ್‌ಗೆ ಪ್ರವಾಸ ಬೆಳೆಸಿದ್ದಾರೆ. ಆದರೆ ಜಾರ್ಖಂಡ್ ಜನರು ಕೂಡ ತಮಿಳುನಾಡು ಹಾದಿಯನ್ನು ತುಳಿದಿದ್ದು ಅಲ್ಲೂ ಗೋ ಬ್ಯಾಕ್ ಮೋದಿ ಎನ್ನುವ ಮೂಲಕ ಟ್ವಿಟ್ಟರ್ ಟ್ರೆಂಡಿಂಗ್ ಮಾಡಿದ್ದಾರೆ.
ಇಂದು ಟ್ವಿಟ್ಟರ್‌ನಲ್ಲಿ Go Back Modi ಎಂದು ಬರೋಬ್ಬರಿ 50 ಸಾವಿರ ಟ್ವೀಟ್‌ಗಳು ದಾಖಲಾಗಿವೆ. ಚುನಾವಣಾ ಬಾಂಡ್‌ಗಳ ದುರ್ಬಳಕೆ, ಮಹಾರಾಷ್ಟ್ರದಲ್ಲಿನ ಸರ್ಕಾರ ರಚನೆಯಲ್ಲಿನ ಗೊಂದಲಗಳು, ಜಾರ್ಖಂಡ್‌ನಲ್ಲಿನ ಹಸಿವು ಇತ್ಯಾದಿಗಳ ವಿಚಾರ ಇಟ್ಟುಕೊಂಡು ನರೇಂದ್ರ ಮೋದಿಯವರನ್ನು ಟೀಕಿಸಲಾಗಿದೆ.
ಈ ರೀತಿ ಟ್ರೆಂಡಿಂಗ್ ಆಗಿರುವುದನ್ನು ನೋಡಿ ಬಹಳಷ್ಟು ಜನ ನರೇಂದ್ರ ಮೋದಿಯವರು ತಮಿಳುನಾಡಿಗೆ ಹೋಗುತ್ತಿದ್ದಾರೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆನಂತರ ಓಹ್ ಜಾರ್ಖಂಡ್ ಕೂಡ ತಮಿಳುನಾಡು, ಕೇರಳದ ದಾರಿ ಹಿಡಿಯತೆ ಎಂದು ವ್ಯಂಗ್ಯವಾಡಿದ್ದಾರೆ.
Picture says it all!! Now the #GoBackModi wave has passed on to Jharkhand… Quite unexpected though!!????#GoBackModi pic.twitter.com/Xd4sEXe6mL
— Som (@Som_nsk) November 25, 2019
ಈ ಕುರಿತ ಟ್ವಿಟ್ಟರ್‌ನಲ್ಲಿ ಬಹಳಷ್ಟು ಮೀಮ್ಸ್‌ಗಳು ಹರಿದಾಡುತ್ತಿವೆ. ಗೋ ಬ್ಯಾಕ್ ಮೋದಿ ಎನ್ನುವುದು ಭಾರತ ಮತ್ತು ಪ್ರಪಂಚ ಎರಡೂ ವಿಭಾಗದಲ್ಲಿ ಟ್ರೆಂಡಿಂಗ್ ಆಗಿದೆ. ಇದೇ ನವೆಂಬರ್ 30ರಿಂದ ಆರಂಭವಾಗಲಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯು ಒಟ್ಟು 81 ಕ್ಷೇತ್ರಗಳಿಗೆ 5 ಹಂತದಲ್ಲಿ ಚುನಾವಣೆ ನಡೆಯಲಿದೆ.