ಜಿಯೋದಲ್ಲಿ ಕೆಕೆಆರ್ ಹೂಡಿಕೆ : ಸಂತಸ ವ್ಯಕ್ತಪಡಿಸಿದ ಮುಕೇಶ್ ಅಂಬಾನಿ…

ಫೇಸ್​ಬುಕ್, ಸಿಲ್ವರ್ ಲೇಕ್ ಪಾರ್ಟ್ನರ್ಸ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್, ಜನರಲ್ ಅಟ್ಲಾಂಟಿಕ್ ಸಂಸ್ಥೆಗಳು ಜಿಯೋದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ ಬೆನ್ನಲ್ಲೆ ಇದೀಗ ಕೆಕೆಆರ್ ಇನ್ವೆಸ್ಟ್​​ಮೆಂಟ್ ಕಂಪನಿಯ ಬಂಡವಾಳ ಸೆಳೆದಿದೆ.

ಹೌದು… ಅಮೆರಿಕಾ ಮೂಲದ ಖಾಸಗಿ ಇಕ್ವಿಟಿ ಸಂಸ್ಥೆ ಕೆಕೆಆರ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 2.32% ಪಾಲನ್ನು ಖರೀದಿಸಲಿದ್ದು 11367 ಕೋಟಿ ರೂ ಹೂಡಿಕೆ ಮಾಡಲಿದೆ. ಈಗಾಗಲೇ ಹೂಡಿಕೆ ಮಾಡಿದ  ಐದು ಕಂಪನಿಗಳಿಂದ ಜಿಯೋಗೆ ಬರೋಬ್ಬರಿ 78,562 ಕೊಟಿ ರೂ ಹರಿದುಬರಲಿದೆ. ಅಮೆರಿಕ ಮೂಲದ ಕೆಕೆಆರ್ ಇದೀಗ ಜಿಯೋದಲ್ಲಿ ಶೇ. 2.32ರಷ್ಟು ಪಾಲು ಖರೀದಿಸಲಿದೆ. ಅಂದರೆ, ವಿವಿಧ ಜಿಯೋ ಪ್ಲಾಟ್​ಫಾರ್ಮ್​ಗಳಲ್ಲಿ ಸುಮಾರು 11,367 ಕೋಟಿ ರೂ ಬಂಡವಾಳ ಹೂಡಲಿದೆ.

ಇದೇ ಹಣಕಾಸು ವರ್ಷಾಂತ್ಯದಲ್ಲಿ ಜಿಯೋಗೆ 1.61 ಲಕ್ಷ ಕೋಟಿ ಸಾಲ ಇತ್ತು. ರಿಲಾಯನ್ಸ್ ಜಿಯೋ ಸಂಸ್ಥೆ ಸಾಲಮುಕ್ತವಾಗುವ ಗುರಿಯಿಟ್ಟುಕೊಂಡು ಆ ನಿಟ್ಟಿನಲ್ಲಿ ಮತ್ತೊಂದು ಗಮನಾರ್ಹ ಹೆಜ್ಜೆ ಇಟ್ಟಿದೆ. ಫೇಸ್​ಬುಕ್ ಸೇರಿದಂತೆ ನಾಲ್ಕು ಪ್ರಮುಖ ಕಂಪನಿಗಳಿಂದ ಹೂಡಿಕೆ ಆಕರ್ಷಿಸಿದ್ದ ರಿಲಾಯನ್ಸ್ ಇಂಡಸ್ಟ್ರೀಸ್ ಇದೀಗ ಕೆಕೆಆರ್ ಇನ್ವೆಸ್ಟ್​​ಮೆಂಟ್ ಕಂಪನಿಯ ಬಂಡವಾಳ ಸೆಳೆದಿದೆ.

ಅಮೆರಿಕದ ಕೆಕೆಆರ್ ಸಂಸ್ಥೆ 1976ರಲ್ಲಿ ಸ್ಥಾಪನೆಗೊಂಡಿದೆ. ಜೊತೆಗೆ ವಿಶ್ವದ ಅನೇಕ ಪ್ರಮುಖ ಕಂಪನಿಗಳಿಗೆ ಬಂಡವಾಳ ಹಾಕಿ ನೆರವು ನೀಡುತ್ತಾ ಬಂದಿದೆ.  ಕೆಕೆಆರ್ ಈವರೆಗೆ ವಿಶ್ವದ ವಿವಿಧ ತಂತ್ರಜ್ಞಾನ ಸಂಸ್ಥೆಗಳಲ್ಲಿ 30 ಬಿಲಿಯನ್ ಡಾಲರ್ ಹಣ ಹೂಡಿಕೆ ಮಾಡಿದೆ. ಬಿಎಂಸಿ ಸಾಫ್ಟ್​ವೇರ್, ಬೈಟ್​ಡ್ಯಾನ್ಸ್ ಮೊದಲಾದ ಕಂಪನಿಗಳು ಕೆಕೆಆರ್​ನ ಹೂಡಿಕೆಯ ಲಾಭ ಪಡೆದಿವೆ. ಅಂದಹಾಗೆ, ಏಷ್ಯಾದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಕೆಆರ್ ಹೂಡಿಕೆ ಮಾಡಿರುವುದು ಇದೆ ಮೊದಲು. ಇದೇ ವೇಳೆ, ಜಿಯೋದಲ್ಲಿ ಕೆಕೆಆರ್ ಹೂಡಿಕೆ ಮಾಡುವ ನಿರ್ಧಾರಕ್ಕೆ ಆರ್​ಐಎಲ್ ಛೇರ್ಮನ್ ಮುಕೇಶ್ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.