ಜೆಡಿಎಸ್ ಮುಖಂಡನ ಅಂತಿಮ‌ ದರ್ಶನ ಪಡೆದ ಮಾಜಿ ಸಿ‌.ಎಂ.HDK….

ನೆನ್ನೆ ಅನಾರೋಗ್ಯದಿಂದ ನಿಧನರಾಗಿದ್ದ ಜೆಡಿಎಸ್ ಮುಖಂಡ ವೆಂಕಟಸುಬ್ಬೇಗೌಡರ ಅಂತಿಮ‌ ದರ್ಶನವನ್ನು ಇಂದು ಮಾಜಿ ಸಿಎಂ ಕುಮಾರಸ್ವಾಮಿ ಪಡೆದಿದ್ದಾರೆ.

ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಅಧ್ಯಕ್ಷರಾಗಿದ್ದ ವೆಂಕಟಸುಬ್ಬೇಗೌಡ ಸ್ವಗ್ರಾಮ ಕೆ.ಆರ್.ಪೇಟೆಯ ಅಗ್ರಹಾರ ಚಾಚಹಳ್ಳಿ ಗ್ರಾಮದಲ್ಲಿ ನಿಧನರಾಗಿದ್ದರು. ಕುಮಾರಸ್ವಾಮಿ ಇಂದು ಗ್ರಾಮಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.

ಅಗಲಿದ ಜೆಡಿಎಸ್ ಮುಖಂಡನ ಕುಟುಂಬಕ್ಕೆ ಸಾಂತ್ವನ ಹೇಳಿ ಭರವಸೆ ನೀಡಿದರು. ಮಾಜಿ ಸಿ‌.ಎಂ. ಜೊತೆ ತಾಲೂಕಿನ ಜೆಡಿಎಸ್ ಮುಖಂಡರು ಕೂಡ ಅಗಲಿದ ತಮ್ಮ ಪಕ್ಷದ ಮುಖಂಡ ವೆಂಕಟಸುಬ್ಬೇಗೌಡ ರ ಅಂತಿಮ ದರ್ಶನ ಪಡೆದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights