ಜೋರಾಗಿ ನಡೆದ ಕೃಷ್ಣ ಜನ್ಮಾಷ್ಠಮಿ ತಯಾರಿ : ಪುಟಾಣಿ ಮಕ್ಕಳು ಕೃಷ್ಣ-ರಾಧೆಯಾಗಿ ಮಿಂಚಲು ಸಿದ್ಧ
ಆಗಸ್ಟ್ 23 ಮತ್ತು 24ರಂದು ಕೃಷ್ಣ ಜನ್ಮಾಷ್ಠಮಿ ಆಚರಿಸಲಾಗ್ತಿದೆ. ಕೃಷ್ಣ ಜನ್ಮಾಷ್ಠಮಿಗೆ ತಯಾರಿ ಜೋರಾಗಿ ನಡೆಯುತ್ತಿದೆ. ದೇವಸ್ಥಾನಗಳಿಂದ ಹಿಡಿದು ಶಾಲೆ, ಸಂಘ-ಸಂಸ್ಥೆಗಳಲ್ಲಿ ಅನೇಕ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಕ್ಕಳು ಪುಟಾಣಿ ಕೃಷ್ಣ-ರಾಧೆಯಾಗಿ ಮಿಂಚಲು ಸಿದ್ಧರಾಗಿದ್ದಾರೆ. ನೀವೂ ನಿಮ್ಮ ಮಗುವಿಗೆ ರಾಧೆ ಅಲಂಕಾರವನ್ನು ಈ ರೀತಿ ಮಾಡಿ.
ಮಕ್ಕಳಿಗೆ ಹೆಚ್ಚಿನ ಮೇಕಪ್ ಮಾಡಬೇಡಿ. ಅವ್ರ ಚರ್ಮ ಸೂಕ್ಷ್ಮವಾಗಿರುವ ಕಾರಣ ಮೇಕಪ್ ಮಕ್ಕಳ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಮುಖಕ್ಕೆ ಮಾಯಿಶ್ಚರೈಸರ್ ಕ್ರೀಂ ಹಚ್ಚಿ ನಂತ್ರ ಲೈಟ್ ಪೌಂಡೇಶನ್ ಅಥವಾ ಟಾಲ್ಕಮ್ ಪೌಡರ್ ಮಿಕ್ಸ್ ಮಾಡಿ ಬೇಸ್ ತಯಾರಿಸಿ. ನಂತ್ರ ಮಕ್ಕಳ ಮುಖಕ್ಕೆ ಹಚ್ಚಿ.
ಮಗುವಿನ ಬಳಿ ಲೆಹಂಗಾ ಇದ್ರೆ ಒಳ್ಳೆಯದು. ಇಲ್ಲವೆಂದ್ರೆ ಕೆಂಪು, ಹಳದಿ ಬಣ್ಣದ ಲೆಹಂಗಾ ಖರೀದಿ ಮಾಡಿ. ಥ್ರೆಡ್ ಕಸೂತಿ ಮತ್ತು ಕನ್ನಡಿ ಇದ್ರೆ ಒಳ್ಳೆಯದು.ಕೆಂಪು ಬಣ್ಣದ ಅಥವಾ ಡ್ರೆಸ್ ಗೆ ಹೊಂದುವ ದುಪಟ್ಟಾವನ್ನು ಮಗುವಿಗೆ ಹಾಕಿ. ಅದನ್ನು ಸೀರೆ ಸೆರಗಿನಂತೆ ಹಾಕಿ ತಲೆ ಮೇಲೆ ಹೊದಿಸಬಹುದು. ಇಲ್ಲವೆಂದ್ರೆ ತಲೆಗೆ ಹಾಕಿ ಕೈ ಬಳೆಗಳಿಗೆ ಕಟ್ಟಬಹುದು. ಮಗುವಿಗೆ ಯಾವುದು ಸುಂದರವಾಗಿ ಕಾಣುತ್ತದೆ ಎಂಬುದನ್ನು ನೋಡಿ ಹಾಕಿ.
ತಲೆಗೆ ಹಾಕಲು ಕಿರೀಟ ಅಥವಾ ಹಣೆ ಪಟ್ಟಿಯನ್ನು ಹಾಕಿ. ಸಿಗಲಿಲ್ಲವೆಂದ್ರೆ ನೀವು ಟೀಕಾ ಖರೀದಿ ಮಾಡಬಹುದು. ಇದ್ರಲ್ಲಿ ಒಂದನ್ನು ಅವಶ್ಯಕವಾಗಿ ಖರೀದಿ ಮಾಡಿ. ಇಲ್ಲವೆಂದ್ರೆ ಮಗಳು ಸುಂದರವಾಗಿ ಕಾಣುವುದಿಲ್ಲ. ಬಾಜುಬಂದಿಯನ್ನು ನೀವು ಮಗುವಿಗೆ ಹಾಕಿ. ಇದು ಇಲ್ಲವೆಂದ್ರೆ ಕಟ್ಟುವಂತಹ ಹಣೆ ಪಟ್ಟಿಯನ್ನೇ ಬಳಸಬಹುದು. ಮಕ್ಕಳ ಕಿವಿ ಮುಚ್ಚುತ್ತಿದ್ದರೆ ಓಕೆ. ಇಲ್ಲವೆಂದ್ರೆ ಸುಂದರ ಕಿವಿಯೋಲೆಯನ್ನು ಹಾಕಿ. ಮಗು ತುಂಬಾ ಚಿಕ್ಕದಿದ್ದರೆ ನೀವು ಬಿಂದಿಯನ್ನು ಬಳಸಬಹುದು.
ಹೆಣ್ಣು ಮಕ್ಕಳ ಕಾಲಿಗೆ ಕಾಲ್ಗೆಜ್ಜೆಯನ್ನು ಅವಶ್ಯಕವಾಗಿ ಹಾಕಿ. ಮಕ್ಕಳು ಎಷ್ಟು ಸುಂದರವಾಗಿ ಸಿದ್ಧವಾಗಿದ್ದರೂ ಗಲ್ ಗಲ್ ಶಬ್ದವಿಲ್ಲದೆ ಹೋದ್ರೆ ಸೌಂದರ್ಯ ಸೆಳೆಯುವುದಿಲ್ಲ. ಮಕ್ಕಳಿಗೆ ಸುಂದರ ಬಳೆಗಳನ್ನು ಖರೀದಿ ಮಾಡಿ. ಸಣ್ಣ ಮಕ್ಕಳಾಗಿದ್ದರೆ ಬಣ್ಣ ಬಣ್ಣದ ಪ್ಲಾಸ್ಟಿಕ್ ಬಳೆಗಳನ್ನು ನೀವು ಖರೀದಿ ಮಾಡಬಹುದು. ಸೊಂಟದ ಪಟ್ಟಿ ಕೂಡ ಅವಶ್ಯಕವಾಗಿ ಬೇಕು. ಮಕ್ಕಳು ಸಿದ್ಧವಾದ್ಮೇಲೆ ಅವ್ರ ಸೊಂ ಟಕ್ಕೆ ಪಟ್ಟಿ ಕಟ್ಟಿ.