ಜ.12ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಕಿಚ್ಚ ಸುದೀಪ್ ನಟಿಸಿರುವ ಪೈಲ್ವಾನ್ ಸಿನಿಮಾ
ಜೀ ಕನ್ನಡ ವಾಹಿನಿಯೂ ಹಲವಾರು ಜನಪ್ರಿಯ ರಿಯಾಲಿಟಿ ಶೋಗಳು, ಧಾರಾವಾಹಿಗಳ ಮೂಲಕ ಮನೆ ಮನ ತಲುಪುವುದರಲ್ಲಿ, ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಹೊಸ ಮೈಲುಗಲ್ಲುಗಳನ್ನ ಸೃಷ್ಟಿಸುತ್ತಲೇ ಬಂದಿದೆ. ಹೊಸ ಬಗೆಯ ಮನೋರಂಜನಾತ್ಮಕ ಕಾರ್ಯಕ್ರಮಗಳ ಜೊತೆಗೆ ಮನೆ ಮಂದಿಯೆಲ್ಲಾ ಕೂತು ನೋಡಬಹುದಾದ ಅತ್ಯುತ್ತಮ ಧಾರಾವಹಿಗಳನ್ನ ಪ್ರಸಾರ ಮಾಡುತ್ತ, ಸದ್ಯ ಎಲ್ಲರ ಬಾಯಲ್ಲು ಪ್ರಶಂಸೆಯನ್ನ ಪಡೆಯುತ್ತಿದೆ. ರಿಯಾಲಿಟಿ ಶೋಗಳು, ಧಾರಾವಾಹಿಗಳ ಜೊತೆಗೆ ಕನ್ನಡಿಗರು ಇಷ್ಟ ಪಡುವ, ಅವ್ರ ಅಭಿರುಚಿಗೆ ತಕ್ಕನಾದ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾಗಳನ್ನೂ ಪ್ರಸಾರ ಮಾಡುತ್ತಿದೆ. ಸಿನಿಮಾ ಆಯ್ಕೆಗಳ ವಿಚಾರದಲ್ಲೂ ಜೀ ಕನ್ನಡ ತನ್ನದೇ ಆದ ದಾಖಲೆಗಳನ್ನ ಸೃಷ್ಟಿ ಮಾಡಿದೆ.
ಹೊಚ್ಚ ಹೊಸ ಸಿನಿಮಾಗಳನ್ನ ಜನರಿಗೆ ತಲುಪುವಲ್ಲಿ ಹೆಚ್ಚು ಯಶಸ್ಸುಕಂಡಿರುವ ಜೀ ಕನ್ನಡ ವಾಹಿನಿಯೂ, ಚಲನಚಿತ್ರಗಳ ಟಿವಿ ಪ್ರಸಾರದಲ್ಲಿ ೨ ಮಹತ್ಮದ ದಾಖಲೆಗಳನ್ನ ಮಾಡಿದೆ. ಇಲ್ಲಿಯವರೆಗೂ ಕನ್ನಡದ ಯಾವೊಂದು ಸಿನಿಮಾವೂ ಗಳಿಸದ ಗರಿಷ್ಟ ಟಿವಿಆರ್(೨೧ ಟಿವಿಆರ್) ಗಳಿಸಿದ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಅಭಿನಯದ, ದೊಡ್ಮನೆ ಹುಡುಗ ಸಿನಿಮಾ ಗಳಸಿತ್ತು, ಇದಾದ ನಂತ್ರ ಇತ್ತೀಚೆಗೆ ತೆರೆಕಂಡು ಜನರ ಮೆಚ್ಚುಗೆ ಗಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರವನ್ನ ಪ್ರಸಾರ ಮಾಡಿ ಮತ್ತೊಂದು ದಾಖಲೆ ಮಾಡಿದೆ. ಕುರುಕ್ಷೇತ್ರ ಸಿನಿಮಾ ಕೂಡ ೧೯.೫ ಟಿವಿಆರ್ನ ಜೊತೆಗೆ ಹೊಸ ದಾಖಲೆಯನ್ನೂ ಬರೆದಿದೆ. ಈಗ ಈ ಸಾಲಿಗೆ ಸೇರಲು ಮತ್ತೊಂದು ಸಿನಿಮಾ ರೆಡಿಯಾಗಿದೆ.
ನಾಲ್ಕು ಭಾಷೆಗಳಲ್ಲಿ ತೆರೆಕಂಡು, ಭರ್ಜರಿ ಯಶಸ್ಸು ಕಂಡಿರೋ ಕಿಚ್ಚ ಸುದೀಪ್ ನಟಿಸಿರುವ ಪೈಲ್ವಾನ್ ಸಿನಿಮಾ ಇದೇ ಭಾನುವಾರ ಜನವರಿ ೧೨ರಂದು, ಸಂಜೆ ೭ಕ್ಕೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಪ್ರಸಾರವಾಗ್ತಾ ಇದೆ. ಕಿಚ್ಚ ಸುದೀಪ್ ತಮ್ಮ ವೃತ್ತಿ ಬದುಕಿನ ವಿಶೇಷ ಸಿನಿಮಾ ಅಂತಲೇ ಹೇಳಿರೋ ಪೈಲ್ವಾನ್ ಸಿನಿಮಾವನ್ನ ನೋಡಲು ಕಿಚ್ಚನ ಅಭಿಮಾನಿಗಳು ಕಾತುರರಾಗಿದ್ದಾರೆ. ಕನ್ನಡದ ಮೊಟ್ಟ ಮೊದಲ ಬಿಗ್ ಬಜೆಟ್ ಸ್ಪೋರ್ಟ್ಸ್ ಡ್ರಾಮಾ ಆಗಿರೋ ಪೈಲ್ವಾನ್ ಸಿನಿಮಾವನ್ನ ಈಗಾಗ್ಲೆ ಥಿಯೇಟರ್ನಲ್ಲಿ ನೋಡಿರೋ ಚಿತ್ರರಸಿಕರು ಮತ್ತೊಮ್ಮೆ ಟಿವಿಯಲ್ಲಿ ಕುಟುಂಬ ಸಮೇತರಾಗಿ ನೋಡಲು ಉತ್ಸುಕರಾಗಿದ್ದಾರೆ. ಸ್ಪೋರ್ಟ್ಸ್ ಡ್ರಾಮಾ ಆಗಿದ್ರು ಎಮೋಷನ್ ಹಾಗೂ ರೊಮ್ಯಾನ್ಸ್ ನಿಂದ ಕೂಡಿರೋ ಸಿನಿಮಾವನ್ನ ಮನೆ ಮಂದಿಯೆಲ್ಲಾ ಕೂತು ನೋಡಿ ಎಂಜಾಯ್ ಮಾಡಬಹುದು.
ಗಜಕೇಸರಿ, ಹೆಬ್ಬುಲಿ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ಕಿಟ್ಟಪ್ಪ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿರೋ ಬಿಗೆಸ್ಟ್ ಆಕ್ಷನ್ ಎಂಟರ್ಟೈನರ್ ಪೈಲ್ವನ್. ಪೈಲ್ವಾನ್ ಸಿನಿಮಾ ಮೂಲಕ ಬಾಲಿವುಡ್ನ ಖ್ಯಾತ ನಟ ಸುನೀಲ್ ಶೆಟ್ಟಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಸುದೀಪ್ ಹಾಗೂ ಸುನೀಲ್ ಶೆಟ್ಟಿ ಕಾಂಬಿನೇಷನ್ನ ತೆರೆ ಮೇಲೆ ನೋಡೋದೇ ಚಂದ, ಇನ್ನು ಸುದೀಪ್ ಹಾಗೂ ಬಾಲಿವುಡ್ ನಟಿ ಆಕಾಂಕ್ಷ ಸಿಂಗ್ ರೊಮ್ಯಾನ್ಸ್ ಕಣ್ ತಂಪು ಮಾಡಲಿದೆ. ಉಳಿದಂತೆ ಸಿನಿಮಾದಲ್ಲಿ ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ, ಕಾಮಿಡಿ ಕಿಲಾಡಿ ಖ್ಯಾತಿಯ ನಟ ಅಪ್ಪಣ್ಣ, ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾಕ್ಕಿದ್ದು, ಅರ್ಜುನ್ ಜನ್ಯಾ ಮ್ಯೂಸಿಕ್ ನ ಹಾಡುಗಳು ಪ್ಲಸ್ ಪಾಯಿಂಟ್. ಬಾಲಿವುಡ್, ಹಾಲಿವುಡ್ ಸಿನಿಮಾಗಳಿಗೆ ಯಾವುದರಲ್ಲೂ ಕಮ್ಮಿ ಇಲ್ಲವೆಂಬಂತೆ ಇರೋ ಪೈಲ್ವಾನ್ ಸಿನಿಮಾವನ್ನ ಇದೇ ಭಾನುವಾರ ಜನವರಿ 12ರಂದು ಸಂಜೆ 7ಕ್ಕೆ ಪ್ರಸಾರವಾಗ್ತಾ ಇದೆ.

