ಟ್ರಂಪ್ “ದಾನ” ನೀಡುತ್ತೇನೆಂದ 200 ವೆಂಟಿಲೇಟರ್ ಗಳಿಗೆ ಭಾರತ 19.2 ಕೋಟಿ ವ್ಯಯಿಸಬೇಕು: ವರದಿ

ಅಮೆರಿಕಾ ಭಾರತಕ್ಕೆ “ದಾನ” ನೀಡಲಿರುವ ಪ್ರತಿ ವೆಂಟಿಲೇಟರ್ ಗೆ ಭಾರತ ಸುಮಾರು 10 ಲಕ್ಷ ವ್ಯಯಿಸಬೇಕಾಗಬಹುದು. ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ಪ್ರಕಾರ ಅಮೆರಿಕಾ ಅಂತಹ 200 ವೆಂಟಿಲೇಟರ್ ಗಳನ್ನು ವಿಮಾನದಲ್ಲಿ ಸಾಗಿಸಲಿದೆ.

ಈ ವೆಂಟಿಲೇಟರ್ ಗಳು ಮೇ ಅಂತ್ಯಕ್ಕೆ ಅಥವಾ ಜೂನ್ ಮೊದಲಾರ್ಧದಲ್ಲಿ ಭಾರತವನ್ನು ತಲುಪಲಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.

“ಪ್ರತಿ ವೆಂಟಿಲೇಟರ್ ಗೆ ಸುಮಾರು 9.6 ಲಕ್ಷ ವೆಚ್ಚವಾಗಲಿದೆ. ಆದುದರಿಂದ 200 ವೆಂಟಿಲೇಟರ್ ಗಳಿಗೆ ಭಾರತ 19.2 ಕೋಟಿ ರೂ ಮತ್ತು ಸಾಗಾಣೆ ವೆಚ್ಚ ಭರಿಸಬೇಕಾಗಬಹುದು” ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿಯಾಗಿದ್ದು ಇದರ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆಂಟಿಲೇಟರ್ ದಾನ ಮಾಡುವುದಾಗಿ ಹೇಳಿದ್ದ ಅದಕ್ಕೆ ಪ್ರತಿಯಾಗಿ ಭಾರತದ ಪ್ರಧಾನಿ ಧನ್ಯವಾದ ಹೇಳಿದ್ದ ಟ್ವೀಟ್ ಗಳು ಭಾರಿ ಚರ್ಚೆಗೆ ಗ್ರಾಸವಾಗಿದ್ದವು.

 

https://twitter.com/narendramodi/status/1261581118458888192?s=20

ಭಾರತದಲ್ಲಿ ಈಗ ಸುಮಾರು 47 ಸಾವಿರ ವೆಂಟಿಲೇಟರ್ ಗಳು ಲಭ್ಯವಿವೆ. ಇನ್ನೂ ಹೆಚ್ಚಿನ ವೆಂಟಿಲೇಟರ್ ಗಳ ಅಗತ್ಯ ಇದೆ ಎಂದು ಕೂಡ ಅಂದಾಜಿಸಲಾಗಿದೆ. ಆದರೆ ಈಗ ರಿಪೇರಿಯಾದ ಈ ವೆಂಟಿಲೇಟರ್ ಗಳಿಗೆ ಭಾರತ ಯಾಕೆ ವ್ಯಯಿಸಬೇಕು ಎಂಬ ಪ್ರಶ್ನೆಯನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಎತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights