ಡಿಕೆ ಶಿವಕುಮಾರ್ ಪರ ಸಚಿವ H ನಾಗೇಶ್ ಬ್ಯಾಟಿಂಗ್….!
ಡಿಕೆ ಅವ್ರಿಗೆ ದೈವಬಲವಿದೆ ಅವ್ರಿಗೆ ಏನೂ ಆಗಲ್ಲ ಎಂದು ಡಿಕೆ ಶಿವಕುಮಾರ್ ಪರ ಸಚಿವ H ನಾಗೇಶ್ ಹೇಳಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಗೆ ಇಡಿ ಯಿಂದ ಸಮನ್ಸ್ ಹಿನ್ನಲೆ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿದ ಸಚಿವ H ನಾಗೇಶ್ ದೇವರು ಅವರನ್ನ ಕಾಪಾಡಲಿ ಎಂದು ನಾನು ಹಾರೈಸುವೆ ಎಂದಿದ್ದಾರೆ.
ಅದನ್ನ ಬಿಟ್ಟು ರಾಜಕೀಯವಾಗಿ ನಾನೇನು ಮಾಡಲು ಸಾಧ್ಯವಿಲ್ಲ. ಡಿಕೆ ಶಿವಕುಮಾರ್ ನನ್ನ ಗುರುಗಳು, ಅವರಿಗೆ ಒಳ್ಳೇದಾಗಲಿ. ನಾನೇ ಖುದ್ದು ದೇವರನ್ನ ಪ್ರಾರ್ಥಿಸಿ ಬೇಡಿ ಅವರನ್ನ ಕಾಪಾಡುವಂತೆ ಕೋರುವೆ ಎಂದು ಕೋಲಾರದ ಕಾಂತರಾಜು ಸರ್ಕಲ್ ಬಳಿ ಅಬಕಾರಿ ಸಚಿವ ನಾಗೇಶ್ ಹೇಳಿಕೆ ನೀಡಿದ್ದಾರೆ.
ಸಚಿವ ನಾಗೇಶ್ ಅಬಕಾರಿ ಸಚಿವರಾಗಿ ಮೊದಲ ಬಾರಿಗೆ ಆಗಮಿಸಿ ಪಾಲಿಟೆಕ್ನಿಕ್ ಕಾಲೇಜಿಗೆ ಭೇಟಿ ನೀಡಿದ ವೇಳೆ ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಹೇಳಿಕೆ ಸದ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.