ದಾರಿ ಮಧ್ಯೆ ರೈಲನ್ನು ತಡೆದ ಗ್ರಾಮಸ್ಥರು: ಮಾನವೀಯತೆಯ ಕನ್ನಡಿಯಾಗಿದ್ದು ಏಕೆ ಗೊತ್ತಾ?

ಎರಡು ತಿಂಗಳುಗಳಿಂದ ಹೇರಲಾಗಿರುವ ಸರಣಿ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು  ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸುಮಾರು ದಿನಗಳ ಕಾಲ ನಡೆದೇ ಊರು ಸೇರಲು ಹೊರಟ್ಟಿದ್ದ ಕಾರ್ಮಿಕರರಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಸಾವುಗಳ ಸಂಖ್ಯೆ ಏರುತ್ತಿದ್ದ ಹಾಗೂ ಸಾರ್ವಜನಿಕರ ವಿರೋಧಕ್ಕೆ ಮಣಿದ ಸರ್ಕಾರ ಕಾರ್ಮಿಕರು ಶ್ರಮಿಕ್‌ ಸ್ಪೆಷಲ್ ಹೆಸರಿನಲ್ಲಿ ರೈಲುಗಳ ಸಂಚಾರವನ್ನು ಆರಂಭಿಸಿದೆ.

ಅದರೆ, ಆ ರೈಲುಗಳೂ ಸೇರಬೇಕಾದ ಊರುಗಳನ್ನು ಸರಿಯಾದ ಸಮಯಕ್ಕೆ ಸೇರದೆ ವಿಳಂಬವಾಗುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ದಾರಿ ತಪ್ಪಿ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿವೆ. ಇದರಿಂದಾಗಿ ರೈಲುಗಳಲ್ಲೂ ಊಟ ಸಿಗದೇ ಒಂದೇ ದಿನ 09 ಕಾರ್ಮಿಕರು ರೈಲಿನಲ್ಲಿ ಪ್ರಾಣ ಕಳೆದುಕೊಂಡಿದ್ದರು. ನಿನ್ನೆಯೂ ಒಬ್ಬ ಕಾರ್ಮಿಕನ ಶವ ರೈಲಿನ ಶೌಚಾಲಯದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಹೇಗೋ ಸಂಕಷ್ಟದ ಸಮಯದಲ್ಲಿ ಮನೆ ತಲುಪಿಸುತ್ತಿರುವ ಕಾರ್ಮಿಕರಿಗಾಗಿ ಹಲವಾರು ಮಾನವೀಯ ಮನಸ್ಸುಳ್ಳವರು ನೆರವು ನೀಡುತ್ತಿದ್ದಾರೆ.

ಮಿಜೋರಾಂಗೆ ತೆರಳುತ್ತಿದ್ದ ಶ್ರಮಿಕ್ ರೈಲೊಂದನ್ನು ಮಾರ್ಗ ಮಧ್ಯೆಯೇ ತಡೆದ ಗ್ರಾಮಸ್ಥರು, ರೈಲಿನಲ್ಲಿದ್ದ ಎಲ್ಲ ಪ್ರಯಣಿಕರಿಗೂ ಊಟ ಹಂಚಿ ಕಾರ್ಮಿಕರ ಹಸಿವು ನೀಗಿಸಿದ್ದಾರೆ.

ರೈಲನ್ನು ದಾರಿ ಮಧ್ಯೆ ತಡೆದ ಗ್ರಾಮಸ್ಥರು, ತಂಡೋಪತಂಡವಾಗಿ ಬಂದು ಎಲ್ಲಾ ಪ್ರಯಾಣಿಕರು ಊಟ ಹಂಚಿದ್ದಾರೆ. ಪ್ರಯಾಣಿಕನೋರ್ವ ಮಾಡಿದ ಇದರ ವಿಡಿಯೋವೊಂದನ್ನು ಖುದ್ದು ಮಿಜೋರಾಂ ಮುಖ್ಯಮಂತ್ರಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬಿಹಾರದ ಬೇಗುಸರಾಯ್‌ ಜಿಲ್ಲೆಯಲ್ಲಿ ನಡೆದ ಈ ಘಟನೆ ತಮ್ಮ ಅಂತರಂಗವನ್ನು ಮುಟ್ಟಿದೆ ಎಂದು ಟ್ವೀಟ್ ಮಾಡಿರುವ ಮಿಜೋರಾಂ ಮುಖ್ಯಮಂತ್ರಿ ಜೊರಾಮ್‌ಥಾಂಗ್, ಭಾರತದ ಒಗ್ಗಟ್ಟು ಸದಾಕಾಲ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights