ದುನಿಯಾ ವಿಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ : 18ಕ್ಕೆ ಸಲಗ ಮೇಕಿಂಗ್ ವಿಡಿಯೋ ರಿಲೀಸ್
ದುನಿಯಾ ವಿಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ. ಕರಿ ಚಿರತೆ ಅಭಿನಯದ ಸಲಗ ಸಿನಿಮಾ ಸೆಟ್ಟೇರಿದಾಗಿನಿಂದ್ಲೂ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಈ ಚಿತ್ರದ ಮೇಕಿಂಗ್ ಗ್ಲಿಂಸ್ ಅಂದ್ರೆ ಮೇಕಿಂಗ್ ವಿಡಿಯೋನ ರಿಲೀಸ್ ಮಾಡೋದಕ್ಕೆ ಚಿತ್ರತಂಡ ಡೇಟ್ ಫಿಕ್ಸ್ ಮಾಡಿದೆ.
ಹೌದು… ಅಪ್ರತಿಮಾ ಪ್ರತಿಭಾವಂತ ತಾರಾಬಳಗವಿರೋ ಈ ಚಿತ್ರದ ಮೇಕಿಂಗ್ ವಿಡಿಯೋವನ್ನು ಇದೇ ತಿಂಗಳ 18ನೇ ತಾರೀಖು ಬೆಳಿಗ್ಗೆ 10 ಗಂಟೆಗೆ ಗ್ರ್ಯಾಂಡ್ ಆಗಿ ಲಾಂಚ್ ಮಾಡಲಾಗ್ತಿದೆ. ದುನಿಯಾ ವಿಜಯ್, ಡಾಲಿ ಧನಂಜಯ ಸೇರಿ ಫೇಮಸ್ ತಾರಾಬಳಗವಿರೋ ಈ ಚಿತ್ರವನ್ನ ಟಗರು ಕೆ.ಪಿ.ಶ್ರೀಕಾಂತ್ ರ ಅದ್ಧೂರಿ ನಿರ್ಮಾಣ ಮಾಡಿದ್ದಾರೆ. ವಿಶಿಷ್ಠ ಕಥಾಹಂದರ ರಾ ರೌಡಿಸಂ ಹಿನ್ನೆಲೆ ಇರೋ ಸಲಗ ಚಿತ್ರ ಔಟ್ ಅಂಡ್ ಔಟ್ ಮಾಸ್ ಎಂಟ್ರಟೈನರ್ ಅಂತಲೇ ಹೇಳಲಾಗ್ತಿದ್ದು. ಮೇಕಿಂಗ್ ವಿಡಿಯೋ ಮೂಲಕ ಚಿತ್ರದಲ್ಲಿನ ಒಂದಷ್ಚು ವಿಶೇಷತೆಗಳನ್ನ ಬಿಟ್ಟುಕೊಡೋ ಧಾವಂತದಲ್ಲಿದೆ ಚಿತ್ರತಂಡ. ಕ್ಲಾಸ್, ಮಾಸ್, ಕಾಮಿಡಿ, ಎಮೋಷನ್ ಎಲ್ಲಾ ಬಗೆಯ ಅಂಶಗಳ ಅನಾವರಣ ಆ ವಿಡಿಯೋತದಲ್ಲಿರಲಿದೆಯಂತೆ.
ಎಲ್ಲದಕ್ಕಿಂತ ಹೆಚ್ಚಾಗಿ ದುನಿಯಾ ವಿಜಯ್ ಅವ್ರ ಚೊಚ್ಚಲ ನಿರ್ದೇಶನವಿರೋ ಈ ಚಿತ್ರದ ಮೇಕಿಂಗ್ ವಿಶೇಷ ಕಥೆಯೊಂದನ್ನ ಹೇಳಲಿದೆಯಂತೆ. ಚರಣ್ ರಾಜ್ ಸಂಗೀತ ಸಂಯೋಜನೆ ಇರೋ ಸಲಗ ಚಿತ್ರದ ಫಸ್ಟ್ ಸೌಂಡ್ ಝಲಕ್ ಮೇಕಿಂಗ್ ವಿಡಿಯೋದಲ್ಲಿದ್ದು, ಸಲಗ ಸೌಂಡೇ ಕನ್ನಡ ಸಿನಿಪ್ರಿಯರಿಗೆ ಹೊಸ ಕಿಕ್ ಕೊಡಲಿದೆಯಂತೆ. ಸಿಕ್ಕಾಪಟ್ಟೆ ಸ್ಪೆಷಲಾಟೀಸ್ ಜೊತೆಗೆ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಲೋ ಅಂಶಗಳಿರೋ ಸಲಗ ಚಿತ್ರದ ಮೇಕಿಂಗ್ ವಿಡಿಯೋ 18ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದ್ದು, ಸಲಗ ಚಿತ್ರದ ಇನ್ನಷ್ಟು ವಿಶೇಷ ವಿಚಾರಗಳನ್ನ ಚಿತ್ರತಂಡ ಆಮೇಲೆ ಹಂಚಿಕೊಳ್ಳಲಿದೆಯಂತೆ.