ದೆಹಲಿಯಲ್ಲಿ ಬುಗಿಲೆದ್ದ ಹಿಂಸಾಚಾರ : ಸಾವಿನ ಸಂಖ್ಯೆ 20ಕ್ಕೆ ಏರಿಕೆ…!

ಸಿಎಎ ಪರ ಹಾಗೂ ವಿರೋಧ ಪ್ರತಿಭಟನೆ ವೇಳೆ ಶುರುವಾದ ಹಿಂಸಾಚಾರ ಇವತ್ತಿಗೆ 20 ಜನರನ್ನು ಬಲಿಪಡೆದುಕೊಂಡಿದೆ.

ಹೌದು… ದೆಹಲಿಯಲ್ಲಿ ಬುಗಿಲೆದ್ದ ಸಿಎಎ ಪರ ಮತ್ತು ವಿರುದ್ಧ ಪ್ರತಿಭಟನಾಕಾರರ ನಡುವೆ ಶುರುವಾದ ಗಲಭೆಯಲ್ಲಿ 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 50ಕ್ಕೂ ಹೆಚ್ಚು ಪೊಲೀಸರಿಗೆ ಗಾಯವಾಗಿದೆ. ಗಲಭೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 5 ನಾಗರೀಕರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ 20ಕ್ಕೇರಿಕೆಯಾಗಿದೆ.

ಸದ್ಯ ಪ್ರತಿಭಟನಾಕಾರರು ದೆಹಲಿ ಸಿಎಂ ಕೇಜ್ರಿವಾಲ್ ಮನೆ ಎದುರು ಜಮಾಯಿಸಿದ್ದಾರೆ. ತಪ್ಪಿಕಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿ ಪ್ರಯೋಗಿಸಲಾಗಿದೆ.

ಇನ್ನೂ ದೆಹಲಿಯ ಕೆಲ ಪ್ರದೇಶದಲ್ಲಿ ಕರ್ಫ್ಯೂ ನಡುವೆಯೂ ಕಲ್ಲು ತೂರಾಟ ನಡೆಯುತ್ತಿದೆ. ಕಿರಾತಕರಿಂದ ಕಲ್ಲು ತೂರಾಟವಾಗುತ್ತಿದೆ. ದುಷ್ಕರ್ಮಿಗಳ ದುಷ್ಕೃತ್ಯವನ್ನು ಸದೆಬಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ನಿನ್ನೆ ಕಲ್ಲು ತೂರಾಟ ನಡೆದ ದೆಹಲಿಯ ಸೀಲಂಪುರ ಪ್ರದೇಶದಲ್ಲಿ ಪೊಲೀಸ್ ಬಿಗಿಬದೋಬಸ್ತ್ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights