ದೇಶದ ಪ್ರತಿಭಟನಾಕಾರರ ಎದುರು ಮಂಡಿಯೂರಿದ ಅಮೆರಿಕಾ ಪೊಲೀಸರು!

ಅಮೆರಿಕಾದಲ್ಲಿ ಪೊಲೀಸರೇ ಕೊಲೆಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಜಾರ್ಜ್ ಪ್ಲಾಯ್ಡ್‌ ಹತ್ಯೆಯನ್ನು ವಿರೋಧಿಸಿ ಒಂದು ವಾರದಿಂದ ಅಮೆರಿಕಾದ ವೈಟ್‌ಹೌಸ್‌ ಮುಂದೆ ಪ್ರತಿಭಟನೆ ನಡೆಯುತ್ತಿದೆ.

ಹಲವಾರು ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ, ಕೆಲವೆಡೆ ಹಿಂಸಾಚಾರಕ್ಕೂ ತಿರುಗಿದೆ. ಅಮೆರಿಕಾದ ವಾಷಿಂಗ್‌ಟನ್‌ ಡಿಸಿಯಲ್ಲಿ ಪ್ರತಿಭಟನೆ ತೀವ್ರ ಸ್ವರೋಪವನ್ನು ಪಡೆದುಕೊಂಡಿದೆ. ಈ ನಡುವೆ ಪ್ಲಾಯ್ಡ್‌ನನ್ನು ಹತ್ಯೆಮಾಡಿದ ಕೊಲೆಗಾರನನ್ನು ಬಂಧಿಸಲಾಗಿದ್ದು, ಆತನ ಜೊತೆಗಿದ್ದ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತೆ ಪೊಲೀಸರೇ ಕೊಲೆಯಲ್ಲಿ ಭಾಗಿಯಾಗಿರುವುದನ್ನು ವಿರೋಧಿಸಿ ಹಾಗೂ ವರ್ಣ ಆಧಾರಿತ ಕೊಲೆಯ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಲೇ ಇದೆ.

ಪ್ರತಿಭಟನಾಕಾರರ ಮುಂದೆ ನ್ಯೂಯಾರ್ಕ್ ಪೊಲೀಸರು ಮಂಡಿಯೂರಿ ಕುಳಿತು, ಪೊಲೀಸರು ಎಸಗಿರುವ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ, ಕೆಲವು ಪೊಲೀಸರು ಪ್ರತಿಭಟನಾಕಾರರೊಂದಿಗೆ ಸೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

 

Spread the love

Leave a Reply

Your email address will not be published. Required fields are marked *