ಧಾರವಾಡದಲ್ಲಿ ಖಾಸಗಿ ಕಂಪನಿ ಉದ್ಯೋಗಿಯ ಶೂಟೌಟ್ ಪ್ರಕರಣ : ಆರೋಪಿಗಳ ಗುರುತು ಪತ್ತೆ
ಧಾರವಾಡದಲ್ಲಿ ಖಾಸಗಿ ಕಂಪನಿ ಉದ್ಯೋಗಿಯ ಶೂಟೌಟ್ ಪ್ರಕರಣಕ್ಕೆ ಪುಷ್ಠಿ ನೀಡುವಂತೆ ಶೂಟೌಟ್ ಮಾಡಿದ ಆರೋಪಿಗಳ ಗುರುತು ಪತ್ತೆಯಾಗಿದೆ.
ನಿಗದಿ ಬಳಿ ಗುಂಡಿಕ್ಕಿ ಶ್ಯಾಮಸುಂದರ ಎಂಬವವರ ಹತ್ಯೆಗೈದಿದ್ದ ಆರೋಪಿಗಳ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೌದು.. ಹಂತಕರ ಚಲನವಲನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ದಾಂಡೇಲಿ ಮೂಲದ ಶ್ಯಾಮಸುಂದರರನ್ನು ಸೆಪ್ಟೆಂಬರ್ 25ರಂದು ಹತ್ಯೆ ಮಾಡಲಾಗಿತ್ತು. ಇದೀಗ ಮೂರು ಜನ ಆರೋಪಿಗಳ ಸುಳಿವು ಪತ್ತೆ ಹಚ್ಚಿದ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಬೈಕ್ ಮೇಲೆ ಬಂದಿದ್ದ ಮೂವರು ಹಂತಕರು ಶ್ಯಾಮಸುಂದರ್ ಕಾರನ್ನು ಹತ್ಯೆಗೂ ಮುನ್ನ ಹಿಂಬಾಲಿಸಿದ್ದಾರೆ. ಸದ್ಯ ದಾಂಡೇಲಿಯ ನಿವಾಸಿಯೊಬ್ಬನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.