ನೆರೆ ವಿಚಾರವಾಗಿ ವಿರೋಧ ಪಕ್ಷಗಳು ಬೊಬ್ಬೊ ಹೊಡೆಯುವುದನ್ನು ನಿಲ್ಲಿಸಬೇಕು – ಸಿಎಂ
ನೆರೆ ವಿಚಾರವಾಗಿ ವಿರೋಧ ಪಕ್ಷಗಳು ಬೊಬ್ಬೊ ಹೊಡೆಯುವುದನ್ನು ನಿಲ್ಲಿಸಬೇಕು ಎಂದು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ.
ಕ್ಯಾಬಿನೆಟ್ ಮೀಟಿಂಗ್ ಆದಮೇಲೆ ಬೆಳಗಾವಿ ಭಾಗಕ್ಕೆ ಹೋಗಿ, ಅಲ್ಲಿ ಆಗಿರು ಅತಿವೃಷ್ಟಿ ಪರಿಸ್ಥಿತಿ ಬಗ್ಗೆ ಗಮನ ಹರಿಸುತ್ತೇವೆ. ರಸ್ತೆ ಸೇತುವೆಗಳು ದೊಡ್ಡ ಪ್ರಮಾಣದಲ್ಲಿ ಹಾನಿ ಆಗಿದೆ. ದೊಡ್ಡ ಪ್ರಮಾಣದ ಅನುದಾನ ಬೇಕು. ಮತ್ತೊಂದು ಬಾರಿ ದೆಹಲಿಗೆ ಹೋಗಿ ಪರಿಹಾರ ಕೇಳುತ್ತೇನೆ.
ಕೇಂದ್ರದವರು ಯಾವ ರಾಜ್ಯಕ್ಕೂ ಹಣ ಕೊಟ್ಟಿಲ್ಲ. ಹಾಗಂತ ನಾವು ಕಾದು ಕುಂತಿಲ್ಲ ನಮ್ಮ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಿದ್ದೇವೆ. ಜೊತೆಗೆ ಜೆಡಿಎಸ್ , ಕಾಂಗ್ರೆಸ್ ಅತಿಯಾಗಿ ಟೀಕೆ ಮಾಡುತ್ತಿವೆ. ಕೇಂದ್ರ ಸರ್ಕಾರದಿಂದ ನಾಲ್ಕಾರು ದಿನದಲ್ಲಿ ಹಣ ಬಿಡುಗಡೆ ಆಗುತ್ತಿದೆ. ಪ್ರಧಾನಿ ವಿದೇಶೀ ಪ್ರವಾಸದಲ್ಲಿ ಇದ್ರು, ಸ್ವಲ್ಪ ಕಾಲಾವಕಾಶ ಬೇಕಿದೆ.
ನಳಿನ್ ಕುಮಾರ್ ಕಟ್ಟೀಲ್ ಮತ್ತೆ ನನ್ನ ನಡುವೆ ಗುಲಗಂಜಿಯಷ್ಟು ಭಿನಾಭಿಪ್ರಾಯ ಇಲ್ಲ. ಇಬ್ಬರು ಪರಸ್ಪರ ಸಮಾಲೋಚನೆ ಮಾಡಿ ತೀರ್ಮಾನ ಮಾಡುತ್ತಿದ್ದೇವೆ. ಕೆಲವು ಮಾಧ್ಯಮಗಳಲ್ಲಿ ಎಲ್ಲವು ಸರಿ ಇಲ್ಲ ಎಂಬ ವರದಿ ಸರಿ ಅಲ್ಲ. ನಾವು ಇಬ್ಬರು ಸರಿ ಇದ್ದೇವೆ. ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಇಬ್ಬರು ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ ಎಂದರು.