ನೋಡ ನೋಡುತ್ತಲೇ ಕುಸಿದು ಬಿದ್ದ ಶಾಲಾ ಕಟ್ಟಡದ ಗೋಡೆ…
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಚನ್ನೇನಹಳ್ಳಿ ಗ್ರಾಮದಲ್ಲಿ ನೋಡ ನೋಡುತ್ತಲೇ ಶಾಲೆಯ ಗೋಡೆಯೊಂದು ಕುಸಿದಿದೆ. ಅದೃಷ್ಟವಶಾತ್ ಶಾಲೆಯಲ್ಲಿ ಮಕ್ಕಳು ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ.
ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಳಿಗ್ಗೆ ಚನ್ನೇನಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದಿದೆ. ಶಾಲಾ ಕಟ್ಟಡ ಶಿಥಿಲಾಸ್ಥೆಯ ಬಗ್ಗೆ ದೂರು ನೀಡಿದ್ದರೂ ಪ್ರಯೋಜನ ಆಗಿರಲಿಲ್ಲ ಪರಿಣಾಮ ಧಾರಾಕಾರ ಮಳೆಗೆ ಕಟ್ಟಡ ನೆಲಕ್ಕುರಿಳಿದೆ.
ಮಕ್ಕಳಿಗೆ ತೊಂದರೆ ಆಗಿದ್ರೆ ಯಾರು ಹೊಣೆ ಎಂದು ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.