ನೌಕರಿ ಕೊಡಿಸುವ ನೆಪದಲ್ಲಿ ಲಕ್ಷಾಂತರ ವಂಚನೆ : ಹಣ ಕೇಳಲು ಹೋದವರ ಸ್ಥಿತಿ ಏನಾಯ್ತು ನೋಡಿ…
ನೌಕರಿ ಕೊಡಿಸುವ ನೆಪದಲ್ಲಿ ಲಕ್ಷಾಂತರ ವಂಚನೆ ಮಾಡಿದ ಪ್ರಕರಣ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ಬಳಿ ನಡೆದಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಗ್ರಾಮದ ಅಶೋಕ ದೇಸಾಯಿ(32)ಗೆ ನೌಕರಿ ಕೊಡಿಸುವ ನೆಪದಲ್ಲಿ ಲಕ್ಷಾಂತರ ವಂಚನೆ ಮಾಡಿ ಹಣ ಕೇಳಲು ಹೋದಾಗ ಹಣ ಕೇಳಲು ಬಂದವನ ಮೇಲೆಯೇ ಹಿಗ್ಗಾ-ಮುಗ್ಗಾ ಹಲ್ಲೆ ಮಾಡಲಾಗಿದೆ.
ಪಿಡಿಓ ನೌಕರಿ ಕೊಡಿಸಿವುದಾಗಿ ಇಬ್ಬರು ಯುವಕರಿಂದ ಒಟ್ಟು ರೂ. 20 ಲಕ್ಷ ಪಡೆದು ವಂಚಿಸಿದ್ದ ಹಂದಿಗನೂರು ಗ್ರಾಮದ ಭೀಮಣ್ಣ ಮಳ್ಳಿ ಎಂಬಾತನ ಬೆಂಬಲಿಗರು ಹಣ ಕೇಳಲು ಹೋದ ಅಶೋಕ ದೇಸಾಯಿ ಆವರಿಗೆ ಬೆಲ್ಟ್, ಬಡಿಗೆಗಳಿಂದ ಹಲ್ಲೆ ನಡೆಸಿದ್ದಾರೆ.
ಹಣ ಕೊಡುವುದಾಗಿ ಹಂದಿಗನೂರಿಗೆ ಕರೆಸಿ ತನ್ನ ಬೆಂಬಲಿಗರಿಂದ ಹಲ್ಲೆ ಮಾಡಿಸಿದ ಭೀಮಣ್ಣ ಮಳ್ಳಿ, ಹಲವು ಜನರಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾನೆಂದು ಆರೋಪಿಸಲಾಗಿದೆ.
ಕಳೆದ ಒಂದು ವಾರದ ಹಿಂದೆ ಹಲ್ಲೆ ನಡೆಸಿದ್ದ ಹಲ್ಲೆಯ ವಿಡಿಯೋ ಈಗ ವೈರಲ್ ಆಗಿದೆ. ಹಲ್ಲೆಯಿಂದ ಹೆದರಿ ದೂರು ದಾಖಲಿಸದೇ ಆಸ್ಪತ್ರೆಗೆ ದಾಖಲಾಗಿದ್ದ ಅಶೋಕ ದೇಸಾಯಿ, ಸದ್ಯ ಹಿರಿಯರೊಂದಿಗೆ ಬಂದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.