ಪತ್ನಿಯನ್ನು ಕತ್ತುಸೀಳಿ ಬರ್ಬರವಾಗಿ ಕೊಂದು ದರೋಡೆ ಎಂದು ಬಿಂಬಿಸಲು ಯತ್ನ!

ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ನಡೆದಿದ್ದ ಕವಿತಾ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಫೆಬ್ರವರಿ 17, 2020 ಕಡೂರು ಪಟ್ಟಣದಲ್ಲಿ ಬಾಣಂತಿಯನ್ನ ಕತ್ತುಸೀಳಿ ಬರ್ಬರವಾಗಿ ಹತ್ಯೆಗೈದಿದ್ರು. ಅದು ಕೂಡ ಆರು ತಿಂಗಳ ಪುಟ್ಟ ಕಂದನ ಎದುರೇ. ವಿಪರ್ಯಾಸ ಅಂದ್ರೆ ಆ ದಿನ ಕವಿತಾ ಗಂಡ ಡಾ.ರೇವಂತ್ ಕೂಡ ಕಣ್ಣೀರಿಟ್ಟಿದ್ದ. ಆದ್ರೆ, ಅಸಲಿಗೆ ಕೊಲೆಗಾರನೂ ಅವನೆ.

ಡಾ.ರೇವಂತ್ ಫೆಬ್ರವರಿ 17ರಂದು ಕವಿತಾ ಕೊಲೆಯಾಗಿದ್ದಾಗ, ತನಗೇನು ಗೊತ್ತಿಲ್ಲದಂತೆ ಅಮಾಯಕನಂತೆ ಕಣ್ಣೀರಾಕಿದ್ದ ಪಾಪಿ. ಯಾರೋ ದುಷ್ಕರ್ಮಿಗಳು ಮನೆಗೆ ಬಂದು ಕೊಲೆ ಮಾಡಿ, ಚಿನ್ನಾಭರಣವನ್ನ ದೋಚಿ ಹೋಗಿದ್ದಾರೆ ಅಂತಾ ಎಲ್ಲರೆದುರು ನಾಟಕ ಮಾಡಿದ್ದ.. ಪ್ರಕರಣದ ಬೆನ್ನು ಬಿದ್ದ ಪೊಲೀಸರು ತನಿಖೆ ಶುರು ಹಚ್ಕೊಂಡ್ರು. ಕಡೂರು ಪೊಲೀಸರ ಇನ್ವೆಸ್ಟಿಗೇಷನ್ ಅಂತಿಮ ಹಂತ ತಲುಪುವಷ್ಟರಲ್ಲಿ ಕವಿತಾ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ತಗ್ಲಾಕ್ಕೊಂಡ ದಂತವೈದ್ಯ ರೈಲು ಕಂಬಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪತ್ನಿಯನ್ನ ಕೊಲೆ ಮಾಡಿದ್ದ ಡಾ.ರೇವಂತ್, ಪೊಲೀಸರ ದಿಕ್ಕು ತಪ್ಪಿಸಲು ತನ್ನ ಮನೆಯ ಚಿನ್ನಾಭರಣವನ್ನ ತಾನೇ ಕದ್ದಿಟ್ಟು, ಕೊಲೆಗಡುಕರು ಚಿನ್ನಾಭರಣ ದೋಚಿದ್ದಾರೆ ಅಂತ ದೂರು ನೀಡಿದ್ದ. ಆದ್ರೆ, ಕವಿತಾಳ ಮರಣೋತ್ತರ ವರದಿ ದಂತವೈದ್ಯನ ಅಸಲಿ ಮುಖವನ್ನ ಬಯಲು ಮಾಡಿತ್ತು. ಕವಿತಾಳ ಕೊಲೆ ಮಾಡುವ ಮುನ್ನ ಆಕೆಗೆ ಇಂಜೆಕ್ಷನ್ ನೀಡಿರೋದು ವರದಿಯಲ್ಲಿ ಬಹಿರಂಗವಾಗಿತ್ತು. ಪತ್ನಿಗೆ ಇಂಜೆಕ್ಷನ್ ನೀಡಿ, ಪ್ರಜ್ಞೆ ತಪ್ಪಿಸಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದ ಕಟುಕ ಡಾಕ್ಟರ್. ವೈದ್ಯನಿಗೆ ಕಡೂರಿನ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧವನ್ನ ಹೊಂದಿದ್ದ ಡಾ ರೇವಂತ್ ಗೆ ಅನೇಕ ಬಾರಿ ಕವಿತಾ ಬುದ್ದಿ ಹೇಳಿದ್ಳು.

ಆದ್ರೆ, ಸಪ್ತಪದಿ ತುಳಿದ ಪತ್ನಿಗಿಂತ ಮೋಹಕ್ಕೆ ಬಿದ್ದ ಸಖಿಯೇ ಪಾಪಿ ರೇವಂತ್ಗೆ ಮುಖ್ಯವಾದಾಗ ಡಾಕ್ಟರ್ ಆಯ್ಕೆ ಮಾಡಿಕೊಂಡಿದ್ದು ಪತ್ನಿಯನ್ನ ಮುಗಿಸೋ ನಿರ್ಧಾರ.. ಕೊನೆಗೂ ಮುಗಿಸೋ ಬಿಟ್ಟ. ಈ ಎಲ್ಲಾ ವಿಚಾರಗಳು ಪೊಲೀಸ್ ತನಿಖೆಯಲ್ಲಿ ಬಯಲಾಗುತ್ತಿದ್ದಂತೆ ಭಯಗೊಂಡ ಪಾಪಿ, ಕಡೂರಿನ ಮಸಾಲ ಡಾಬಾದ ಸಮೀಪ ಕಾರು ನಿಲ್ಲಿಸಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.