ಇದು ಕರ್ಫ್ಯೂ ಮಾತ್ರವಲ್ಲ ಲಾಕ್‌ಡೌನ್‌; ವೀಕೆಂಡ್‌ನಲ್ಲಿ ಏನಿರತ್ತೆ-ಏನಿರಲ್ಲ?

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ ರಾಜ್ಯದ ಹಲವು ನಗರಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದ್ದು, ಅಘೋಷಿತ ಲಾಕ್‌ಡೌನ್‌ ಮಾಡಲಾಗಿದೆ. ಇನ್ನು ಶನಿವರ ಮತ್ತು ಭಾನುವಾರ ವೀಕೆಂಡ್‌ ಕರ್ಫ್ಯೂ ಎಂದು ಹೇಳಲಾಗಿದ್ದರು. ಇದು 2020ರಲ್ಲಿ ಇದ್ದ ಲಾಕ್‌ಡೌನ್‌ನಂತಯೇ ಇರಲಿದೆ.

ಈ ಹಿನ್ನೆಲೆಯಲ್ಲಿ ವೀಕೆಂಡ್‌ನ ಎರಡೂ ದಿನಗಳು ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ.

ಅದಲ್ಲದೆ, ಇನ್ನೂ ಹಲವಾರು ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿರುವ ಸಚಿವ ಆರ್‌ ಅಶೋಕ್‌ ವಿವರಿಸಿದ್ದು, ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ತುರ್ತು ಸೇವೆ ಒದಗಿಸುವ ಎಲ್ಲ ಸರ್ಕಾರಿ ಇಲಾಖೆ, ಕಾರ್ಪೋರೇಷನ್ ಗಳ ಓಡಾಟಕ್ಕೆ ನಿರ್ಬಂಧವಿಲ್ಲ. ತುರ್ತುಸೇವೆ ಒದಗಿಸುವ ಕಾರ್ಖಾನೆ, ಸಂಸ್ಥೆ ಸಿಬ್ಬಂದಿ ಐಡಿ ಕಾರ್ಡ್ ತೋರಿಸಿ ಓಡಾಡಬಹುದು.

ರೋಗಿಗಳು ಅವರ ಸಹಾಯಕರು, ವ್ಯಾಕ್ಸಿನ್ ಪಡೆದುಕೊಳ್ಳುವ ನಾಗರೀಕರು ಓಡಾಡಬಹುದು. ದಿನಸಿ ಅಂಗಡಿ, ಹಣ್ಣು ತರಕಾರಿ ಹಾಲು ಮಾಂಸದ ಅಂಗಡಿ ಬೆಳಗ್ಗೆ 6-10 ಗಂಟೆಯವರೆಗೆ ತೆಗೆದಿರಬಹುದು. ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ ಇರುತ್ತದೆ. ದೂರ ಪ್ರಯಾಣಕ್ಕಾಗಿ ಹೋಗುವವರು, ಬಸ್ ನಿಲ್ದಾಣ. ರೈಲ್ವೆ, ವಿಮಾನ ನಿಲ್ದಾಣಕ್ಕೆ ಹೋಗುವವರು ಸಾರ್ವಜನಿಕ ಸಾರಿಗೆ ಬಳಸಬಹುದು. ಆದರೆ ಟಿಕೆಟ್ ತೋರಿಸಬೇಕು ಎಂದು ಸ್ಪಷ್ಟನೆ ನೀಡಿದರು.

ಮದುವೆ ಕಾರ್ಯಕ್ರಮಕ್ಕೆ 50 ಜನರು ಮಾತ್ರ ಹೋಗಬೇಕು. ಸಿನಿಮಾ, ಬಾರ್, ಪಬ್, ಮಾಲ್ ಎಲ್ಲದರ ಮೇಲೆ ನಿಷೇಧ ಹೇರಲಾಗಿದೆ. ಧಾರ್ಮಿಕ ರಾಜಕೀಯ ಗುಂಪು ಸೇರುವಿಕೆ ನಿಷೇಧ ಇದೆ. ಪಾರ್ಕ್​ ಓಪನ್ ಇರುತ್ತೆ. ಧಾರ್ಮಿಕ ಕೇಂದ್ರಗಳನ್ನು ನಿಷೇಧಿಸಲಾಗಿದೆ. ಆದರೆ ಪೂಜಾರಿಗಳು ಮಾತ್ರ ಹೋಗಬಹುದು ಎಂದರು.

ಮಾಧ್ಯಮದವರು, ವೈದ್ಯರು, ನರ್ಸಿಂಗ್ ಸ್ಟಾಫ್ ಎಲ್ಲರೂ ಕೂಡ ಓಡಾಡಬಹುದು. ಅಂತರ್ ಜಿಲ್ಲಾ ಓಡಾಟಕ್ಕೆ ಖಾಸಗೀ ವಾಹನಗಳನ್ನು ನಿಷೇಧಿಸಲಾಗಿದ್ದು, ಬಸ್ಸು, ರೈಲು, ವಿಮಾನ ಮಾತ್ರ ಬಳಸಬೇಕು.

ಕೋವಿಡ್​​ನಿಂದ ಮೃತಪಟ್ಟವರನ್ನು ಸ್ವಂತ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲು ಅವಕಾಶ ಕೊಟ್ಟಿದ್ದೇವೆ. ಆದರೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಕೋವಿಡ್ ನಿಯಮ‌ ಪಾಲನೆ ಮಾಡಬೇಕು. ನಾಳೆಯಿಂದ ಪ್ರತಿ ಮೂರು ಗಂಟೆಗೆ 50 ಶವಸಂಸ್ಕಾರಕ್ಕೆ ಅವಕಾಶ ನೀಡಲಾಗ್ತಿದೆ. ನೀರಿನ ಸಂಪರ್ಕ ಕೂಡ ಲಭ್ಯವಾಗಿದೆ. ಅಂಬ್ಯುಲೆನ್ಸ್ ಗಳು ರಸ್ತೆಯಲ್ಲಿ ಕ್ಯೂ ನಿಲ್ಲಬಾರದು. ಬಂದಂತಹ ಜನರಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಬಂದ ತಕ್ಷಣ ಯಾವುದೇ ವಿಳಂಬವಿಲ್ಲದೆ ಶವಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಎರಡು ಕೆಎಸ್‌ಆರ್‌ಪಿ ತುಕಡಿ ಕೂಡ ನಿಯೋಜನೆ ಮಾಡಿದ್ದೇವೆ. ಬೆಂಗಳೂರಿನ ಮೇಲೆ ಇರುವ ಒತ್ತಡ ನೂರಕ್ಕೆ ನೂರು ಕಡಿಮೆಯಾಗಲಿದೆ. ಯಾವುದೇ ಶವ ಸಂಸ್ಕಾರಕ್ಕೆ ಕ್ಯೂ ಇರೋದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇನ್ನುಳಿದಂತೆ ಎಲ್ಲಾ ರೀತಿಯ ಚುಟುವಟಿಗಳುಮ . ವಾಣಿಜ್ಯ ಮಳಿಗೆಗಳು, ಖಾಸಗೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ಶವ ನೀಡಲು 60,000 ಕೇಳಿದ ಆಂಬುಲೆನ್ಸ್‌ ಮಾಲೀಕ?; ತಾಳಿಯನ್ನೇ ಅಡವಿಡಲು ಮುಂದಾದ ಮಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights