ಪಾಲ್ಘರ್ ಚಿತ್ರವಧೆಯ ಘಟನೆಯನ್ನು ಕೋಮುವಾದವೆಂದು ತಿರುಚಿದ ಸಾಮಾಜಿಕ ಮಾಧ್ಯಮಗಳು…!

ಏಪ್ರಿಲ್ 16ರಂದು ಮಹಾರಾಷ್ಟ್ರದ ಪಾಲ್ಘರ್  ಜಿಲ್ಲೆಯ ಕಾಸಾ ಪೊಲೀಸ್ ವ್ಯಾಪ್ತಿಗೆ ಬರುವ ಗಡ್ಚಿಂಚಲೆ ಗ್ರಾಮದ ಬಳಿ ಸಶಸ್ತ್ರ ಜನಸಮೂಹ ಮೂವರನ್ನು ಹತ್ಯೆ ಮಾಡಿತ್ತು.  ಮೂರು ದಿನಗಳ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಯ ವಿಡಿಯೊಗಳನ್ನು ಮುಸ್ಲಿಂ ಸಮುದಾಯದ ಸದಸ್ಯರು ಮಾಡಿದ ಕೋಮು-ಪ್ರೇರಿತ ಅಪರಾಧ ಎಂದು ಪ್ರತಿಪಾದಿಸಲಾಗಿದೆ.

ಈ ಘೋರ ಘಟನೆಯ ಒಂದು ವೀಡಿಯೊವನ್ನು,”ಮಾರ್ ಶೋಯೆಬ್ ಮಾರ್” ಎಂದು ಜನ ಸಮೂಹ ಹೇಳುವುದನ್ನು ಕೇಳಬಹುದು ಎಂಬ  ಹೇಳಿಕೆಯೊಂದಿಗೆ ಕೆಲವು ವ್ಯಕ್ತಿಗಳು ಟ್ವೀಟ್ ಮಾಡಿದ್ದಾರೆ.

ಜೊತೆಗೆ ಚಲನಚಿತ್ರ ನಿರ್ದೇಶಕ ಅಶೋಕ್ ಪಂಡಿತ್ ಈ ಘಟನೆಯಲ್ಲಿ ಭಾಗಿಯಾಗಿರುವ ಆರೋಪಿ “ಶೋಯೆಬ್” ಎಂದು ಎರಡು ಬಾರಿ ಹೇಳಿಕೊಂಡಿದ್ದಾರೆ.

ಇದಲ್ಲದೇ ಸುದರ್ಶನ್ ನ್ಯೂಸ್‍ನ ಪ್ರಧಾನ ಸಂಪಾದಕ ಸುರೇಶ್ ಚಾವಂಕೆ ಅವರು ವೀಡಿಯೊದಲ್ಲಿ “ಶೋಯೆಬ್” ಪದ ತನಗೆ ಕೇಳುತ್ತದೆ ಎಂದು ಹೇಳಿದ್ದಾರೆ.

ಅಷ್ಟೇ ಯಾಕೆ ದೆಹಲಿ ಬಿಜೆಪಿಯ ರಿಚಾ ಪಾಂಡೆ ಮಿಶ್ರಾ ಅವರು “ಹೊಡಿ ಶೋಯೆಬ್ ಹೊಡಿ, ಅವರನ್ನು ಕೊಲ್ಲು” ಎಂಬ  ಬರಹದೊಂದಿಗೆ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.  ಹ್ಯಾಂಡಲ್ ‘ಯಾನಾ ಮಿರ್’ ಮತ್ತು ‘ದಿಸ್ ಪೊಸಬಲ್’ ಮೂಲಕ ಇದೇ ರೀತಿಯ ಟ್ವೀಟ್‍ಗಳು ಒಟ್ಟು 2,700 ರಿ ಟ್ವೀಟ್‍ಗಳನ್ನು ಒಟ್ಟುಗೂಡಿಸಿವೆ. ಫೇಸ್‍ಬುಕ್ ಪುಟ`ನಮ್ಮ ಭಾರತ’ಇದೇ ರೀತಿಯ ಕೋಮು ನಿರೂಪಣೆಯೊಂದಿಗೆ ಅದೇ ವೀಡಿಯೊವನ್ನು ಪೋಸ್ಟ್ ಮಾಡಿದೆ. ಇದನ್ನು 2,200 ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ.

ಕ್ರಿಶ್ಚಿಯನ್ ಕೋನದೊಂದಿಗೂ ವೈರಲ್

ಮೃತ ಇಬ್ಬರು ಪುರುಷರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಗ್ರಾಫಿಕ್ ಜೊತೆಗೆ ಹಂಚಿಕೊಳ್ಳಲಾಗಿದೆ.  ಅದು “ಕ್ರಿಶ್ಚಿಯನ್ ಮಿಷನರಿಗಳ ಗೂಂಡಾಗಳು” ದಾಳಿಗೆ ಕಾರಣವೆಂದು ಆರೋಪಿಸಿದೆ.

ವೀಡಿಯೊದಲ್ಲಿ “ಶೋಯೆಬ್”ಇಲ್ಲ

ಬೇರೆ ಬೇರೆ ಕೋನಗಳಿಂದ ತೆಗೆದ ಒಂದೇ ಘಟನೆಯ ಹಲವಾರು ವೀಡಿಯೊಗಳನ್ನು ಕೇಳಿದ ನಂತರ, ಆಲ್ಟ್ ನ್ಯೂಸ್ “ಬಸ್ ಓಯ್ ಬಸ್(ನಿಲ್ಲಿಸಿ ಹೇ ನಿಲ್ಲಿಸಿ)” ಎಂದು ಕೆಲವರು ಹೇಳುತ್ತಿರುವುದನ್ನು ಕಾಣಬಹುದು. ಕೆಳಗೆ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಅದೇ ಶಬ್ದಗಳು ಕೇಳಬಹುದು. ಹೀಗಾಗಿ, ಘಟನೆಯಲ್ಲಿ ಭಾಗಿಯಾದ ದುಷ್ಕರ್ಮಿಗಳಲ್ಲಿ ಒಬ್ಬರು ಶೋಯೆಬ್ ಎಂಬ ವಾದವು ಆಧಾರ ರಹಿತವಾಗಿದೆ.

ಕೋಮು ಕೋನವಿಲ್ಲ

ಮಹಾರಾಷ್ಟ್ರದ ಗೃಹ ಸಚಿವರು ಟ್ವಿಟ್ಟರ್‍ನಲ್ಲಿ ಘಟನೆಗೆ ಯಾವುದೇ ಕೋಮು ಕೋನವಿಲ್ಲ. ಆರೋಪಿ ಹಾಗೂ ಬಲಿಯಾದ ವ್ಯಕ್ತಿ ಬೇರೆ ಬೇರೆ ಧರ್ಮದವರಲ್ಲ ಎಂದು ಮಾಹಿತಿ ನೀಡಿದ್ದಾರೆ.

ಜೊತೆಗೆ ಸಿಎಂ ಉದ್ಧವ್‍ ಠಾಕ್ರೆ ಅವರು ಈ ಘಟನೆಯಲ್ಲಿ ಯಾವುದೇ ಕೋಮು ಕೋನವನ್ನು ತಳ್ಳಿಹಾಕಿದ್ದಾರೆ . ಈ ಪ್ರದೇಶದಲ್ಲಿ ಕಳ್ಳರು ಸುತ್ತುತ್ತಿದ್ದಾರೆ ಎಂಬ ವದಂತಿಗಳು ಇದ್ದ ಕಾರಣ ಇದು ಸಂಭವಿಸಿದೆ ಎಂದು ಹೇಳಿದ್ದಾರೆ.

 

ಏಪ್ರಿಲ್ 16ರ ರಾತ್ರಿ ಗಡ್ಚಿಂಚಲೆ ಗ್ರಾಮದ ಬಳಿ ಸ್ಥಳೀಯ ಬುಡಕಟ್ಟು ಜನಾಂಗದ ಜನರಿಂದ ಮೂವರ ಮೇಲೆ ಹಲ್ಲೆ ನಡೆದಿದೆ. ಮೂವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮುಂಬೈನ ಕಾಂಡಿವಿಲಿಯಿಂದ ಸಿಲ್ವಾಸ್ಸಾಗೆ ತೆರಳುತ್ತಿದ್ದಾಗ, ಸ್ಥಳೀಯರು ರಾತ್ರಿ ಸಮಯದಲ್ಲಿ ಗಸ್ತು ತಿರುಗಲು ಸ್ಥಾಪಿಸಿದ ಜಾಗರೂಕ ಗುಂಪು ಅವರನ್ನು ನಿಲ್ಲಿಸಿದೆ. ವ್ಯಾನ್‍ನಲ್ಲಿ ಪ್ರಯಾಣಿಸುತ್ತಿದ್ದ ಈ ವ್ಯಕ್ತಿಗಳನ್ನು ಗುಂಪಿನವರು ಪ್ರಶ್ನಿಸಿದರು. ಅವರು ಕಲ್ಲುಗಳನ್ನು ಹೊಡೆದು ನಂತರ ಕೋಲುಗಳಿಂದ ಹೊಡೆದರು. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 100ಕ್ಕೂ ಹೆಚ್ಚು ಜನರನ್ನು ಮತ್ತು ಒಂಬತ್ತು ಅಪ್ರಾಪ್ತ ವಯಸ್ಕರನ್ನು ವಶಕ್ಕೆ ಪಡೆದಿದ್ದಾರೆ.

ಆಲ್ಟ್ ನ್ಯೂಸ್ ಪಾಲ್ಘರ್ ಪೊಲೀಸರ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನು ಸಂಪರ್ಕಿಸಿದಾಗ, ಅವರು ಘಟನೆಗೆ ಯಾವುದೇ ಕೋಮು ಕೋನವಿಲ್ಲ ಎಂದು ಹೇಳಿದರು. ಆರೋಪಿ ಮತ್ತು ಬಲಿಯಾದವನು ಇಬ್ಬರೂ ಒಂದೇ ಕೋಮಿನವರು ಎಂದು ನಮಗೆ ಮಾಹಿತಿ ನೀಡಲಾಯಿತು. ಆರೋಪಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿದವರು.”ಈ ಪ್ರದೇಶದಲ್ಲಿ ವದಂತಿಯೊಂದು ಹರಡಿತ್ತು ಮತ್ತು ಪೊಲೀಸರು ಈ ಬಗ್ಗೆ ಸಂದೇಶವನ್ನು ಸಹ ನೀಡಿದ್ದರು” ಎಂದು ಸಾರ್ವಜನಿಕ ಸಂಪರ್ಕಅಧಿಕಾರಿ ಹೇಳಿದರು. ಪಾಲ್ಘರ್‍ ಜಿiಲ್ಲೆಯ ಬುಡಕಟ್ಟು ಗ್ರಾಮವನ್ನು ವಲಸಿಗರು ದೋಚುತ್ತಿದ್ದಾರೆ ಎಂಬ ವದಂತಿಗಳಿವೆ.

ಈ ಘಟನೆಯ ತನಿಖೆ ಬುಡಕಟ್ಟು ಗ್ರಾಮದಲ್ಲಿ ಹರಡಿರುವ ವದಂತಿಗಳ ಮೂಲಗಳನ್ನು ಗುರುತಿಸುವತ್ತ ಗಮನ ಹರಿಸಿದೆ ಎಂದು ಪಾಲ್ಘರ್‍ಎಸ್‍ಪಿ ಗೌರವ್ ಸಿಂಗ್ `ದಿ ಇಂಡಿಯನ್‍ಎಕ್ಸ್‍ಪ್ರೆಸ್’ಗೆ ಮಾಹಿತಿ ನೀಡಿದರು.

2011ರ ಜನಗಣತಿ ಮಾಹಿತಿಯ ಪ್ರಕಾರ, ದಹನು ತಾಲ್ಲೂಕಿನ ಗಡ್ಚಿಂಚಲೆ ಗ್ರಾಮವು 248ಕ್ಕೂ ಹೆಚ್ಚು ಮನೆಗಳನ್ನು ಹೊಂದಿದ್ದು ಅವುಗಳಲ್ಲಿ ಹೆಚ್ಚಿನವು ಪರಿಶಿಷ್ಟ ಪಂಗಡಕ್ಕೆ ಸೇರಿದವು.

ಘಟನೆಗೆ ಕೆಲವು ದಿನಗಳ ಮೊದಲು, ಥಾಣೆಯ ಚರ್ಮರೋಗ ತಜ್ಞ ಡಾ.ವಿಶ್ವಾಸ್ ವಾಲ್ವಿ ಅವರ ಕಾರನ್ನು ಜನರ ಗುಂಪೊಂದು ಸಾರ್ನಿಗ್ರಾಮದಲ್ಲಿ ನಾಶಪಡಿಸಿದ ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. “ಡಾ. ವಾಲ್ವಿ ಅವರು ಆಹಾರ ಧಾನ್ಯಗಳನ್ನು ವಿತರಿಸಿ, ಬುಡಕಟ್ಟು ಜನಾಂಗದವರ ಮನೆ ಮನೆ ಬಾಗಿಲಿಗೆ ಹೋಗಿ ಸಣ್ಣ ಉಷ್ಣಮಾಪನ ಪರೀಕ್ಷೆಯನ್ನು ನಡೆಸಿ ಮನೆಗೆ ವಾಪಸಾಗುತ್ತಿದ್ದಾಗ ಕನಿಷ್ಠ 250 ಜನರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ”  ಎಂದು`ಹಿಂದೂಸ್ತಾನ್‍ಟೈಮ್ಸ್’2020ರ ಏಪ್ರಿಲ್ 17ರಂದು ಪ್ರಕಟಿಸಿತು.

ಪ್ರಮುಖ ಸಾಮಾಜಿಕ ಮಾಧ್ಯಮ ಬಳಕೆದಾರರಾದ ಸುರೇಶ್ ಚಾವಂಕೆ ಮತ್ತು ಅಶೋಕ್ ಪಂಡಿತ್‍ ಅವರು ಈ ಘಟನೆಯನ್ನು ಕೋಮು ಬಣ್ಣವನ್ನು ನೀಡಲು ಪ್ರಯತ್ನಿಸಿದರು. ಆರೋಪಿ ಮತ್ತು ಬಲಿಯಾದವರು ಇಬ್ಬರೂ ಒಂದೇ ಧರ್ಮದವರು. ಈ ಘಟನೆಗೆ ಯಾವುದೇ ಕೋಮು ಕೋನವಿಲ್ಲ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights