ಪೊಲೀಸರ ಮೇಲೆ ಅನುಚಿತ ವರ್ತನೆ ಆರೋಪ : ಗ್ರಾಮಸ್ಥರ ಪ್ರತಿಭಟನೆ

ಹುಣಸೂರು ಉಪಚುನಾವಣೆಯಲ್ಲಿ  ಶಾಸಕ ಅನಿಲ್ ಚಿಕ್ಕಮಾದು ಜೊತೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆಗಿಳಿದಿದ್ದಾರೆ.

ಹುಣಸೂರು ಕ್ಷೇತ್ರದ ಹೊಸ ರಾಮೇನಹಳ್ಳಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಮತದಾನ ಮಾಡಲು ಬಂದ ವೇಳೆ ಈ ಘಟನೆ ನಡೆದಿದೆ. ಮತದಾನ ಮಾಡಿ ಹೊರಗೆ ಬಂದ ಶಾಸಕರೊಂದಿಗೆ ಕಾರ್ಯಕರ್ತರು ಮಾತನಾಡುತ್ತಿದ್ದಾಗ ಎಸ್.ಐ. ತಡೆದಿದ್ದಾರೆ. ಈ ವೇಳೆ ಶಾಸಕರೊಂದಿಗೆ ಎಸ್.ಐ ವಾಗ್ವಾದ ನಡೆದಿದೆ. ಸರ್ಕಾರದಿಂದ ಆಡಳಿತ‌ ಯಂತ್ರ ದುರ್ಬಳಕೆ ಆರೋಪ ಇರುವುದರಿಂದ ಪೊಲೀಸರು ಶಾಸಕರೊಬ್ಬರು ಮತಗಟ್ಟೆಗೆ ಆಗಮಿಸಿ ಮುಕ್ತ ಮತದಾನಕ್ಕೆ ಅವಕಾಶ‌ ಕೊಟ್ಟಿಲ್ಲ. ಇದು ನನ್ನ ಸ್ವಗ್ರಾಮ ನಮ್ಮೂರಿನಲ್ಲೇ ಪೊಲೀಸರಿಂದ ತಡೆ ಆರೋಪಿಸಿ ಪೊಲೀಸರ ವರ್ತನೆಗೆ ಶಾಸಕ ಅನಿಲ್ ಚಿಕ್ಕಮಾದು ಸಿಟ್ಟಿಗೆದ್ದಿದ್ದಾರೆ.

ಪೊಲೀಸರ ವರ್ತನೆಗೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಅವರ ಕಾರ್ಯಕರ್ತರು ಆಕ್ರೋಶಗೊಂಡು ಪೊಲೀಸರ ವಿರುದ್ಧ ಪ್ರತಿಭಟನೆಗಿಳಿದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights