ಕುರಾನ್ ಸುಟ್ಟ ಕಿಡಿಗೇಡಿಗಳು: ಸ್ವೀಡನ್‌ನಲ್ಲಿ ಹಿಂಸಾಚಾರ!

ಸ್ವೀಡನ್‌ನ ಗಡಿ ರಾಜ್ಯ ಮಾಲ್ಮೋದಲ್ಲಿ ನಡೆದ ಇಸ್ಲಾಂ ವಿರೋಧಿ ಪ್ರತಿಭಟನೆಯಲ್ಲಿ ಕಿಡಿಗೇಡಿಗಳು ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ ಅನ್ನು ಸುಟ್ಟು ಹಾಕಿದ್ದು, ಮಾಲ್ಮೋ ರಾಜ್ಯಾದ್ಯಂತ ಹಿಂಸಾಚಾರ ನಡೆಸಿದೆ.

ಡೆನ್ಮಾರ್ಕ್ ದೇಶದ ಮಾಲ್ಮೋಗೆ ಬಂದಿದ್ದ ಬಲಪಂಥೀಯ “ಹಾರ್ಡ್ ಲೈನ್” ಪಕ್ಷದ ನಾಯಕ ರಾಸ್ಮಸ್ ಪಲುಡನ್ ಅವರ ಆಗಮನವನ್ನು ತಡೆದು ವಾಪಸ್ ಕಳುಹಿಸಲಾಗಿದೆ. ಅದನ್ನ ವಿರೋಧಿಸಿ ಸ್ವೀಡನ್​ನಲ್ಲಿ ಪ್ರತಿಭಟನಾಕಾರರು ಗಲಭೆ ಮಾಡಿದ್ದು, ಕೆಲವು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದೆ. ಗಲಭೆ ಅತಿರೇಖಕ್ಕೆ ತಲುಪಿದ್ದು, ಮಾಲ್ಮೋದಲ್ಲಿ ನಡೆದ ಇಸ್ಲಾಮ್ ವಿರೋಧಿ ಪ್ರತಿಭಟನೆಯಲ್ಲಿ ಕುರಾನ್ ಗ್ರಂಥವನ್ನು ಜನರು ಕಾಲಿನಿಂದ ತುಳಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು, ಹಿಂಸಾಚಾರ ಹೆಚ್ಚಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂದು ಮುನ್ನೆಚ್ಚರಿಕೆಯಾಗಿ ಸ್ವೀಡನ್ ಪೊಲೀಸರು ಬಲಪಂಥೀಯ ನಾಯಕ ರಾಸ್ಮಸ್ ಪಲುಡನ್ ಅವರನ್ನ ಮಾಲ್ಮೋ ಗಡಿ ಬಳಿಯೇ ಬಂಧಿಸಿದರು. ನಂತರ ಇವರನ್ನು 2 ವರ್ಷ ಸ್ವೀಡನ್​ಗೆ ಆಗಮಿಸದಂತೆ ನಿರ್ಬಂಧ ಹೇರಿ ವಾಪಸ್ ಕಳುಹಿಸಲಾಗಿದೆ.

ರಾಸ್ಮುಸ್ ಪಲುಡನ್ ವಾಪಸ್ ಹೋದ ನಂತರವೂ ಇಸ್ಲಾಮ್ ವಿರೋಧಿ ಪ್ರತಿಭಟನಾಕಾರರು ತಮ್ಮ ರ್ಯಾಲಿ ಮುಂದುವರಿಸಿದ್ದು, ಕುರಾನ್ ಸುಟ್ಟು ಅವಮಾನ ಮಾಡಿದ ಕಾರಣಕ್ಕೆ ಪೊಲೀಸರು ಮೂವರನ್ನು ಬಂಧಿಸಿದರು.

“ಎರಡು ವರ್ಷ ನಿಷೇಧ ಹೇರಿ ನನ್ನನ್ನು ವಾಪಸ್ ಕಳುಹಿಸಲಾಯಿತು. ಆದರೆ, ಅತ್ಯಾಚಾರಿಗಳು ಮತ್ತು ಕೊಲೆಗಡುಕರನ್ನು ಸ್ವಾಗತಿಸುತ್ತಾರೆ” ಎಂದು ಡೆನ್ಮಾರ್ಕ್ ರಾಜಕಾರಣಿ ರಾಸ್ಮುಸ್ ಪಲುಡನ್ ವ್ಯಂಗ್ಯವಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಮುಸ್ಲೀಂ ವಿರೋಧಿಯಾಗಿರುವ ರಾಸ್ಮಸ್ ಪಲುಡನ್, ಕಳೆದ ವರ್ಷ ಇವರು ಕುರಾನ್ ಗ್ರಂಥದಲ್ಲಿ ಹಂದಿ ಮಾಂಸ ಇಟ್ಟು ಬೆಂಕಿಯಿಂದ ಸುಟ್ಟಿದ್ದರು.


Read Also:  ಪ್ರಜಾಪ್ರಭುತ್ವ ಮೇಲೆ ಸರ್ವಾಧಿಕಾರಿ, ರಾಷ್ಟ್ರ ವಿರೋಧಿಗಳ ಪ್ರಭಾವ ಹೆಚ್ಚುತ್ತಿದೆ: ಸೋನಿಯಾ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights