ಪ್ರಧಾನಮಂತ್ರಿ ಪರಿಹಾರ ನಿಧಿ ಇರುವಾಗ ಪಿಎಂ ಕೇರ್ಸ್ ನಿಧಿ ಏಕೆ?: ಟ್ವೀಟ್ ಮೂಲಕ ರಾಮಚಂದ್ರ ಗುಹ ಪ್ರಶ್ನೆ

ಕೊರೊನ ಸಾಂಕ್ರಾಮಿಕ ವ್ಯಾಪಕವಾಗಿ ದೇಶದಲ್ಲಿ ಹರಡುತ್ತಿರುವ ಈ ಸಮಯದಲ್ಲಿ “ಪಿಎಂ-ಕೇರ್ಸ್” (ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಯಲ್ಲಿ ಪರಿಹಾರ) ನಿಧಿಗೆ ದೇಣಿಗೆ ನೀಡಲು ಕೇಂದ್ರ ಸರ್ಕಾರ ಜನರನ್ನು ಮತ್ತು ಕಾರ್ಪೋರೆಟ್ ಸಂಸ್ಥೆಗಳನ್ನು ಕೋರಿತ್ತು.

ರಾಷ್ಟ್ರೀಯ ವಿಪತ್ತುಗಳ ಸಮಯದಲ್ಲಿ ಪರಿಹಾರ ನೀಡಲು ಈ ಸಾರ್ವಜನಿಕ ಧರ್ಮ ಸಂಸ್ಥೆಯನ್ನು ಹುಟ್ಟಿಹಾಕಿರುವುದಾಗಿ ತಿಳಿಸಿದ್ದು ಇದಕ್ಕೆ ಪ್ರಧಾನಿ ಅಧ್ಯಕ್ಷರಾಗಿದ್ದು, ರಕ್ಷಣಾ ಸಚಿವ, ಗೃಹ ಸಚಿವ ಮತ್ತು ವಿತ್ತ ಸಚಿವರು ಸದಸ್ಯರು. ಈ ನಿಧಿಗೆ ಕೊಡುವ ದೇಣಿಗೆಯನ್ನು ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿ ಖರ್ಚಿನ ಭಾಗವಾಗಿ ಪರಿಗಣಿಸಲಾಗುತ್ತದೆ ಎಂದು ಕೂಡ ಘೋಷಿಸಲಾಗಿತ್ತು. ಇದರ ಅಡಿಯಲ್ಲಿ ನೀಡುವ ದೇಣಿಗೆಗೆ 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಸಿಗುವುದಾಗಿ ತಿಳಿಸಲಾಗಿತ್ತು.

ಈ ಅಕೌಂಟ್ ಹೆಸರನ್ನು ಹೋಲುವ ನಕಲಿ ಅಕೌಂಟ್ ಕೂಡ ಕೆಲವರು ಸೃಷ್ಟಿಸಿದ್ದು ಅದರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಕೂಡ ನಂತರ ಸರ್ಕಾರ ಎಚ್ಚರಿಸಿತ್ತು.

ಪ್ರಧಾನ ಮಂತ್ರಿ ಪರಿಹಾರ ನಿಧಿ ಈಗಾಗಲೇ ಇರುವಾಗ ಪಿ-ಎಂ ಕೇರ್ಸ್ ಎಂಬ ಹೊಸ ನಿಧಿ ಸೃಷ್ಟಿಸುವ ಅಗತ್ಯವೇನಿತ್ತು ಎಂದು ಚಿಂತಕ-ಇತಿಹಾಸಕಾರ ರಾಮಚಂದ್ರ ಗುಹಾ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ. “ಇಂತಹ ರಾಷ್ಟ್ರೀಯ ದುರಂತದ ಸಮಯದಲ್ಲಿ ವ್ಯಕ್ತಿಯನ್ನು ಆರಾಧಿಸುವ ಹೆಸರು ಬೇಕಿತ್ತೆ?” ಎಂದು ಕೂಡ ಅವರು ಪ್ರಶ್ನಿಸಿದ್ದಾರೆ.

ಇಂತಹ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ, ಅಧಿಕಾರದಲ್ಲಿರುವ ಪಕ್ಷದ ಇಮೇಜ್ ಹೆಚ್ಚಿಸಿಕೊಳ್ಳಲು ಹಲವು ನಕಲಿ ಸಂದೇಶಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಚೈನಾಗಿಂತ ಹೆಚ್ಚು ಬೆಡ್ ಗಳನ್ನು ಮೋದಿ ಗುಜರಾತಿನಲ್ಲಿ ನಿರ್ಮಿಸಿದ್ದಾರೆ ಎಂಬಂತಹ ನಕಲಿ ಮೆಸೇಜ್ ಗಳು, ಕೊರೊನ ಸಮಯದಲ್ಲಿ, ಸಾಂಕ್ರಾಮಿಕ ತಡೆಯುವಲ್ಲಿ ಹೆಚ್ಚು ಕಾರ್ಯನಿರತವಾಗಿರಬೇಕಾದ ಸನಮಯದಲ್ಲಿ ಸಾಮಾನ್ಯರಿಗೆ ಮತ್ತು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಪಿಎಂ ಕೇರ್ಸ್ ಪರಿಹಾರ ನಿಧಿಯ ಬಗ್ಗೆ ಸೋಮವಾರ ಸಂಸದ ಶಶಿ ತರೂರ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ಪರಿಹಾರ ನಿಧಿಯನ್ನೇ ಹೆಸರು ಬದಲಿಸಿ ಪಿಎಂ ಕೇರ್ಸ್ ಮಾಡಬಹುದಿತ್ತು. ನಿಯಮಗಳು ಮತ್ತು ಖರ್ಚಿನ ಬಗ್ಗೆ ಪಾರದರ್ಶಕತೆ ಇಲ್ಲ ಹೊಸ ನಿಧಿಯನ್ನು ಸ್ಥಾಪಿಸಿದ್ದು ಏಕೆ? ಈ ಅನುಮಾನಾಸ್ಪದ ನಡೆಯ ಬಗ್ಗೆ ಪ್ರಧಾನಮಂತ್ರಿ ಕಾರ್ಯಾಲಯ ದೇಶಕ್ಕೆ ವಿವರಣೆ ನೀಡಬೇಕು ಎಂದಿದ್ದಾರೆ.

ಹಲವು ರಾಜ್ಯ ಸರ್ಕಾರಗಳು ಕೂಡ ದೇಣಿಗೆ ಸಂಗ್ರಹಿಸಲು ಪರಿಹಾರ ನಿಧಿಯ ಅಕೌಂಟ್ ವಿವರಗಳನ್ನು ಘೋಷಿಸಿವೆ.

https://twitter.com/CMofKarnataka/status/1244229798685097985

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights