‘ಬಲ ಇದೆ ಎಂದು ಹೊಡೆದಾಡುವವನ್ನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡುವವನು ಯೋಧ’
‘ಬಲ ಇದೆ ಎಂದು ಹೊಡೆದಾಡುವವನ್ನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡುವವನು ಯೋಧ’
ಇದನ್ನ ಓದಿದ್ರೆ ಯಾರಿಗಾದ್ರು ಚಪ್ಪಾಳೆ ತಟ್ಟಿ ಶಿಳ್ಳೆ ಹೊಡಿಬೇಕು ಅಂತ ಅನ್ನಿಸದೇ ಇರದು. ಅಂದಹಾಗೆ ಇದು ಪೈಲ್ವಾನ್ ಸಿನಿಮಾದ ಟ್ರೈಲರ್ ಹಿನ್ನೆಲೆ ಧ್ವನಿಯಿಂದ ಆರಂಭಗೊಳ್ಳುತ್ತದೆ
ಕಿಚ್ಚಾ ಸುದೀಪ್ ಅಂದ್ರೆ ಅದೇನೋ ಜೋಷ್…. ಅದೇನೋ ಕುತೂಹಲ… ಅವರ ಸಿನಿಮಾ ನಿರ್ಮಾಣಕ್ಕೂ ಮುನ್ನವೇ ನೋಡಬೇಕು ಅನ್ನೋ ಹುಚ್ಚನ್ನ ಕಿಚ್ಚಾ ಮೂಡಿಸಿಬಿಡ್ತಾರೆ.
ಅಷ್ಟೊಂದು ಕ್ರೇಜ್ ಹುಟ್ಟಿಸುವ ಕಿಚ್ಚಾ ಸುದೀಪ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಪೈಲ್ವಾನ್’ ಸಿನಿಮಾದ ಟ್ರೈಲರ್ ರೀಲೀಸ್ ಆಗಿದೆ. ನಿರ್ಮಾಣದಲ್ಲೇ ಸಖತ್ ಇಂಟ್ರಸ್ಟಿಂಗ್ ಮೂಡಿಸಿದ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಅಭಿನವ ಚಕ್ರವರ್ತಿಯ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಟ್ರೈಲರ್ ನಲ್ಲಿ ಕಿಚ್ಚ ಸುದೀಪ್ ಅಬ್ಬರಿಸಿದ್ದು, ನೋಡುಗರನ್ನು ಚಕಿತರನ್ನಾಗಿ ಮಾಡುತ್ತಿದೆ. ಮೊದಲ ಬಾರಿಗೆ ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೇಶದೆಲ್ಲಡೆ ಪೈಲ್ವಾನ್ ಹಾಡುಗಳು, ಪೋಸ್ಟರ್ ಗಳು ಅಬ್ಬರಿಸುತ್ತಿವೆ. ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆಯನ್ನು ನೀಡಿದೆ.
ಪಕ್ಕಾ ಪೈಲ್ವಾನ್ ನಾಗಿ ಕಾಣಿಸಿಕೊಂಡಿರುವ ಕಿಚ್ಚ ಗ್ರಾಮೀಣ ಪ್ರತಿಭೆಯಲ್ಲಿ ಮಿಂಚಿದ್ದಾರೆ. ಮುಂದೆ ಕಿಚ್ಚ ಹೇಗೆ ತನ್ನ ಎಲ್ಲ ಕಷ್ಟಗಳನ್ನು, ಬಡತನವನ್ನ ಎದುರಿಸಿ ಹೇಗೆ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಾನೆ? ಸುನಿಲ್ ಶೆಟ್ಟಿಯವರ ಪಾತ್ರ ಟ್ರೈಲರ್ ನಲ್ಲಿ ಎಲ್ಲರನ್ನು ಸೆಳೆಯುತ್ತದೆ. ಪೈಲ್ವಾನ್ ಕೇವಲ ಹೊಡೆದಾಟದ ಸಿನಿಮಾ ಮಾತ್ರ ಅಲ್ಲ, ಇಲ್ಲೊಂದು ಸೆಂಟಿಮೆಂಟ್ ಕಥೆ ಇದೆ ಎಂಬ ಝಲಕ್ ಸಹ ಟ್ರೈಲರ್ ನಲ್ಲಿದೆ.
ಸೆಪ್ಟೆಂಬರ್ 12ರಂದು ಪೈಲ್ವಾನ್ ಬಿಡುಗಡೆಯಾಗಲಿದ್ದು, ಕಿಚ್ಚನಿಗೆ ಜೋಡಿಯಾಗಿ ಆಕಾಂಕ್ಷ ಸಿಂಗ್ ನಟಿಸಿದ್ದಾರೆ. ಗಜಕೇಸರಿ ಖ್ಯಾತಿಯ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿಬಂದಿದ್ದು, ಬಾಲಿವುಡ್ ನಟ ಸುನೀಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಕಿಚ್ಚಾ ಫ್ಯಾನ್ಸ್ ಟ್ರೈಲರ್ ಗೆ ಫಿದಾ ಅಗಿದ್ದು ಸಿನಿಮಾ ನೋಡಲು ಕಾತುರರಾಗಿದ್ದಾರೆ.