ಬಹುತೇಕ ಪೂರ್ಣಗೊಂಡ ದಸರಾ ತಯಾರಿ : ಸೆ.29ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ

ವಿಶ್ವವಿಖ್ಯಾತಿ ದಸರಾ ಹಬ್ಬದ ತಯಾರಿ ಬಹುತೇಕ ಪೂರ್ಣಗೊಂಡಿದ್ದು,  ಇವತ್ತು ನಾಳೆ ದಸರೆಯ ಎಲ್ಲ ಕಾರ್ಯಕ್ರಮದ ಸಿದ್ದತೆ ಮುಗಿಯಲಿದೆ.

ಸೆ.29ರಂದು ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗಲಿದೆ. ಅಂದೇ ಹಲವು ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಅ.01ಕ್ಕೆ ಪಿ.ವಿ ಸಿಂಧು ಅವರು ಯುವ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.

ನಾಡಹಬ್ಬ ದಸರಾಗೆ ಡಿಸಿಎಂಗಳು ಸೇರಿ ಸಚಿವರು ಬರಲಿದ್ದಾರೆ. ಯುವ ದಸರಾದ ಪಟ್ಟಿ ನಾಳೆ ಫೈನಲ್ ಆಗಲಿದೆ. ಇವತ್ತು ಆರು ಕಾರ್ಯಕ್ರಮದ ಪಟ್ಟಿ ಫೈನಲ್ ಆಗಿದೆ. ಮೈಸೂರು ನಗರದಾದ್ಯಂತ 100ಕಿ.ಮೀ ವರೆಗೆ ದೀಪಾಲಂಕಾರ ವ್ಯವಸ್ಥೆ ಆಗಿದೆ. ಶೇ.90ರಷ್ಟು ದೀಪಾಲಂಕಾರ ವ್ಯವಸ್ಥೆ ಆಗಿದ್ದು, ನಾಳೆಯೊಳಗೆ ಕಂಪ್ಲೀಟ್ ಆಗಲಿದೆ.

ಇನ್ನೂ ದಸರಾವನ್ನ ಜನರ ದಸರಾ ಮಾಡಬೇಕೆಂದು ಅಚ್ಚುಕಟ್ಟಾಗಿ ಮಾಡಿದ್ದೇವೆ. ಪಂಜಿನ ಕವಾಯತಿಗೆ ಕೇಂದ್ರದ ಸಚಿವರು ಬರಲಿದ್ದಾರೆ. ಇತರೆ ಪಕ್ಷದ ಪ್ರಮುಖರನ್ನು ದಸರೆಗೆ ಆಹ್ವಾನ ನೀಡಲಾಗಿದೆ. 2019ರ ದಸರಾವನ್ನ ತಾಯಿ ಚಾಮುಂಡೇಶ್ವರಿಗೆ ಅರ್ಪಣೆ ಮಾಡೋಣ‌. ಎಲ್ಲಾ ಇಲಾಖೆಯ ಅಧಿಕಾರಿಗಳು ಕೆಲಸ ಚೆನ್ನಾಗಿ ಮಾಡಿದ್ದಾರೆ ಎಂದು ವಸತಿ ಸಚಿವ ಹಾಗೂ ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಶಸಸ್ತ್ರ ಮಿಸಲು ಪಡೆ ಸಿಬ್ಬಂದಿಯಿಂದ ಮೂರನೇ ಹಂತದ ಫಿರಂಗಿ ತಾಲೀಮು ನಡೆಸಲಾಯ್ತು. ಆನೆಗಳಿಗೆ ಹಾಗೂ ಕುದುರೆಗಳಿಗೆ ಭಾರಿ ಶಬ್ದದ ಪರಿಚಯಿಸುವ ಈ ಕೊನೆಯ ತಾಲೀಮು ಮಾಡಿಸಲಾಯ್ತು.
ಮೈಸೂರಿನ ಅಂಬಾ ವಿಲಾಸ ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿ, ನಗರ ಪೊಲೀಸ್ ಕಮಿಷನರ್‌, ಟಿ. ಬಾಲಕೃಷ್ಣ ನೇತೃತ್ವದಲ್ಲಿ, 7 ಪಿರಂಗಿ ಗಾಡಿಗಳ ಮೂಲಕ 3 ಸುತ್ತುಗಳಲ್ಲಿ ಒಟ್ಟು 21 ಕುಶಾಲತೋಪು ಸಿಡಿಸಿ ಪೂರ್ವಾಭ್ಯಾಸ,
ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ 12 ಆನೆಗಳು ಮತ್ತು 25 ಕುದುರೆಗಳಿಗೆ ಫಿರಂಗಿ ಶಬ್ದ ಪರಿಚಯ ತಾಲೀಮು ಮಾಡಿಸಲಾಯಿತು. ಬೆದರುವ ಲಕ್ಷಣಗಳಿರುವ 6 ಆನೆಗಳ ಕಾಲುಗಳನ್ನ ಸರಪಣಿಯಿಂದ ಕಟ್ಟಿ ಮುಂಜಾಗ್ರತೆ ಕ್ರಮ ವಹಿಸಿಲಾಗಿದೆ. ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿಗಳಿಂದ ಫಿರಂಗಿ ತಾಲೀಮು ನಡೆಸಲಾಯಿತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights