FACT CHECK | ಮೇಘಸ್ಫೋಟದ ವಿಡಿಯೋ ಎಂದು AI ವಿಡಿಯೋ ಹಂಚಿಕೆ

ಆಗಸ್ಟ್ 9 ರಂದು ಉತ್ತರಾಖಂಡದ ತರಾಲಿ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಖಿರ್ ಗಂಗಾ ನದಿಯಲ್ಲಿ ಪ್ರವಾಹ ಉಂಟಾಯಿತು. ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹಕ್ಕೆ ಮನೆಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಕೊಚ್ಚಿಹೋಗಿವೆ. ವರದಿಗಳ ಪ್ರಕಾರ 5 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.

ಮೇಘಸ್ಫೋಟದ ಈ ವೀಡಿಯೋ ನಿಜವಾದದ್ದೇ, ಇಲ್ಲ ಇದು ಎಐ ಸೃಷ್ಟಿ!

ಈ ಸಂದರ್ಭದಲ್ಲಿ, ಮೇಘಸ್ಫೋಟ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ (ಆರ್ಕೈವ್) ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಆಕಾಶದಿಂದ ಹಠಾತ್ತನೆ ಮಳೆ ಸುರಿದು ಪ್ರವಾಹಕ್ಕೆ ಕಾರಣವಾಗುವುದನ್ನು ಕಾಣಬಹುದು.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕಂಧ ಒಡಿಸ್ಸೀಸ್ ವೈನ್ಸ್ ಇನ್‌ಸ್ಟಾಗ್ರಾಮ್ ಪುಟದಲ್ಲಿ ಆಗಸ್ಟ್ 5 ರಂದು ಇದೇ ವೀಡಿಯೊ ಕಂಡುಬಂತು. ಅದರ ಶೀರ್ಷಿಕೆ ಹೀಗಿದೆ, ‘‘ಈ ವಿಡಿಯೋವನ್ನು ಮನರಂಜನಾ ಉದ್ದೇಶಗಳಿಗಾಗಿ AI ಮತ್ತು VFX ತಂತ್ರಜ್ಞಾನದೊಂದಿಗೆ ರಚಿಸಲಾಗಿದೆ.’’

ಆ ಇನ್‌ಸ್ಟಾಗ್ರಾಮ್ ಪುಟವನ್ನು ಪರಿಶೀಲಿಸಿದಾಗ, ಮೆಟ್ರೋ ನಿಲ್ದಾಣದೊಳಗೆ ಹೆಲಿಕಾಪ್ಟರ್ ಬರುವ, ಚಿತ್ರಮಂದಿರದಲ್ಲಿ ಅಪಘಾತ ಸಂಭವಿಸುವ ಅನೇಕ ಗ್ರಾಫಿಕ್ ದೃಶ್ಯಗಳನ್ನು ಪೋಸ್ಟ್ ಮಾಡಲಾಗಿದೆ. ಇವುಗಳನ್ನು ಒಳಗೊಂಡ ವೈರಲ್ ವೀಡಿಯೊವನ್ನು ಮನರಂಜನಾ ಉದ್ದೇಶಗಳಿಗಾಗಿ ರಚಿಸಲಾಗಿದೆ ಎಂದು ತಿಳಿದುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಮೇಘಸ್ಫೋಟ ಎಂದು ಹೇಳುವ ವಿಡಿಯೋವನ್ನು AI ಮತ್ತು VFX ತಂತ್ರಜ್ಞಾನವನ್ನು ಬಳಸಿ ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮೇಘಸ್ಫೋಟದ ವಿಡಿಯೋ ಎಂದು AI ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights