ಮೂರು ವರ್ಷದ ಮಗುವಿಗೆ ನೀಡಿದ್ದು ಬರೋಬ್ಬರಿ 16 ಕೋಟಿ ಮೌಲ್ಯದ ಇಂಜೆಕ್ಷನ್‌!

ಬೆನ್ನುಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದ ಮೂರು ವರ್ಷದ ಮಗುವೊಂದು 16 ಕೋಟಿ ಬೆಲೆಯ ಇಂಜೆಕ್ಷನ್‌ ಪಡೆದುಕೊಂಡಿದ್ದು, ವಿಶ್ವದ ಅತಿ ದುಬಾರಿ ಇಂಜೆಕ್ಷನ್‌ ಪಡೆದ ಕಿರಿಯ ಮಗುವಾಗಿದೆ.

ಆಂಧ್ರಪ್ರದೇಶದ ಹೈದರಾಬಾದ್‌ನ ಆಯನ್ಸ್ ಗುಪ್ತಾ ಹೆಸರಿನ ಮೂರು ವರ್ಷದ ಮಗುವಿಗೆ ಅಪರೂಪದ ಬೆನ್ನುಮೂಳೆಯ ಸ್ನಾಯು ಕ್ಷೀಣತೆ (spinal muscular atrophy) ಎಂಬ ರೋಗ ಕಾಡುತ್ತಿತ್ತು. ಅದರ ಜೀನ್ ಥೆರಪಿ ಚಿಕಿತ್ಸೆಗೆ 16 ಕೋಟಿ ರೂ ಬೆಲೆಯ ಇಂಜೆಕ್ಷನ್ ಅಗತ್ಯವಿತ್ತು. ಆ ಮಗುವಿನ ಪೋಷಕರು ಕ್ರೌಡ್ ಫಂಡಿಂಗ್‌ನಲ್ಲಿ ಮನವಿ ಮಾಡಿದಾಗ 62,000 ಜನರು ದೇಣಿಗೆ ನೀಡಿದ್ದರ ಪರಿಣಾಮವಾಗಿ 16 ಕೋಟಿ ರೂ ಸಂಗ್ರಹವಾಯಿತು. ಕೊನೆಗೂ ವಿಶ್ವದ ಅತಿ ದುಬಾರಿ ಇಂಜೆಕ್ಷನ್ ಅನ್ನು ಆ ಮಗು ಪಡೆಯಿತು…

ಹೈದರಾಬಾದ್‌ನಲ್ಲಿರುವ ಅಲ್ಲಿನ ರೈನ್ಬೊ ಚಿಲ್ಡ್ರನ್ಸ್ ಹಾಸ್ಪಿಟಲ್‌ನಲ್ಲಿ ಜೂನ್ 09 ರಂದು ಆಯನ್ಸ್ ಝೊಲ್ಗೆನ್ಸ್ಮ ಎಂಬ ಔಷಧಿಯನ್ನು ಅಮೆರಿಕದಿಂದ ಆಮದು ಮಾಡಿಕೊಂಡು ನೀಡಲಾಯಿತು. ಪೋಷಕರಾದ ಯೋಗೇಶ್ ಗುಪ್ತಾ ಮತ್ತು ರುಪಾಲ್ ಗುಪ್ತಾ ಮೊದಲಿಗೆ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಕಷ್ಟ ಎಂದುಕೊಂಡಿದ್ದರು. ಆದರೆ ImpactGuru.com ಮೂಲಕ ಈ ವರ್ಷದ ಫೆಬ್ರವರಿಯಿಂದ ಕ್ರೌಡ್ ಫಂಡಿಂಗ್‌ಗೆ ಮನವಿ ಮಾಡಿದರು. ಜೂನ್‌ ವೇಳೆಗೆ ಹಣ ಸಂಗ್ರಹವಾಗಿ ಚಿಕಿತ್ಸೆಗೆ ಸಹಕಾರಿಯಾಯಿತು.

“62,450 ದೇಣಿಗೆ ನೀಡಿದ್ದಾರೆ. ದಾನಿಯೊಬ್ಬರು 56 ಲಕ್ಷ ನೀಡಿದ್ದಾರೆ. ವಿಶ್ವದ ದುಬಾರಿ ಔಷಧಿಯನ್ನು ನನ್ನ ಮಗನಿಗೆ ನೀಡಿ ಆತನನ್ನು ಬದುಕಿಸಲು ನೆರವಾದ ಎಲ್ಲಾ ದಾನಿಗಳಿಗೆ ನಾವು ಋಣಿಯಾಗಿದ್ದೇವೆ” ಎಂದು ಯೋಗೇಶ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ, ಅನುಷ್ಕ ಶರ್ಮಾ, ಅನಿಲ್ ಕಪೂರ್, ಅಜಯ್ ದೇವಗನ್, ಧರ್ಮ ಪ್ರೊಡಕ್ಷನ್, ಟಿ-ಸೀರಿಸ್, ಸಿಪ್ಲಾ ಸೇರಿದಂತೆ ಹಲವಾರು ಜನ ದೇಣಿಗೆ ನೀಡುವ ಮೂಲಕ ಬೆಂಬಲ ನೀಡಿದ್ದರು.

ಬೆನ್ನುಮೂಳೆಯ ಸ್ನಾಯು ಕ್ಷೀಣತೆಯು ಎಸ್‌ಎಂಎನ್ 1 ಜೀನ್‌ನಲ್ಲಿನ ದೋಷದಿಂದಾಗಿ ಉಂಟಾಗುವ ಕಾಯಿಲೆಯಾಗಿದೆ. ಪೀಡಿತ ಮಕ್ಕಳು ಆರಂಭದಲ್ಲಿ ಮೇಲಿನ ಮತ್ತು ಕೆಳಗಿನ ಕಾಲುಗಳನ್ನು ಒಳಗೊಂಡ ಸ್ನಾಯು ದೌರ್ಬಲ್ಯವನ್ನು ಹೊಂದುತ್ತಾರೆ. ಈ ಎಸ್‌ಎಂಎ ಸಾಮಾನ್ಯವಾಗಿ 10,000 ಮಕ್ಕಳಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ, ಮತ್ತು ಪ್ರಸ್ತುತ ಭಾರತದಲ್ಲಿ ಸುಮಾರು 800 ಮಕ್ಕಳು ಎಸ್‌ಎಂಎಯಿಂದ ಬಳಲುತ್ತಿದ್ದಾರೆ.

ಝೊಲ್ಗೆನ್ಸ್ಮ ಒಂದೇ ಡೋಸ್ ಇಂಟ್ರಾವೆನಸ್ ಇಂಜೆಕ್ಷನ್ ಜೀನ್ ಚಿಕಿತ್ಸೆಯಾಗಿದೆ. 16 ಕೋಟಿ ರೂ.ಗಳ ಬೆಲೆಯ ಹೊರತಾಗಿ, ಕೇಂದ್ರೀಯ ಹಣಕಾಸು ಸಚಿವಾಲಯವು ಮಾನವೀಯ ಆಧಾರದ ಮೇಲೆ ಈ ಔಷಧದ ಮೇಲೆ ಸುಮಾರು 6 ಕೋಟಿ ಮೌಲ್ಯದ ಆಮದು ತೆರಿಗೆಯನ್ನು ಮನ್ನಾ ಮಾಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಇದನ್ನೂ ಓದಿ: ಮುಂದಿನ ಚುನಾವಣೆ ವೇಳೆಗೆ ಪಂಜಾಬ್‌ ಸಿಎಂ ಮತ್ತು ಮೋದಿ ನಡುವೆ ಗಟ್ಟಿ ಬಾಂಧವ್ಯ ಬೆಳೆಯಲಿದೆ: ಮನೀಶ್‌ ಸಿಸೋಡಿಯಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಮೂರು ವರ್ಷದ ಮಗುವಿಗೆ ನೀಡಿದ್ದು ಬರೋಬ್ಬರಿ 16 ಕೋಟಿ ಮೌಲ್ಯದ ಇಂಜೆಕ್ಷನ್‌!

  • June 14, 2021 at 4:33 pm
    Permalink

    Hi my son Sagar Hussain 2 year 1 month he also suffering from SMA pls help us

    Reply

Leave a Reply

Your email address will not be published.

Verified by MonsterInsights