ಮೃಗಾಲಯದ 7 ಹುಲಿ, 4 ಸಿಂಹ ಸೇರಿ ವಿವಿಧ ವನ್ಯಪ್ರಾಣಿಗಳಲ್ಲಿ ಕೋವಿಡ್‌ ಪಾಸಿಟಿವ್‌!

ರಾಂಚಿಯಲ್ಲಿರುವ ಭಗವಾನ್ ಬಿರ್ಸಾ ಜೈವಿಕ ಉದ್ಯಾನದಲ್ಲಿ ಏಳು ಬಂಗಾಳ ಹುಲಿಗಳು ಮತ್ತು ಇತರ ಪ್ರಾಣಿಗಳಿಗೆ ಕೋವಿಡ್ ಪಾಸಿಟಿವ್ ಬಂದಿರುವುದಾಗಿ ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೀರ್ಘಕಾಲದ ಅನಾರೋಗ್ಯದ ನಂತರ ಜೂನ್ 3 ರಂದು ಶಿವ ಎಂಬ ಹುಲಿ ಮೃತಪಟ್ಟಿದ್ದು, ಅದರಿಂದ ಪಡೆಯಲಾದ ಮಾದರಿಗಳು ನೆಗೆಟಿವ್ ಬಂದಿದೆ.

ದೇಶದ ವಿವಿಧೆಡೆಯಿಂದ ಉತ್ತರಪ್ರದೇಶದ ಬರೇಲಿಯಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದ್ದ ಹುಲಿ ಪಂಗಡಕ್ಕೆ ಸೇರಿದ ಪ್ರಾಣಿಗಳ ಪ್ರಯೋಗಾಲಯ ಮಾದರಿಗಳು ಪಾಸಿಟಿವ್ ಬಂದಿವೆ.

‘ರಾಯಲ್ ಬಂಗಾಳದ ಏಳು ಹುಲಿಗಳು ಸೇರಿದಂತೆ 12 ಪ್ರಾಣಿಗಳ ಕೋವಿಡ್-19 ಪರೀಕ್ಷಾ ವರದಿಗಳು ಪಾಸಿಟಿವ್ ಬಂದಿದೆ’ಎಂದು ಮೃಗಾಲಯದ ನಿರ್ದೇಶಕ ವೈ ಕೆ ದಾಸ್ ಪಿಟಿಐಗೆ ತಿಳಿಸಿದ್ದಾರೆ.

ಜಾವಾ, ಮಲಿಕ್, ಗೌರಿ, ಲಕ್ಷ್ಮಿ, ಸರಸ್ವತಿ ಮತ್ತು ಕಾವೇರಿ, ಏಷ್ಯಾಟಿಕ್ ಸಿಂಹಗಳಾದ ವಿರು ಮತ್ತು ಜಯ, ಹೈಬ್ರಿಡ್ ಸಿಂಹ ಪ್ರಿಯಾಂಕಾ, ಬ್ಲಾಕ್ ಪ್ಯಾಂಥರ್ ಮಿರ್ಜಾ, ಚಿರತೆ ರಾಧಾ ಮಾದರಿಗಳು ಪಾಸಿಟಿವ್ ಬಂದಿವೆ.

ಮೃಗಾಲಯವನ್ನು ಮುಚ್ಚಿರುವಾಗ, ಪ್ರಾಣಿಗಳ ನಡುವೆ ಸೋಂಕು ಹರಡುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ, ಇದರಲ್ಲಿ ಮೃಗಾಲಯದ ಸಿಬ್ಬಂದಿಗೆ ಲಸಿಕೆ ಹಾಕುವುದು ಮತ್ತು ಅವರ ನಿಯಮಿತ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಉದ್ಯಾನವನದ ಆವರಣ ಮತ್ತು ಇತರ ಭಾಗಗಳಲ್ಲಿ ನಿಯಮಿತವಾಗಿ ಸ್ಯಾನಿಟೈಸೇಶನ್ ಕಾರ್ಯ ಕೈಗೊಳ್ಳಲಾಗಿದೆ.

ಮೇ ತಿಂಗಳಲ್ಲಿ ಹೈದರಾಬಾದ್‌ನಲ್ಲಿ ಎಂಟು ಏಷ್ಯಾಟಿಕ್ ಸಿಂಹಗಳಿಗೆ ಕೋವಿಡ್ ಪಾಸಿಟಿವ್ ಆಗಿದ್ದು, ರಾಂಚಿ ಮೃಗಾಲಯದಲ್ಲಿ ಅಲರ್ಟ್ ಘೋಷಿಸಲಾಗಿದೆ.

ಜೂನ್ 4 ರಂದು, ಚೆನ್ನೈ ಬಳಿಯ ವಂಡಲೂರಿನ ಅರಿಗ್ನಾರ್ ಅನ್ನಾ ಪ್ರಾಣಿ ಸಂಗ್ರಹಾಲಯದಲ್ಲಿ ಸಿಂಹಿಣಿ ನೀಲಾ ಕೋವಿಡ್-19 ಗೆ ಬಲಿಯಾಗಿದ್ದು, ಇತರೆ ಒಂಬತ್ತು ಪ್ರಾಣಿಗಳಲ್ಲಿ ಕೋವಿಡ್ ಪಾಸಿಟಿವ್ ಆಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights