ಭಾರತ ಹಿಂದೂ ರಾಷ್ಟ್ರವಾಗದೇ ಇರುವುದಕ್ಕೆ ನೆಹರು ಕಾರಣ: ಬಿಜೆಪಿ ಶಾಸಕ

ಜವಾಹರಲಾಲ್ ನೆಹರೂ ಅವರ ನಾಯಕತ್ವದಿಂದಾಗಿ ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಸಾಧ್ಯವಾಗಿಲ್ಲ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಶನಿವಾರ ಹೇಳಿದ್ದಾರೆ.

ನೆಹರೂ ಅವರನ್ನು ಹೇಡಿ ಎಂದು ಹೇಳಿರುವ ಅವರು, ಹೊಸ ವಿವಾದವನ್ನು ಸೃಷ್ಟಿಸಿಕೊಂಡಿದ್ದಾರೆ. ಭಾರತದ ವಿಭಜನೆಗೆ ಕಾಂಗ್ರೆಸ್ಸಿನ ಕೊಳಕು ಚಿಂತನೆಯೆ ಕಾರಣ ಎಂದು ಆರೋಪಿಸಿದ ಸುರೇಂದ್ರ ಸಿಂಗ್‌, “ಒಂದು ವೇಳೆ ನೆಹರೂ ಪ್ರಧಾನ ಮಂತ್ರಿಯಾಗಿರದಿದ್ದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬಹುದಿತ್ತು” ಎಂದು ಹೇಳಿದ್ದಾರೆ.

“ಎರಡು ಸಂಸ್ಕೃತಿಗಳನ್ನು ಆಧರಿಸಿ ಎರಡು ರಾಷ್ಟ್ರಗಳು ರೂಪುಗೊಂಡವು. ಆದರೆ ಹೇಡಿ ನೆಹರೂ ಅವರ ನಾಯಕತ್ವದಿಂದಾಗಿ ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲಾಗಿಲ್ಲ” ಎಂದು ಬಿಜೆಪಿ ಶಾಸಕ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೆಹರೂ ಬದಲಿಗೆ ಸರ್ದಾರ್ ಪಟೇಲ್ ಪ್ರಧಾನಿಯಾಗಿದ್ದರೆ ಭಾರತ ಹಿಂದೂ ರಾಷ್ಟ್ರವಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಕಾಶ್ಮೀರ ಕೊಟ್ಟು ಹೈದರಾಬಾದ್ ಪಡೆಯಲು ಸಿದ್ಧರಿದ್ದರು ಸರ್ದಾರ್ ಪಟೇಲ್; ಉಳಿಸಿದವರು ನೆಹರೂ!

ಕಾಶ್ಮೀರದಲ್ಲಿ 370 ನೇ ವಿಧಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಸುರೇಂದ್ರ ಸಿಂಗ್‌‌, “ಅವರ ವಿರುದ್ದ ದೇಶದ್ರೋಹದ ಪ್ರಕರಣ ದಾಖಲಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಜಮ್ಮು ಕಾಶ್ಮೀರದ 370 ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರ ಅತ್ಯಂತ ದುಃಖಕರವಾದುದು. ಕಾಂಗ್ರೆಸ್ ಪಕ್ಷವು ಖಂಡಿತವಾಗಿಯೂ ಈ ವಿಷಯದ ಬಗ್ಗೆ ಮರುಚಿಂತನೆ ಮಾಡುತ್ತಿತ್ತು ಎಂದು ಸಾಮಾಜಿಕ ಜಾಲತಾಣದ ಸಂವಾದವೊಂದರಲ್ಲಿ ತಿಳಿಸಿದ್ದರು. ಇದನ್ನು ಬಿಜೆಪಿಯು ವಿವಾದವನ್ನಾಗಿ ಮಾಡಿದೆ.

ಇದನ್ನೂ ಓದಿ: ತೆಲಂಗಾಣ: TRS ಪಕ್ಷದ ಶಾಸಕ ಎಟೆಲಾ ರಾಜೇಂದರ್ ರಾಜೀನಾಮೆ; ಜೂನ್‌ 14ಕ್ಕೆ BJPಗೆ ಸೇರಲಿದ್ದಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights