ಬಿಜೆಪಿ ಕೊಟ್ಟ ಒತ್ತಡದ ಏಟಿಗೆ ಮಣಿದ ಸ್ವಾಮೀಜಿ : ಕೊನೆಗೂ ಯಶಸ್ವಿಯಾದ ಪಂಚಪೀಠ ಸಂಧಾನ

ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಿವಲಿಂಗ  ಶಿವಾಚಾರ್ಯ ಸ್ವಾಮೀಜಿ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಹೌದು… ಬಿಜೆಪಿ ಕೊಟ್ಟ ಒತ್ತಡದ ಏಟಿಗೆ ಸ್ವಾಮೀಜಿ ಮಣಿದಿದ್ದು, ಕೊನೆಗೂ ಪಂಚಪೀಠ ಸಂಧಾನ ಯಶಸ್ವಿಯಾಗಿದೆ. ಕಬ್ಬಿಣಕಂಥಿಮಠದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಮುಖಂಡರಿಂದ ಭರವಸೆ ಕೊಟ್ಟು ಪಂಚಪೀಠಾಧಿಪತಿ ಸ್ವಾಮೀಜಿಗಳ ಮನವೊಲಿಕೆಗೆ ಬಿ ವೈ ರಾಘವೇಂದ್ರ ಯಶಸ್ವಿಯಾಗಿದ್ದಾರೆ.

ಈ ಹಿನ್ನೆಲೆ ನಾಮಪತ್ರ ವಾಪಸ್ಸು ತೆಗದುಕೊಳ್ಳಲು ಸ್ವಾಮೀಜಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಅಧಿಕೃತವಾಗಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳುವುದೊಂದೆ ಬಾಕಿ ಇದೆ. ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಸುದ್ದಿಯಾಗಿದ್ದ ಹಿರೆಕೇರೂರಿಂದ ಜೆಡಿಎಸ್ ಅಭ್ಯರ್ಥಿಯಾಗಿರೊ ಸ್ವಾಮೀಜಿ, ಯಾರ ಮಾತಿಗೂ ಮಣಿಯದೆ ಅಜ್ಞಾತ ಸ್ಥಳದಲ್ಲಿದ್ದರು.

ಕೊನೆಗೂ ಬಿಜೆಪಿ ಮತ್ತು ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಂಧಾನ ಸಫಲವಾಗಿದ್ದು ಬಿಸಿ ಪಾಟೀಲ್ ಗೆಲವು ಸಲಿಸಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights