‘ಬಿಜೆಪಿ ಸುಭದ್ರವಾಗಿದೆ, ಕಾಂಗ್ರೆಸ್ ಚುನಾವಣೆ ಬರುತ್ತೆ ಎಂದು ಭೀತಿ ತೋರಿಸಿಕೊಂಡಿದ್ದಾರೆ’ ಡಿಸಿಎಂ

ಈ ಹಿಂದೆಯೇ ಇರುವಂತಹ ಕಾಯ್ದೆ ಇದು, ಪರಸ್ಪರ ತಿಕ್ಕಾಟ ಘರ್ಷಣೆ ನಡೆಯಬಾರದು, ಎಲ್ಲರೂ ಈ ಕಾಯ್ದೆಯನ್ನ ಅನುಸರಿಸಬೇಕು, ಜನರಲ್ಲಿ ಕಾಯ್ದೆ ಬಗ್ಗೆ ಗೊಂದಲವಿದ್ದು, ಅರಿವು ಮೂಡಿಸಬೇಕಿದೆ, ಗೋಹತ್ಯೆ ನಿಷೇಧ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲಾ, ಗೋಹತ್ಯೆ ನಿಷೇಧ ಸಂವಿಧಾನದಲ್ಲಿದೆ ಎಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಹೇಳಿದ್ದಾರೆ.

ನೆರೆ ಪರಿಹಾರ ಸಂಪೂರ್ಣವಾಗಿ ನಿಭಾಯಿಸಿದ್ದೇವೆ, ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬಂದಿದೆ ಎಂದ್ರು.

ಆರ್,ಅಶೋಕ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲಾ, ಅವರು ನನ್ನ ಹಿರಿಯಣ್ಣ ಇದ್ದ ಹಾಗೆ ಇದೆಲ್ಲಾ ಮಾಧ್ಯಮಗಳ ಸೃಷ್ಟಿ, ನಮ್ಮ ಸರ್ಕಾರ ಸುಭದ್ರವಾಗಿದೆ, 5 ವರ್ಷ ಪೂರೈಸುತ್ತೇವೆ, ಯಾವುದೇ ಚುನಾವಣೆ ಬರೊಲ್ಲಾ, ಸರ್ಕಾರ ಸಂಪೂರ್ಣ ‌ಅವಧಿ ಪೂರೈಸುತ್ತೆ, ಚುನಾವಣೆ ಬರುತ್ತೆ ಎಂದು ಭೀತಿ ತೋರಿಸಿಕೊಂಡಿದ್ದಾರೆ, ಕಾಂಗ್ರೆಸ್ ನವರೂ ಕೂಡ ಚುನಾವಣೆ ಹೆದರಿಸಲು ಮುಂದಾಗೊಲ್ಲಾ, ಬಿಜೆಪಿಯೂ ಚುನಾವಣೆಗೆ ನಡೆಸಲು ಸಿದ್ದರಿಲ್ಲಾ ಎಂದು ಸ್ಪಷ್ಟಪಡಿಸಿದರು.

2008 ರಲ್ಲಿ ಚುನಾವಣಾ ಸಂದರ್ಭದಲ್ಲಿ ಹರಕೆ ಹೊತ್ತುಕೊಂಡಿದ್ದೆ, ಆಗ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ, ಈಗ ಹರೆಕೆ ತೀರಿಸಲು ಬಂದಿದ್ದೇನೆ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights