ಬೆಂಗಳೂರು ಟ್ರಾಫೀಕ್ ಪೊಲೀಸರಿಗೆ ಚಾಲೆಂಜ್ ಹಾಕಿದ್ದ ಕಾರ್ ಡ್ರೈವರ್ ವಶ….
ಕಾರಿನಲ್ಲಿ ಸೆಲ್ಫಿ ವಿಡಿಯೋ ಮಾಡಿ ದಾಖಲೆ ಇಲ್ಲದೆ ವಾಹನ ಓಡಿಸುವುದಾಗಿ ಪೊಲೀಸರಿಗೆ ಚಾಲೆಂಗ್ ಮಾಡಿದ್ದ ಚಾಲಕನನ್ನು ಮೈಸೂರು ಟ್ರಾಫೀಕ್ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಕೆಆರ್.ನಗರ ತಾಲೂಕಿನ ಮಾಚನಹಳ್ಳಿ ಗ್ರಾಮದ ರಘು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆವಾಜ್ ಹಾಕಿದವನ ಗುರುತು ಪತ್ತೆಹಚ್ಚಿ ಸ್ವಗ್ರಾಮದಲ್ಲೇ ಬಂಧಿಸಿದ್ದಾರೆ. ಅಷ್ಟಕ್ಕೂ ಆ ಚಾಲಕ ಹಾಕಿದ್ದ ಅವಾಜ್ ಹೇಗಿತ್ತು ಗೋತ್ತಾ..? ಸಾಧ್ಯವಾದ್ರೆ ನೀವು ಒಂದು ಬಾರಿ ಕೇಳಿಬಿಡಿ.
ಕೇಳಿದ್ರಾ ಈತನ ಮಾತನ್ನ ತಾಕತ್ತು ಇದ್ರೆ ಈತನನ್ನು ಬಂಧಿಸಬೇಕಂತೆ ಪೊಲೀಸರು. ವಿಡಿಯೋ ಮಾಡುವುದು ಮಾತ್ರವಲ್ಲದೇ ಕಾರ್ ನಂಬರ್ ಕೂಡ ವಿಡಿಯೋದಲ್ಲಿ ತೋರಿಸಿದ್ದಾನೆ. ಇಷ್ಟು ಸಾಕ್ಷಿ ಸಿಕ್ರೆ ಬಿಡ್ತಾರಾ ಪೊಲೀಸ್ರು…? ಹುಡಿಕೊಕೊಂಡು ಹೋಗಿ ಈತನನ್ನ ಠಾಣೆಗೆ ಕರೆದೊಯ್ದಿದ್ದಾರೆ.
ಎರಡು ದಿನಗಳ ಹಿಂದೆ ಕಾರಿನಲ್ಲಿ ಸೆಲ್ಫಿ ವಿಡಿಡೋ ಮಾಡಿ ದಾಖಲೆ ಇಲ್ಲದೆ ವಾಹನ ಓಡಿಸುವುದಾಗಿ ಪೊಲೀಸರಿಗೆ ಚಾಲೆಂಜ್ ಮಾಡಿದ್ದ, ಅಷ್ಟೇ ಅಲ್ಲದೇ ತಾಕತ್ತಿದ್ದರೆ ನನ್ನನ್ನು ಹಿಡಿದು ಫೈನ್ ಹಾಕಿ ಎಂದು ಆವಾಜ್ ಹಾಕಿದ್ದ. ಕಾರಿನ ನಂ ಪ್ಲೇಟ್ ಸಹ ತೋರಿಸಿದ್ದ ಡ್ರೈವರ್ ರಘು ಎನ್ನುವ ಡ್ರೈವರ್‌ನ್ನ ವಶಕ್ಕೆ ಪಡೆದ ಮೈಸೂರು ಎನ್.ಆರ್.ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.