ಬೆಳ್ಳುಳ್ಳಿ ಬೆಲೆ ಧೀಡಿರ್ ಏರಿಕೆ ಹಿನ್ನೆಲೆ : ಹೆಚ್ಚುತ್ತಿರುವ ಬೆಳ್ಳುಳ್ಳಿ ಕಣಕ್ಕೆ ಕಳ್ಳರ ಕಾಟ
ಬಳ್ಳೊಳ್ಳಿ ಬೆಲೆ ಧೀಡಿರ್ ಎರಿಕೆ ಹಿನ್ನೆಲೆಯಲ್ಲಿ ಬಳ್ಳೊಳ್ಳಿ ಕಣಕ್ಕೆ ಕಳ್ಳರ ಕಾಟ ಹೆಚ್ಚಾಗುತ್ತಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲ್ಲೂಕಿನ ಮಾಕನೂರು ಕಾಕೋಳ, ಹರಳಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಳ್ಳರ ಕಾಟ ಹೆಚ್ಚಾಗಿದ್ದು, ಕಳ್ಳರ ಕಾಟ ತಪ್ಪಿಸಲು ರೈತರು ಪೋಲಿಸರ ಮೊರೆ ಹೋಗಿದ್ದಾರೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್ ಗೆ ಎರಡರಿಂದ ಮೂರು ಸಾವಿರ ಇದ್ದ ಬಳ್ಳೊಳ್ಳಿ ಬೆಲೆ, ಧೀಡಿರ್ ಪ್ರತಿ ಕ್ವಿ ಟಾಲ್ ಗೆ ಹದಿಮೂರರಿಂದ ಹದಿನಾಲ್ಕು ಸಾವಿರ ಏರಿಕೆಯಾಗಿದೆ.
ಬೆಲೆ ಏರಿಕೆಯಿಂದಾಗಿ ಕಳ್ಳರ ಕಣ್ಣು ಬಳ್ಳೊಳ್ಳಿ ಮೇಲೆ ಬಿದ್ದಿದೆ. ಈಗಾಗಲೇ ಮಳೆ ಅವಾಂತರದಿಂದ ಹಲವು ಬೆಳೆ ಕಳೆದುಕೊಂಡಿರುವ ರೈತರು, ಇದ್ದ ಬೆಳೆಗೆ ರಕ್ಷಣೆಗಾಗಿ ಹಗಲಿರುಳು ಕಾಯುವಂತಾಗಿದೆ.