ಆನ್ ಲೈನ್ ನಲ್ಲಿ ವಸ್ತುಗಳ ಖರೀದಿಗೂ ಮುನ್ನ ಹುಷಾರ್! : ಮಕ್ಮಲ್ ಟೋಪಿ ಹಾಕಿದ ಅಮೆಜಾನ್

ಆನ್ ಲೈನ್ ನಲ್ಲಿ ವಸ್ತುಗಳು ಖರೀದಿ ಮಾಡುವ ಮುನ್ನ ಹುಷಾರ್..! ಕಡಿಮೆ ದರಕ್ಕೆ ನಿಮಗೆ ವಸ್ತುಗಳ ಸಿಗುತ್ತೆವೆಂದು ಬುಕ್ ಮಾಡಿದ್ರೆ ನಿಮಗೆ ಮಕ್ಮಲ್ ಟೋಪಿ ಬಿಳುವದು ಗ್ಯಾರೆಂಟಿ.

ಯಾಕೆಂದರೆ ಯಾದಗಿರಿ ಜಿಲ್ಲೆಯಲ್ಲಿ ಸರಕಾರಿ ನೌಕರಿಗೆ ಆನ್ ಲೈನ್ ಅಮೆಜಾನ್ ಕಂಪನಿ‌ ಮಹಾಮೋಸ ಮಾಡಿದೆ. 11990 ರೂ ನಲ್ಲಿ ಮನೆಯ ವಾಕ್ಯುಮ್ ಕ್ಲಿನರ್ ಆನ್ ಲೈನ್ ನಲ್ಲಿ ಅಮೆಜಾನ್ ಕಂಪನಿಯ ವಸ್ತುಗಳನ್ನು ಬುಕ್ ಮಾಡಿದ್ರು.ಆದ್ರೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದ ಶರಣಗೌಡ‌ ಯಾದಗಿರಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಆದ್ರೆ,ಯಾದಗಿರಿ ಜಿಲ್ಲೆ ಅಂಗಡಿಗಳಲ್ಲಿ ವ್ಯಾಕ್ಯೂಮ್ ಇಲ್ಲದ ಕಾರಣ ಅಮೆಜಾನ್ ಕಂಪನಿಯಲ್ಲಿ ಇದೆ 22 ರಂದು ಆರ್ಡ್ ರ್ ಮಾಡಿದ್ರು.ಕಂಪನಿ ಕಳುಹಿಸಿದ್ದು ಖಾಲಿ ಡಬ್ಬಾ..ವ್ಯಾಕ್ಯೂಮ್ ಕ್ಲಿನರ್ ಬದಲು ಖಾಲಿ ಡಬ್ಬಾ ಜೊತೆ ರಟ್ಟುಗಳು ಬಂದಿವೆ.ಅದೆ ರೀತಿ ಕೆಲ ವ್ಯಾಕ್ಯೂಮ್ ಕ್ಲಿನರ್ ನ ಪರಿಕರಗಳನ್ನು ಕಳುಹಿಸಿದ್ದಾರೆ.

ವ್ಯಾಕ್ಯೂಮ್ ಕ್ಲಿನರ್ ಇಲ್ಲದೇ ಡಬ್ಬಾ ಕಳುಹಿಸಿ ಕಂಪನಿ‌ ಮೋಸ ಮಾಡಿದೆ.ಈ ಬಗ್ಗೆ ಅಮೆಜಾನ್ ಸೈಟ್ ನಲ್ಲಿ ದೂರು ಸಲ್ಲಿಸುವ ಜೊತೆ ಯಾದಗಿರಿ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights