ಬೈಕ್ ಸಂಚರಿಸುವಾಗ್ಲೇ ಕುಸಿದು ಬಿದ್ದ ಸೇತುವೆ : ಬೈಕ್ ಸವಾರನ ಸ್ಥಿತಿ ಗಂಭೀರ..!
ಮಲೆನಾಡ ರಣ ಮಳೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಹೌದು.. ನಿನ್ನೆ ಸಂಜೆ ಸುರಿದ ಮಳೆಗೆ ಹಿರೇಬೈಲು-ಕೂವೆ ಸಂಪರ್ಕಿಸುವ ಸೇತುವೆವೊಂದು ಧರೆಗುರುಳಿದ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಮಾಲಿಂಗನಾಡು ಗ್ರಾಮದಲ್ಲಿ ನಡೆದಿದೆ.
ಬೈಕ್ ಸಂಚರಿಸುವಾಗ್ಲೇ ಸೇತುವೆ ಬೀಳುವುದು ತಿಳಿಯದ ಯುವಕ ಮತ್ತು ಆತನ ಬೈಕ್ ಸೇತುವೆ ಜೊತೆಗೆ ನೆಲಕ್ಕುರುಳಿದ್ದಾರೆ.
40-50 ಅಡಿ ಆಳಕ್ಕೆ ಸೇತುವೆ ಕುಸಿದಿದ್ದು, ಸೇತುವೆ ಅಡಿ ಬೈಕ್ ಸಿಕ್ಕು ನೆರಕ್ಕುರುಳಿದಿದೆ. ಬೈಕ್ ಸವಾರನ ಸ್ಥಿತಿ ಗಂಭೀರವಾರಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದೆ.