ಭವಿಷ್ಯ ಹೇಳುವವರಿಗೆ 1 ಕೋಟಿ ಆಫರ್; 5 ಪ್ರಶ್ನೆಗಳಿಗೆ ಉತ್ತರಿಸಿದರೆ ಒಂದು ಕೋಟಿ ಬಹುಮಾನ
ದೇಶಾದ್ಯಂತ ಮೌಢ್ಯ ಹಬ್ಬಿಹೋಗಿದೆ. ಕೆಲವು ವರ್ಷಗಳ ಹಿಂದೆ ಒಂದಷ್ಟು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಲು ಆರಂಭಿಸಿದ್ದ ಜನರು, ಇತ್ತಿಚೆಗೆ ಮತ್ತೆ ಮೌಢ್ಯಕ್ಕೆ ಒಲಗಾಗುತ್ತಿದ್ದಾರೆ. ಅಂತಹ ಜನರನ್ನು ದೇವರು, ಬುತ, ಭವಿಷ್ಯ, ದೋಷ ಎಂದೆಲ್ಲಾ ಜ್ಯೋತಿಷಿಗಳು ಮತ್ತಷ್ಟು ಯಾಮಾರಿಸಿ ಸುಲಿಗೆ ಮಾಡುತ್ತಿದ್ದಾರೆ.
ಸುದ್ದಿ ವಾಹಿನಿಗಳೂ ಸೇರಿದಂತೆ ಎಲ್ಲೆಂದರಲ್ಲಿ ಜ್ಯೋತಿಷಿಗಳು, ಭವಿಷ್ಯ ಹೇಳುವವರ ಜಾಲ ಹರಡಿ ಹೋಗಿದೆ. ಎಲ್ಲೋ ಕುಳಿತು ನಾಮ ಹಾಕಿ ಭವಿಷ್ಯ ಹೇಳುವವರಿಗೆ ಅಖಿಲ ಕರ್ನಾಟಕ ವಿಚಾರವಾದಿಗಳ ಸಂಘದ ಅಧ್ಯಕ್ಷ ಪ್ರೋ. ಎ.ಎಸ್.ನಟರಾಜ್ ಅವರು ಒಂದು ಕೋಟಿಯ ಸವಾಲು ಹಾಕಿದ್ದಾರೆ. ನಟರಾಜ್ ಅವರು ಕಳಿಸುವ ಐದು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಭವಿಷ್ಯಕಾರರಿಗೆ ಒಂದು ಕೋಟಿ ಬಹುಮಾನ ಸಿಗಲಿದೆ.
ಸವಾಲು ಸ್ವೀಕರಿಸುವವರು ಜ್ಯೋತಿಷಿಗಳಾದರೆ ವ್ಯಕ್ತಿಗಳು ಕೊಟ್ಟ ಜಾತಕಗಳನ್ನು ಕಳುಹಿಸಲಾಗುವುದು. ಹಸ್ತರೇಖಾ, ಲಕ್ಷಣ ಶಾಸ್ತ್ರಜ್ಞರು, ಮನೋ ಶಕ್ತಿ, ದೈವೀ ಶಕ್ತಿಯಿಂದ ಹೇಳುವವರಾದರೆ ಅವರಿಗೆ ವ್ಯಕ್ತಿ ಗಳ ಹಾಗು ಅವರ, ಮುಖ, ಹಸ್ತ ಹಾಗು ಪೂರ್ಣ ಫೋಟೋ ಗಳನ್ನು ಕಳುಹಿಸಲಾಗುವುದು. ಜಾತಕಗಳನ್ನು ಪರಿಶೀಲಿಸಿ ಭವಿಷ್ಯವನ್ನು ಹೇಳುವ ಹಾಗು ರೇಖಾ, ಲಕ್ಷಣ, ಅಂತಃ ಶಕ್ತಿ, ದೈವೀ ಶಕ್ತಿ, ಮಂತ್ರ ಶಕ್ತಿ, ಭೂತ ಶಕ್ತಿ ಇತ್ಯಾದಿ ಇಂದ ಹೇಳುವ ಎಲ್ಲಾತರದ ಭವಿಷ್ಯ ಕಾರರಿಗೂ ಈ ಸವಾಲು ಅನ್ವಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸವಾಲು ಆನ್ ಲೈನಿನಲ್ಲಿ ನಡೆಸ ಲಾಗುವುದು. ಉತ್ತರಗಳನ್ನೂ ಆನ್‌ಲೈನ್‌ನಲ್ಲಿಯೇ ಕಳುಹಿಸಬೇಕು. ಎಲ್ಲಾ ತರದ ಭವಿಷ್ಯ ಕಾರರಿಗೆ ಸವಾಲಿನ 5 ಪ್ರಶ್ನೆಗಳು ಒಂದೇ ಇರುತ್ತದೆ. ಈ ಐದು ಪ್ರಶ್ನೆಗಳಲ್ಲಿ 5 ಉತ್ತರಗಳು ಸರಿಯಾಗಿರ ಬೇಕು. ಒಂದು ಉತ್ತರ ತಪ್ಪಾದರೂ ಸ್ಪರ್ಧಿ ಸೋತಂತೆ ಎಂದು ಶರತ್ತು ವಿಧಿಸಿದ್ದಾರೆ.
ಸವಾಲು ಸ್ವೀಕರಿಸುವವರು ಸೆಕ್ಯುರಿಟಿ ಹಣ ಡಿಪಾಸಿಟ್ (ಎಸ್ಎಂಡಿ) ರೂ. ಐವತ್ತು ಸಾವಿರ ಕಟ್ಟ ಬೇಕು. ಸವಾಲಿನಲ್ಲಿ ಗೆದ್ದರೆ ಎಸ್ಎಂಡಿ ಹಣ ಹಿಂತಿರುಗಿಸಲಾಗುವುದು. ಸವಾಲಿನಲ್ಲಿ ಕನಿಷ್ಠ ಒಂದು ತಪ್ಪು ಉತ್ತರ ಕೊಟ್ಟು ಸೋತರು ಎಸ್ಎಂಡಿ ಹಣ ಮುಟ್ಟುಗೋಲು ಹಾಕಲಾಗುವುದು ಎಂದೂ ತಿಳಿಸಿದ್ದಾರೆ.
ಐದು ಪ್ರಶ್ನೆಗಳಲ್ಲಿ ಮೊದಲನೆ ಎರಡು ಪ್ರಶ್ನೆ ಭೂತ ಕಾಲದ್ದು. ಮತ್ತೆ ಒಂದು ಪ್ರಶ್ನೆ ವರ್ತಮಾನ ಕಾಲದ್ದು. ಕೊನೆಯ ಎರಡು ಪ್ರಶ್ನೆಗಳು ಭವಿಷ್ಯತ್ ಕಾಲದ್ದು ಆಗಿದೆ. ಪ್ರಶ್ನೆಯ ಉತ್ತರವನ್ನು ಜಾತಕ/ಫೋಟೋ ಕಳುಹಿಸಿದ 15 ದಿನಗಳ ಒಳಗೆ ಕಳುಹಿಸ ಬೇಕು.
ಪ್ರಶ್ನೆಗಳು ಕೆಳಕಂಡತಿವೆ:
ಪ್ರಶ್ನೆ 1) ಫೋಟೋದಲ್ಲಿ ತೋರಿಸುವ ವ್ಯಕ್ತಿ ಅಥವಾ ಕಳುಹಿಸಿದ ಜಾತಕದಲ್ಲಿರುವಂತೆ ಆ ವ್ಯಕ್ತಿ ತನ್ನ ಪ್ರಥಮ ಪದವಿಯನ್ನು (ಡಿಗ್ರಿ) ಯಾವ ವಿಭಾಗದಲ್ಲಿ (ಉದಾ: ಆರ್ಟ್, ಸಾಯನ್ಸ್, ಕಾಮರ್ಸ್, ಇಂಜಿನೀಯರ್, ಇತ್ಯಾದಿ ಹಲವು ಕೋರ್ಸ್ ಗಳಲ್ಲಿ ಯಾವ ಕೋರ್ಸ್ ದಲ್ಲಿ ) ಪದವಿ ಪಡೆದ್ದಿದ್ದಾರೆ ಎಂದು ಬರೆದು ಕಳುಹಿಸ ಬೇಕು. (ಪ್ರೂಫಗೆ ಆ ವ್ಯಕ್ತಿ ಪಡೆದ ಡಿಗ್ರಿ ಪ್ರಮಾಣ ಪತ್ರ/ಮಾರ್ಕ್ಸ್ ಕಾರ್ಡ್ ಎಟೆಟೆಸ್ಟ ಪ್ರತಿ)
ಪ್ರಶ್ನೆ 2) ನಾನು ತೋರಿಸುವ ವ್ಯಕ್ತಿಯ ಫೋಟೋ ಅಥವಾ ಕಳುಹಿಸಿದ ಜಾತಕನಿಗೆ ಮದುವೆಯಾಗಿದೆಯೆ, ಮದುವೆ ಯಾಗಿದ್ದರೆ ಮದುವೆಯ ಯೋಗದ ಅನುಸಾರವಾಗಿ ಮದುವೆಯು ನಿರ್ದಿಷ್ಟ ಕಾಲಕ್ಕೆ ನಿರ್ಧಾರ ವಾಗಿರುತ್ತದೆ. ಹಾಗಾಗಿ ಈ ವ್ಯಕ್ತಿಗೆ ಪ್ರಥಮ ಮದುವೆ ಯಾವ ವರ್ಷ (ಇಸವಿ) ತಿಂಗಳು ದಿನ ಮದುವೆ ಯಾಗಿದೆ ಎಂದು ಬರೆದು ಕಳುಹಿಸುವುದು. ( ಸ್ಪರ್ಧೆಯ ನಂತರ ಸತ್ಯದ ಪ್ರೂಫ್ ಗೆ ಆ ವ್ಯಕ್ತಿಯ ಮ್ಯಾರೇಜ್ ಸರ್ಟಿಫಿಕೇಟ್ ಪ್ರತಿ ಕಳುಹಿಸ ಲಾಗುವುದು)
ಪ್ರಶ್ನೆ 3) ನಾನು ಕಳುಹಿಸಿದ ವ್ಯಕಿಯ ಫೋಟೋ ಅಥವಾ ಕಳುಹಿಸಿದ ವ್ಯಕ್ತಿಯ ಜಾತಕದ ದಂತೆ ಆ ವ್ಯಕ್ತಿ ಈಗ ಯಾವ ಉದ್ಯೋಗದಲ್ಲಿ ಇದ್ದಾರೆ. ಉದ್ಯೋಗದ ವಿಭಾಗವನ್ನು ತಿಳಿಸ ಬೇಕು. (ಪ್ರೂಫ್ ಗೆ ಉದ್ಯೋಗ ಸರ್ಟಿಫಿಕೇಟ್ ಕಳುಹಿಸಲಾಗುವುದು)
ಪ್ರಶ್ನೆ 4) ನಾನು ತೋರಿಸುವ ಫೋಟದ ವ್ಯಕ್ತಿಗೆ/ ಕಳುಹಿಸಿದ ಜಾತಕದ ವ್ಯಕ್ತಿಗೆ ತೀರ್ಥ ಕ್ಷೇತ್ರ ದರ್ಶನ ಯೋಗದಂತೆ ಭವಿಷ್ಯ ದಲ್ಲಿ ಒಂದು ತಿಂಗಳ ಒಳಗೆ ಕರ್ನಾಟಕದ ತೀರ್ಥ ಕ್ಷೇತ್ರ ವಾದ ಕುಕ್ಕೆ ಸುಬ್ರಮಣ್ಯ, ಉಡುಪಿ, ಹಾಗು ಗೋಕರ್ಣ ಈ ಮೂರು ಕ್ಷೇತ್ರದಲ್ಲಿ ಯಾವುದಾದರು ಕನಿಷ್ಠ ಒಂದು ಕ್ಷೇತ್ರ ದರ್ಶನವನ್ನು ಮಾಡುತ್ತಾರೋ ಅಥವಾ ಇಲ್ಲವೋ ಎಂದು ಹೇಳ ಬೇಕು. (ಪ್ರೂಫ್ ಗೆ ಆ ವ್ಯಕ್ತಿ ತಿಂಗಳೊಳಗೆ ಪ್ರಯಾಣಿಸಿದ ದಾಖಲು/ ಬಸ್ ಟಿಕೇಟ್ / ಕ್ಷೇತ್ರ ದರ್ಶನದ ಗುರುತುಗಳು / ಹೋಗದೆ ಊರಲ್ಲೇ ಇದ್ದರೆ ಸ್ಪರ್ಧಿಯೊಡನೆ ದಿನಾ ಲ್ಯಾಂಡ್ ಲೈನ್ ಫೋನ್ ಮೂಲಕ ಸಂಪರ್ಕ ಅಥವಾ ಉದ್ಯೋಗಸ್ಥ ನಾದರೆ ದಿನಾ ಹಾಜರಾಗುತ್ತಿರುವ ದಾಖಲು.)
ಪ್ರಶ್ನೆ 5) ನಾನು ತೋರಿಸುವ ವ್ಯಕ್ತಿ ಫೋಟೊ ಅಥವಾ ಅವರು ಕಳುಹಿಸಿದ ಜಾತಕದಂತೆ ಭವಿಷ್ಯದಲ್ಲಿ ಇದ್ದಂತೆ ಯಾವುದಾದರು ವಾಹನ ಖರೀದಿಸುವ ಯೋಗದಡಿ ಭವಿಷ್ಯ ಹೇಳಿದ ಒಂದು ತಿಂಗಳಲ್ಲಿ ಯಾವುದಾದರು ಮೊಟಾರು ಚಾಲಿತ ವಾಹನವನ್ನು ಖರೀದಿಸುತ್ತಾರೊ
ಅಥವಾ ಇಲ್ಲವೋ ಎಂದು ಹೇಳ ಬೇಕು. (ಪ್ರೂಫ್ ಆಗಿ ಆ ವ್ಯಕ್ತಿ ಮೋಟಾರ್ ವಾಹನವನ್ನು ಪಡೆದವರಿಗೆ ವರ್ಗಾಯಿಸಿದ ಹಣದ ಬ್ಯಾಂಕ್ ದಾಖಲೆ, ರಶೀದಿ/ಆರ್ ಟಿ ಓ ದ ದಾಖಲು/ ಖರೀದಿಸದಿದ್ದರೆ ಆ ವ್ಯಕ್ತಿಯ ವಾಸದ ಪ್ರದೇಶದ ಆರ್.ಟಿ.ಓ. ದಲ್ಲಿ ವಿಚಾರಿಸಿ ತಿಳಿಯ ಬಹುದು)
ಫಲಿತಾಂಶವನ್ನು ಆನ್ ಲೈನ್‌ನಲ್ಲಿ ಪ್ರಕಟಿಸಲಾಗುವುದು. ಟಿ.ವಿ. ಪತ್ರಿಕೆಗಳಿಗೆ ಫಲಿತಾಂಶ ಕೊಡಲಾಗುವುದು ಎಂದು ತಿಳಿಸಿದ್ದರೆ.
ಹೆಚ್ಚಿನ ವಿವರಕ್ಕೆ ಮೊ: 9343743305 ಸಂಪರ್ಕಿಸಬಹುದು.