ಮೋದಿ ನೇತೃತ್ವದ ಸರ್ಕಾರ ತುಂಬಾ ಬ್ಯುಸಿಯಾಗಿದೆ; ಮಾಡುತ್ತಿರುವುದೇನು? ಸಾಧಿಸಿದ್ದೇನು?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ವಿವಿಧ ರಾಜ್ಯ ಸರ್ಕಾರಗಳು ಯಾವಾಗಲೂ ತುಂಬಾ ಬ್ಯುಸಿಯಾಗಿರುತ್ತವೆ. ಪ್ರತಿಮೆ, ಸುರಂಗ, ದೋಣಿ ಸೇವೆ ಎಲ್ಲವನ್ನೂ ಪ್ರಧಾನಿ ಮೋದಿ ಉದ್ಘಾಟಿಸುವುದರಲ್ಲಿ ತಲ್ಲೀನರಾಗಿರುತ್ತಾರೆ. ಅವರು ಜಿ-20 ಶೃಂಗಸಭೆಯನ್ನುಯಲ್ಲಿ ವಿಶ್ವದ ಉನ್ನತ ಹೂಡಿಕೆದಾರರನ್ನು ಭೇಟಿ ಮಾಡಿದ್ದಾರೆ. ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೊರೊನಾ ರೋಗದ ನಿಯಂತ್ರಣ ಮತ್ತು ಲಸಿಕೆ ತಯಾರಿಸಲು ಸಲಹೆ ನೀಡುತ್ತಿದ್ದಾರೆ. ಗಡಿ ಬಿಕ್ಕಟ್ಟಿನ ನಡುವೆಯೂ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದಾರೆ. ಗೃಹ ಸಚಿವ ಅಮಿತ್‌ ಶಾರೊಂದಿಗೆ ಬಿಜಾರ ಚುನಾವಣಾ ಪ್ರಚಾರ ಮಾಡಿದ್ದಾರೆ. ಈಗ ಅವರಿಬ್ಬರೂ ಹೈದರಾಬಾದ್‌ ಪಾಲಿಕೆ ಚುನಾವಣೆಗೆ ತೆರಳುತ್ತಿದ್ದಾರೆ.

ಈ ಮಧ್ಯೆ, ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದತ್ತ ಗೃಹ ಸಚಿವರು ಗಮನ ಹರಿಸಿದ್ದಾರೆ. ಅವರು ರಾಜಕೀಯವಾಗಿ ಮಹತ್ವದ ಮಾಟುವಾ ಸಮುದಾಯದ ಸದಸ್ಯರೊಂದಿಗೆ ಹೋಗಿ ಊಟ ಮಾಡಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅವರ ಸಹವರ್ತಿಗಳಾದ ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್ ಮತ್ತು ಹರಿಯಾಣದ ಎಂ.ಎಲ್. ಖಟ್ಟರ್‌ಗೆ ದೆಹಲಿಯ ಕಡೆಗೆ ಪ್ರತಿಭಟನೆ ಹೊರಟ್ಟಿದ್ದ ರೈತರನ್ನು ತಡೆಯುವಂತೆ ಸೂಚನೆ ನೀಡಲಾಯಿತು. ಇದನ್ನು ಈ ಮೂವರು ಹುಮ್ಮಸ್ಸಿನಿಂದ ಮಾಡಿದರು. ಆದರೆ, ರೈತರು ಎಲ್ಲಾ ಬ್ಯಾರಿಕೇಡ್‌ಗಳನ್ನು ಮುರಿದು ದೆಹಲಿ ಗಡಿಯನ್ನು ತಲುಪಿದರು. ಅವರು ದೆಹಲಿ ಗಡಿ ತಲುಪಿದರೂ ಬಿಜೆಪಿ ಆಡಳಿತ ತಂಡ ಬ್ಯುಸಿಯಾಗಿದೆ.

Farmers' protest: Stone pelting at Delhi-Haryana Singhu border, police uses tear gas shells | Farmers Protest

ಸಚಿವರು ಕೂಡ ಬ್ಯುಸಿಯಾಗಿದ್ದಾರೆ. ಅಕ್ಟೋಬರ್‌ನಲ್ಲಿ ಪಂಜಾಬ್‌ನ ರೈತರ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಲು ಕೃಷಿ ಸಚಿವರು ಸಹ ಸಮಯ ಹೊಂದಿರಲಿಲ್ಲ.

ಇದನ್ನೂ ಓದಿ: ಬಿಜೆಪಿಗೆ ಹೈದರಾಬಾದ್‌ ಚುನಾವಣೆ ಗೆಲ್ಲುವುದೇ ಮುಖ್ಯ; ಏಕೆ ಮತ್ತು ಹೇಗೆ?

ಮೋದಿ ನೇತೃತ್ವದ ಸರ್ಕಾರವು ಸಂಸತ್ತಿನ ಮೂಲಕ ಮೂರು ಕೃಷಿ ಸಂಬಂಧಿತ ಕಾನೂನುಗಳನ್ನು ಪರಿಣಾಮಕಾರಿಯಾಗಿ ಹೇರಿದೆ. ಇದು ರೈತರ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಅಲ್ಲದೆ, ಕಾರ್ಮಿಕ ಕಾನೂನುಗಳನ್ನೂ ಸಹ ಅಂಗೀಕರಿಸಿದೆ. ತ್ವರಿತವಾಗಿ ಅವುಗಳನ್ನು ಜಾರಿಗೆ ತರುವ ಮೂಲಕ ಅಸ್ತಿತ್ವದಲ್ಲಿರುವ ರಕ್ಷಣಾತ್ಮಕ ಕಾನೂನುಗಳನ್ನು ಕಳಚಿದೆ. ಇದು ಕಾರ್ಪೊರೇಟ್ ಜಗತ್ತಿಗೆ ಹೆಚ್ಚಿನ ಸಂತೋಷವನ್ನು ಉಂಟುಮಾಡಿದೆ. ಈ ಜಗತ್ತು, ಯಾವುದೇ ಸಂದರ್ಭದಲ್ಲಿ ಆರ್ಥಿಕತೆಯು ಮುಳುಗುತ್ತಿದ್ದಾಗಲೂ ಭಾರಿ ಲಾಭವನ್ನು ಪಡೆದು ಸಂಭ್ರಮಿಸುತ್ತಿತ್ತು.

ದೇಶದ ಬಗ್ಗೆ ಏನು?

ಈಗ, ದೇಶದಲ್ಲಿ ಮತ್ತು ಜನರಿಗೆ ಏನಾಗುತ್ತಿದೆ ಎಂಬುದನ್ನು ನೋಡೋಣ. ಖಂಡಿತವಾಗಿಯೂ ಈ ಎಲ್ಲಾ ಚಟುವಟಿಕೆ ಮತ್ತು ಜನರ ಶಕ್ತಿಯು ದೇಶವನ್ನು ಮುತ್ತಿಗೆ ಹಾಕುತ್ತಿರುವ ಅನೇಕ ಬಿಕ್ಕಟ್ಟುಗಳ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆಯೇ?

ಕಳೆದ ಕೆಲವು ದಿನಗಳಲ್ಲಿ, ದೇಶದ ರಾಜಧಾನಿಯನ್ನು ತಲುಪಲು ಪ್ರತಿಭಟನಾ ನಿರತ ರೈತರು ಸಾವಿರಾರು ಭದ್ರತಾ ಪಡೆಗಳು ಮತ್ತು ಅನಿಯಂತ್ರಿತ ಬ್ಯಾರಿಕೇಡ್‌ಗಳನ್ನು ಮೀರಿ ಮುಂದಡಿ ಇಡುತ್ತಿದ್ದಾರೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು 7.5% ರಷ್ಟು ಕುಗ್ಗಿದೆ ಎಂಬ ಸುದ್ದಿ ಬಂದಿದೆ. ಸತತ ಎಂಟನೇ ತಿಂಗಳೂ ಕೂಡ ಉತ್ಪಾನೆ ಮತ್ತು ಆರ್ಥಿಕತೆ ಕುಸಿದಿದೆ. ಗ್ರಾಹಕರು ಖರೀದಿಸಲು ಉತ್ಪಾನ್ನಗಳ ಬೆಲೆಗಳು ದಿಢೀರ್‌ ಏರಿಕೆ ಕಾಣುತ್ತಿವೆ. ದೇಶಾದ್ಯಂತ ಉದ್ಯೋಗಿಗಳ ಪ್ರಮಾಣ 36.4% ಕ್ಕೆ ಇಳಿದಿದೆ. ಇದು ಆರ್ಥಿಕ ಪುನಜ್ಜೀವನದ ಬಗೆಗಿನ ಯಾವುದೇ ಭರವಸೆಗಳನ್ನು ಕಾಣಲು ಸಾಧ್ಯವಿಲ್ಲ ಎಂದು ಸೂಚಿಸಿದೆ.

ಇದನ್ನೂ ಓದಿ: BJP ಆಡಳಿತ ನಡೆಸಲು ವಿಫಲವಾದರೂ ಚುನಾವಣೆಗಳನ್ನು ಗೆಲ್ಲುತ್ತದೆ! ಹೇಗೆ ಗೊತ್ತೇ?

ಭಾರತೀಯರು ಹೆಚ್ಚು ಬೆಲೆ ಏರಿಕೆಯ ಹೊಡೆತವನ್ನು ಅನುಭವಿಸುತ್ತಿರುವುದನ್ನು ತೋರಿಸಿದೆ. ಚಿಲ್ಲರೆ ಹಣದುಬ್ಬರವು 7.6% ಕ್ಕೆ ಏರಿದೆ. ಇದು ಆರು ವರ್ಷಗಳಲ್ಲಿ ಗರಿಷ್ಠಮಟ್ಟ ತಲುಪಿದೆ. ಅಲ್ಲದೆ, ಆಹಾರ ಹಣದುಬ್ಬರವು 11% ಕ್ಕಿಂತ ಹೆಚ್ಚಾಗಿದೆ. ಸರ್ಕಾರವು ಘೋಷಿಸಿದ ಪರಿಹಾರ ಮತ್ತು ಕಲ್ಯಾಣ ಕ್ರಮಗಳ ಹೊರತಾಗಿಯೂ, ಆರ್ಥಿಕತೆಯು ದುಃಖಕರ ಸ್ಥಿತಿಯಲ್ಲಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

ಕೊರೊನಾ ರೋಗದ ಎರಡನೇ ಹಂತದಲ್ಲಿಯೂ ಇದು ಸಂಭವಿಸುತ್ತಿದೆ. ಅದರೆ, ಪ್ರಕರಣಗಳ ಸಂಖ್ಯಾ ಇಳಿಕೆಯನ್ನು ತೋರಿಸಿ ಆರ್ಥಿಕ ಕುಸಿತವನ್ನು ಮರೆಮಾಚಲಾಗುತ್ತಿದೆ. ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ್ದ ರಾಜ್ಯಗಳನ್ನು ದಾಟಿ, ಹೆಚ್ಚು ಪರಿಣಾಮಕ್ಕೆ ಒಳಗಾಗದ ರಾಜ್ಯಗಳು ಮತ್ತು ಪ್ರದೇಶದಗಳನ್ನು ಭೇದಿಸುತ್ತಿದೆ.

ತಪ್ಪಾದ ನೀತಿಗಳಿಂದ ಸೃಷ್ಟಿಯಾದ ಬಿಕ್ಕಟ್ಟುಗಳು

ಆರ್ಥಿಕತೆಯು ಕಳೆದ ವರ್ಷದಿಂದಲೇ ಕುಸಿತ ಕಾಣಲು ಆರಂಭವಾಗಿತ್ತು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿಸ್ಸಂದೇಹವಾಗಿ ಅದರ ಬಗ್ಗೆ ತಿಳಿದಿತ್ತು.  ಅದಕ್ಕಾಗಿ ಅವರು ತಜ್ಞರೊಂದಿಗೆ ಸಭೆ ನಡೆಸುತ್ತಿದ್ದರು. ಕೆಲವು ಕ್ರಮಗಳನ್ನು ಘೋಷಿಸಿದರು. ಶೀಘ್ರವಾಗಿ ಎಲ್ಲವೂ ಚೆನ್ನಾಗಿರುತ್ತದೆ ಎಂಬ ಭರವಸೆಗಳನ್ನು ನೀಡಿದ್ದರು. ಅಂತಹ ಕ್ರಮವಾಗಿ, 2019ರ ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸಿ, ಕಾರ್ಪೊರೇಟ್ ಸಂಸ್ಥೆಗಳಿಗೆ ರೂ .1.45 ಲಕ್ಷ ಕೋಟಿಗಳಷ್ಟು ಅನುದಾನ ನೀಡಿತು.

ಆದರೂ, ಅವರ ಎಲ್ಲಾ ಕ್ರಮಗಳು ನಿಜವಾಗಿಯೂ ಮಾಡಿದ್ದು ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿತು. ಜನರ ಖರೀದಿ ಶಕ್ತಿ ಹೆಚ್ಚಾಗುತ್ತದೆ ಮತ್ತು ಅಲ್ಲಿಂದ ಬೇಡಿಕೆ ಹೆಚ್ಚಾಗುತ್ತದೆ ಎಂದು ಜನರ ಜೇಬಿಗೆ ಕತ್ತರಿ ಹಾಕಿದರು. ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮೊಟಕುಗೊಳಿಸಿದರು. ಸೂಪರ್ ಶ್ರೀಮಂತರಿಗೆ ರಿಯಾಯಿತಿಗಳನ್ನು ನೀಡಿದರು. ಇದು ಹೂಡಿಕೆಗೆ ಉತ್ತೇಜನ ನೀಡುತ್ತದೆ. ಕಿಕ್-ಸ್ಟಾರ್ಟ್ ಆರ್ಥಿಕ ಚಟುವಟಿಕೆಗಳು ಉದ್ಯೋಗವನ್ನು ಹೆಚ್ಚಿಸಿತ್ತದೆ ಎಂದು ಅವರು ಹೇಳಿದರು. ಇದು ಅವರ ಕಣ್ಣುಗಳ ಮುಂದೆ ಅದ್ಭುತವಾಗಿ ಅಪ್ಪಳಿಸಿದ ಮೂರ್ಖ ಕನಸು ಎಂಬುದು ಈಗ ಅವರಿಗೇ ಅರಿವಾಗಿದೆ.

ಇದನ್ನೂ ಓದಿ: ಪ. ಬಂಗಾಳ ಚುನಾವಣೆ: TMCಯಲ್ಲಿ ಭಿನ್ನಾಭಿಪ್ರಾಯ; BJP ಗೆಲುವಿಗೆ ವರದಾನ?

ಆದರೂ, “ಹುಚ್ಚು ಜನರು ಅದೇ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತಿದ್ದಾರೆ – ಹೆಚ್ಚಿನ ಫಲಿತಾಂಶವನ್ನು ನಿರೀಕ್ಷಿಸುತ್ತಿದ್ದಾರೆ” ಎಂಬ ಪ್ರಸಿದ್ಧ ಮಾತಿನಂತೆ, ಪಿಎಂ ಮೋದಿ ಮತ್ತು ಅವರ ನಿಷ್ಠಾವಂತ ಹಣಕಾಸು ಸಚಿವರು ಅದೇ ರೀತಿ ಮುಂದುವರೆದಿದ್ದಾರೆ. ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ ಸಂದರ್ಭಗಳು ಯಾವುದೇ ಹಿಂದಿನ ಸರ್ಕಾರವು ಹೋಗಲು ಧೈರ್ಯವಿಲ್ಲದ ಸ್ಥಳಕ್ಕೆ ಹೋಗಲು ಒಂದು ಸುವರ್ಣಾವಕಾಶ ಎಂದು ಅವರು ಭಾವಿಸಿದ್ದರು.

Coronavirus lockdown hits India migrant workers' pay, food supply — Quartz India

ಅವರು ಕಾರ್ಮಿಕ ಹಕ್ಕುಗಳನ್ನು ಕಸಿದುಕೊಂಡರು. ನಂತರ, ಕೃಷಿ ಸಂಬಂಧಿತ ಮೂರು ಕಾನೂನುಗಳನ್ನು ಜಾರಿಗೆ ತಂದರು. ಅದು ದೊಡ್ಡ ವ್ಯಾಪಾರಿಗಳು ಕೃಷಿ-ವ್ಯಾಪಾರ ಮತ್ತು ಕೃಷಿ ಖರೀದಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತಿದೆ. ಅಲ್ಲದೆ, ರೈತರಿಗೆ ರಾಜ್ಯಗಳು ನೀಡುವ ಸಬ್ಸಿಡಿಯನ್ನು, ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಗಳನ್ನು ಕಸಿದುಕೊಳ್ಳುತ್ತಿದೆ. ಕೃಷಿ ಉತ್ಪಾದನೆ, ಅದರ ಸಂಗ್ರಹಣೆ, ಸಾಗಣೆ ಮತ್ತು ಅದರ ಬೆಲೆ ನಿರ್ಧಾರವನ್ನು ಕಾರ್ಪೋರೇಟ್‌ಗಳು ನಿರ್ಧರಿಸಲು ಹಾಗೂ ಕೃಷಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಇಡೀ ಕೃಷಿ-ಮೌಲ್ಯ ಸರಪಳಿಯೇ ನಾಶವಾಗುತ್ತದೆ. ಅಂದರೆ, ಸುಮಾರು ಮೂರನೇ ಎರಡರಷ್ಟು ರೈತರು ಸಣ್ಣ ಮತ್ತು ಅಲ್ಪ ಪ್ರಮಾಣದ ಹಿಡುವಳಿಗಳನ್ನು ಹೊಂದಿರುವ ದೇಶದಲ್ಲಿ, ಕೃಷಿಯನ್ನು ಕಾರ್ಪೊರೇಟ್ ಆಟಗಾರರಿಗೆ ಹಸ್ತಾಂತರಿಸಲಾಗಿದೆ.

ಇದನ್ನೂ ಓದಿ: ಕೃಷಿ ನೀತಿಗಳು: ಮೋದಿ ಸರ್ಕಾರ ತಪ್ಪುಗಳು ಮತ್ತು ರೈತರ ಆಕ್ರೋಶಕ್ಕೆ ಕಾರಣಗಳು!

 ಇತ್ತೀಚಿನ ಕಾರ್ಮಿಕರ ಮುಷ್ಕರವು ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲಿ ಹರಡಿತು ಮತ್ತು ಸರ್ಕಾರ ನೀತಿಗಳ ವಿರುದ್ಧ ಎಲ್ಲಾ ರೀತಿಯ (ಖಾಸಗಿ / ಸಾರ್ವಜನಿಕ, ಔಪಚಾರಿಕ / ಅನೌಪಚಾರಿಕ, ಉತ್ಪಾದನೆ / ನಿರ್ಮಾಣ / ಸಾರಿಗೆ / ಸೇವೆಗಳು, ಇತ್ಯಾದಿ) ಅಂದಾಜು 25 ಕೋಟಿ ಕಾರ್ಮಿಕರಿಗೆ ಜಾಗೃತಿ ಮೂಢಿಸಿತು.

ಈಗಿನ ರೈತರ ಆಂದೋಲನವೂ ಮತ್ತೊಂದು ಹಂತದ ಜಾಗೃತಿಗೆ ಮುಂದಾಗಿದೆ, ಏಕೆಂದರೆ ರೈತರು ನಿಜವಾಗಿಯೂ ಉತ್ತಮ ಎಂಎಸ್‌ಪಿಗಳು, ಖರೀದಿ ವ್ಯವಸ್ಥೆಯನ್ನು ಬಲಪಡಿಸುವುದು, ಸಾಲ ಮನ್ನಾ ಇತ್ಯಾದಿ ಹಕ್ಕುಗಳಿಗಾಗಿ ಒತ್ತಾಯಿಸುತ್ತಿದ್ದರು. ಮೋದಿ ಮತ್ತು ಅವರ ಅತಿ ಬ್ಯುಸಿಯಾಗಿರುವ ಸರ್ಕಾರವು ಇದಕ್ಕೆ ವಿರುದ್ಧವಾದ ನೀತಿಗಳನ್ನು ಮಾಡಿತು.

ಏಪ್ರಿಲ್-ಮೇ ತಿಂಗಳ ಕೆಟ್ಟ ಕಲ್ಪನೆ ಮತ್ತು ಯೋಜನಾರಹಿತ ಲಾಕ್ಡೌನ್ ಈಗಾಗಲೇ ದುರ್ಬಲ ಆರ್ಥಿಕತೆಯನ್ನು ನಾಶಪಡಿಸಿದೆ. ಮಾತ್ರವಲ್ಲ, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ. ಲಾಕ್‌ಡೌನ್‌ಅನ್ನು ಅಕಾಲಿಕವಾಗಿ ಹೇರಲಾಗಿದ್ದರಿಂದ ಈಗ ಉಲ್ಬಣಗೊಳ್ಳುವ ಸಾಂಕ್ರಾಮಿಕ ರೋಗವನ್ನು ಕಾಣುತ್ತಿದೆ. ಅದನ್ನು ಎದುರಿಸಲು ಯಾವುದೇ ಶಸ್ತ್ರಾಸ್ತ್ರಗಳಿಲ್ಲ. ಅದಕ್ಕಾಗಿಯೇ ಪಿಎಂ ಮೋದಿಯವರು ತೊಡಗಿಸಿಕೊಂಡಿದ್ದಾರೆ ಎಂದು ತೋರಿಸಲು ಲಸಿಕೆ ತಯಾರಕರನ್ನು ಭೇಟಿ ಮಾಡುತ್ತಿದ್ದಾರೆ.

ಬಿಜೆಪಿ ಮತ್ತು ಸಂಘ ಪರಿವಾರದ ಸಹಚರರು ಒಂದು ವಿಷಯದಲ್ಲಿ ಯಶಸ್ವಿಯಾಗಿದ್ದಾರೆ: ಅವರು ದೇಶಾದ್ಯಂತ ಅಸೂಯೆ ಮತ್ತು ದ್ವೇಷವನ್ನು ಬಿತ್ತಲು ಯಶಸ್ವಿಯಾಗಿದ್ದಾರೆ. ಅದು ಚುನಾವಣಾ ಪ್ರಚಾರದ ಮೂಲಕ (ದೆಹಲಿ, ಬಿಹಾರ ಅಥವಾ ಈಗ ಹೈದರಾಬಾದ್ ಪುರಸಭೆಯ ಚುನಾವಣೆಗಳಂತೆ) ಅಥವಾ ಬದಲಾವಣೆಗಳ ಮೂಲಕ ಕಾನೂನು (ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಯಂತೆ) ಅಥವಾ ಹಬ್ಬಗಳಲ್ಲಿ ಮತ್ತು ಇತರ ‘ಸಂದರ್ಭಗಳಲ್ಲಿ’ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಅಡಿಪಾಯ ಹಾಕುವಂತಹ ಸಂಪೂರ್ಣ ಬೆಂಕಿಯಿಡುವ ಪ್ರಚಾರದ ಮೂಲಕ ದ್ವೇಷವನ್ನು ಹರಡುವಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ ಅದೂ ಸಹ ಈ ಸರ್ಕಾರದಿಂದ ಉಂಟಾಗುವ ಸಂಕಟದ ವಿರುದ್ಧ ಒಂದುಗೂಡುತ್ತಿರುವ  ಜನರ ಐಕ್ಯತೆಯಿಂದ ಹೊರಗುಳಿಯುವ ಪ್ರಕ್ರಿಯೆಯಲ್ಲಿದೆ.

ಕೃಪೆ: ನ್ಯೂಸ್‌ ಕ್ಲಿಕ್

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: ಪ್ರತಿಭಟನೆಗೆ ಹೆದರಿದ ಮೋದಿ ಸರ್ಕಾರ; ಮುಷ್ಕರಕ್ಕೂ ಮುನ್ನವೇ ರೈತ ಮುಖಂಡರ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights