FACT CHECK | ರಾಹುಲ್ ಗಾಂಧಿ ಹಿಂದೂ ದೇವರ ಚಿತ್ರಗಳನ್ನು ಬಳಸದೆ ಹಿಂದೂಗಳ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂಬುದು ನಿಜವೇ?
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಹಿಂದೂ ದೇವರು ‘ಶ್ರೀಕೃಷ್ಣ’ನ ಫೋಟೋ ಬಳಸದೆ ಸಾಮಾಜಿಕ ಜಾಲತಾಣಗಳಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಶುಭಕೋರಿದ್ದಾರೆ ಎಂದು ಪ್ರತಿಪಾದಿಸಿ ಬಲಪಂಥೀಯ ಸಾಮಾಜಿಕ ಮಾಧ್ಯಮಗಳು ಪೋಸ್ಟ್‌ಅನ್ನು ಹಂಚಿಕೊಂಡಿದೆ.
ಬಲಪಂಥೀಯ ಸುದ್ದಿ ವೆಬ್‌ಸೈಟ್ ‘ಓಪ್‌ಇಂಡಿಯಾ‘ ಈ ಕುರಿತು ಲೇಖನವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ರಾಹುಲ್ ಗಾಂಧಿಯವರು ಹಿಂದೂ ಹಬ್ಬಗಳಿಗೆ ಶುಭಾಷಯ ಕೋರುವಾಗ, ಹಿಂದೂ ದೇವರುಗಳ ಫೋಟೋ ಏಕೆ ಪೋಸ್ಟ್ ಮಾಡುವುದಿಲ್ಲ? ಎಂದು ಪ್ರಶ್ನಿಸಿದೆ. ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುವ ತಟಸ್ಥ ಅಥವಾ ನಿಷ್ಪಕ್ಷಪಾತ ನಿಲುವು ವ್ಯಕ್ತಪಡಿಸಲು ಅವರು ಹಾಗೆ ಮಾಡುತ್ತಿದ್ದಾರೆ ಎಂದಿದೆ.
ಹಿಂದೂ ಧರ್ಮವನ್ನು ಸಂಪೂರ್ಣ ಜಾತ್ಯತೀತ ಎಂದು ವಾದಿಸಿರುವ ಓಪ್‌ಇಂಡಿಯಾದ ಲೇಖಕ, ‘ಧರ್ಮವು ಒಂದು ಪ್ರತ್ಯೇಕ ಅಂಶವಾಗಿದೆ. ಅದು ಜಾತ್ಯತೀತವಾಗಿರಬಾರದು. ಹಳೆಯ ಪಕ್ಷದ (ಕಾಂಗ್ರೆಸ್) ರಾಜಕುಮಾರ (ರಾಹುಲ್ ಗಾಂಧಿ) ತನ್ನ ಜಾತ್ಯತೀತೆಯನ್ನು ಬಲಪಡಿಸಲು ಹಿಂದೂ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸದಾ ಕೋಮುದ್ವೇಷ ಪೂರಿತ ಸುದ್ದಿಗಳನ್ನು ಹಂಚಿಕೊಳ್ಳುವ ಬಲಪಂಥೀಯ ಎಕ್ಸ್ ಬಳಕೆದಾರ ಮಿ.ಸಿನ್ಹಾ (MrSinha) ರಾಹುಲ್ ಗಾಂಧಿಯವರು ಈ ಹಿಂದೆ ಹಲವು ಹಿಂದೂ ಹಬ್ಬಗಳಿಗೆ ಶುಭಕೋರಿರುವ ಪೋಸ್ಟ್‌ಗಳ ಸ್ಕ್ರೀನ್ ಶಾಟ್ ಹಂಚಿಕೊಂಡು “ನಮ್ಮ ಹಬ್ಬ ಹರಿದಿನಗಳಿಗೆ ಶುಭ ಹಾರೈಸುವಾಗ ರಾಹುಲ್ ಗಾಂಧಿ ಎಂದಿಗೂ ಹಿಂದೂ ದೇವರು/ದೇವತೆಗಳ ಫೋಟೋಗಳನ್ನು ಬಳಸುವುದಿಲ್ಲ. ಅವರು ‘ವಿಗ್ರಹಾರಾಧನೆ ಹರಾಮ್’ ಎಂಬ ತತ್ವವನ್ನು ಅನುಸರಿಸುತ್ತಿದ್ದಾರೆಂದು ತೋರುತ್ತದೆ” ಎಂದು ಬರೆದುಕೊಂಡಿದ್ದಾರೆ.
ಹಲವು ಬಲಪಂಥೀಯ ಎಕ್ಸ್, ಫೇಸ್‌ಬುಕ್ ಬಳಕೆದಾರರು ರಾಹುಲ್ ಗಾಂಧಿಯ ಪೋಸ್ಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡು ಅವರನ್ನು ಟೀಕಿಸಿದ್ದಾರೆ. ಹಾಗೆಯೇ ಓಪ್‌ಇಂಡಿಯಾ ಸುದ್ದಿವೆಬ್‌ಸೈಟ್ ಮತ್ತು ಇತರ ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದಂತೆ ರಾಹುಲ್ ಗಾಂಧಿ ಹಿಂದೂ ದೇವರುಗಳ ಫೋಟೋ ಬಳಸಿ ಯಾವತ್ತೂ ಹಬ್ಬಗಳಿಗೆ ಶುಭಕೋರಿಯೇ ಇಲ್ಲವೇ ಎಂದು ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ರಾಹುಲ್ ಗಾಂಧಿಯವರ ತಮ್ಮ ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳನ್ನು ಪರಿಶೀಲಿಸಿದಾಗ, ಆಗಸ್ಟ್ 23, 2019ರಂದು ಹಿಂದೂ ದೇವರು ಶ್ರೀಕೃಷ್ಣ (ಬಾಲಕೃಷ್ಣ) ನ ಫೋಟೋ ಇರುವ ಪೋಸ್ಟರ್ ಬಳಸಿಕೊಂಡು ರಾಹುಲ್ ಗಾಂಧಿ ಜನ್ಮಾಷ್ಟಮಿಗೆ ಶುಭಕೋರಿದ್ದಾರೆ.
आप सभी को जन्माष्टमी के पावन पर्व की हार्दिक शुभकामनाएं। #HappyJanmashtami pic.twitter.com/DFIdwUeGHB
— Rahul Gandhi (@RahulGandhi) August 23, 2019
ಸೆಪ್ಟೆಂಬರ್ 25, 2017ರಂದು ಗುಜರಾತ್‌ನ ಜಾಮ್‌ನಗರದ ಚಂಡೀ ಬಝಾರ್‌ನ ನವರಾತ್ರಿ ಪೆಂಡಾಲ್‌ನ ಫೋಟೋವನ್ನು ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, “ಜಾಮ್‌ನಗರದ ಚಂಡೀ ಬಝಾರ್‌ನ ನವರಾತ್ರಿ ಪೆಂಡಾಲ್‌ಗೆ ಭೇಟಿ ನೀಡುವ ಮೂಲಕ ದಿನ ಮುಕ್ತಾಯಗೊಂಡಿತು” ಎಂದು ಬರೆದುಕೊಂಡಿದ್ದರು. ಆ ಪೆಂಡಾಲ್ ಫೋಟೋದಲ್ಲಿ ಹಿಂದೂ ದೇವ, ದೇವತೆಗಳ ಮೂರ್ತಿಗಳನ್ನು ನೋಡಬಹುದು.
Day ends with visit to Navratri Pandal, Chandi Bazar, Jamnagar pic.twitter.com/iujZAM4cHa
— Rahul Gandhi (@RahulGandhi) September 25, 2017
ಅಕ್ಟೋಬರ್ 19, 2015ರಂದು ದುರ್ಗಾ ದೇವಿ ಮೂರ್ತಿಯ ಫೋಟೋ ಹಂಚಿಕೊಂಡು ” ದುರ್ಗಾ ಪೂಜೆಗೆ ರಾಹುಲ್ ಗಾಂಧಿ ಶುಭಕೋರಿದ್ದರು.
दुर्गा पूजा के शुभ अवसर पर आप सभी को हार्दिक शुभकामनायें pic.twitter.com/0KE8pUVW9c
— Rahul Gandhi (@RahulGandhi) October 19, 2015
ಇದಲ್ಲದೆ, ಗಣಪತಿ ಫೋಟೋ ಹಾಕಿ ಗಣೇಶ ಚತುರ್ಥಿಗೆ, ಕೃಷ್ಣನ ಫೋಟೋ ಹಾಕಿ ವಿಶು ಹಬ್ಬಕ್ಕೆ, ಬಸವಣ್ಣನ ಫೋಟೋ ಹಾಕಿ ಬಸವ ಜಯಂತಿಗೆ, ಗೌತಮ ಬುದ್ದನ ಫೋಟೋ ಹಾಕಿ ಬುದ್ದ ಪೂರ್ಣಿಮೆಗೆ ರಾಹುಲ್ ಗಾಂಧಿ ಶುಭ ಕೋರಿರುವ ಪೋಸ್ಟ್‌ಗಳು ಈಗಲೂ ಅವರ ಎಕ್ಸ್ ಖಾತೆಯಲ್ಲಿ ಇವೆ.
ಒಟ್ಟಾರೆಯಾಗಿ ಹೇಳುವುದಾದರೆ, ರಾಹುಲ್ ಗಾಂಧಿ ಹಿಂದೂ ದೇವರುಗಳ ಫೋಟೋ ಬಳಸಿ ಫೋಸ್ಟ್ ಹಾಕುವುದಿಲ್ಲ. ಅವರು ಹಿಂದೂ ಧರ್ಮ ವಿರೋಧಿ ಎಂಬರ್ಥದ ಓಪ್‌ಇಂಡಿಯಾದ ಲೇಖನ ಮತ್ತು ಇತರ ಬಲಪಂಥೀಯರ ಪೋಸ್ಟ್‌ಗಳು ಸುಳ್ಳು. ಈ ಹಿಂದೆ ಹಲವು ಬಾರಿ ಹಿಂದೂ ದೇವರುಗಳ ಫೋಟೋ ಬಳಸಿಕೊಂಡು ರಾಹುಲ್ ಗಾಂಧಿ ಹಬ್ಬಗಳಿಗೆ ಶುಭಕೋರಿದ್ದಾರೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಗುಲ್ಬರ್ಗಾ ಮತ್ತು ಬೀದರ್ನಲ್ಲಿ ಇರಾನಿ ಗ್ಯಾಂಗ್ ದರೋಡೆಗಿಳಿದಿದೆ ಎಂಬ ಎಚ್ಚರಿಕೆಯ ಪೋಸ್ಟ್‌ನ ಸತ್ಯಾಂಶವೇನು?