ಭಾರತದಲ್ಲಿ ದಿನಕ್ಕೆ 15,000 ಜನರಿಗೆ ಕೊರೊನಾ ತಗುಲುವ ಸಾಧ್ಯತೆ: ಚೀನಾ ನುಡಿದ ಭವಿಷ್ಯ!

ದೇಶಾದ್ಯಂತ ಹೇರಲಾಗಿದ್ದ ಲಾಕ್‌ಡೌನ್‌ ಸಡಿಲವಾದಂತೆ, ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗುತ್ತಿದೆ. ದಿನ ಕಳೆದಂತೆ ಸೋಂಕಿತ ಪ್ರಕರಣಗಳ ಪ್ರಮಾಣ ಹೆಚ್ಚುತ್ತಲೇ ಇದೆ. ಲಾಕ್‌ಡೌನ್‌ ಸಡಿಲವಾದ ಮೊದಲ ವಾರ 3,000 ಇದ್ದ ಸೋಂಕಿತರ ದಿನದ ಸರಾಸರಿ ಈಗ  ಪ್ರತಿನಿತ್ಯ 9,000 ಕ್ಕೆ ತಲುಪಿದೆ.

ಇದರ ನಡುವೆ, ಸೋಮವಾರದಿಂದ ಮಾಲ್‌, ರೆಸ್ಟೊರೆಂಟ್‌, ಹೋಟೆಲ್‌ಗಳನ್ನು ತೆರೆಯಲು ಕೇಂದ್ರ ಅನುಮತಿ ಸೂಚಿಸಿದೆ. ಆದರೆ, ಭಾರತದಲ್ಲಿ ಜೂನ್ ಮಧ್ಯ ಭಾಗದಲ್ಲಿ ಪ್ರತಿನಿತ್ಯವೂ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಲಿವೆ ಎಂಬ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ಈ ಆಘಾತಕಾರಿ ಸುದ್ದಿಯನ್ನು ಚೀನಾ ಪ್ರಕಟಿಸಿದ್ದು, ಕೂತೂಹಲಕ್ಕೆ ಕಾರಣವಾಗಿದೆ.

Corona claims four lives in Karnataka, highest in 24 hours- The ...

ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದಲ್ಲಿರುವ ಲ್ಯಾಂಜೋ ವಿಶ್ವವಿದ್ಯಾಲಯದ ತಜ್ಞರು ಇಂಥ ಮೈನಡುಗಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಲ್ಯಾಂಜೋ ವಿಶ್ವವಿದ್ಯಾಲಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊರೋನಾ ಸೋಂಕು ಹರಡುವಿಕೆಯ ಪ್ರಮಾಣದ ಬಗ್ಗೆ ಸಂಶೋಧನೆ ನಡೆಸುತ್ತಿದೆ.

ಗ್ಲೋಬಲ್ ಕೋವಿಡ್ -19 ಪ್ರಿಡಿಕ್ಟ್ ಸಿಸ್ಟಮ್ ಎಂಬ ಹೆಸರಿನಲ್ಲಿ ಸಂಶೋಧನೆ ನಡೆಸುತ್ತಿರುವ ಲ್ಯಾಂಜೋ ವಿಶ್ವವಿದ್ಯಾಲಯದ ತಜ್ಞರು 180 ದೇಶಗಳಿಗೆ ದೈನಂದಿನ ಮುನ್ಸೂಚನೆಯನ್ನು ನೀಡುತ್ತಿದ್ದಾರೆ. ಹಾಗಾಗಿ ಭಾರತದ ಪರಿಸ್ಥಿತಿಯ ಬಗ್ಗೆಯೂ ಅಂದಾಜು ಮಾಡುತ್ತಿದ್ದಾರೆ.

ಈ ಹಿಂದೆ ಭಾರತದಲ್ಲಿ ಜೂನ್ ಆರಂಭದಲ್ಲಿ ಪ್ರತಿನಿತ್ಯ 9 ಸಾವಿರಕ್ಕೂ ಹೊಸ ಪ್ರಕರಣಗಳು ಪತ್ತೆಯಾಗಲಿವೆ ಎಂದು ಭವಿಷ್ಯ ನುಡಿದಿದ್ದರು. ಅದಕ್ಕೆ ತಕ್ಕಂತೆ ಭಾರತದಲ್ಲಿ ಜೂನ್ 3ರಿಂದ ಪ್ರತಿದಿನ 9 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿದೆ.

Lanzhou University - 学校 - Ni Hao China: Study in China | Apply ...

ಇದಲ್ಲದೆ ಲ್ಯಾಂಜೋ ವಿಶ್ವವಿದ್ಯಾಲಯದ ತಜ್ಞರು ಲಾಕ್ಡೌನ್ ನಿಯಮಗಳನ್ನು ಹಂತ-ಹಂತವಾಗಿ ಸಡಿಲಿಸುತ್ತಿರುವುದರಿಂದ ಕ್ರಮೇಣವಾಗಿ ಕೊರೋನಾ ಸೋಂಕು ಮತ್ತಷ್ಟು ಉಲ್ಬಣಗೊಳ್ಳಲಿದೆ. ಲಾಕ್ಡೌನ್ ನಿಯಮಾವಳಿಗಳಿಗೆ ವಿನಾಯಿತಿ ನೀಡುವುದರಿಂದ ಸಾಮಾಜಿಕ ಅಂತರ ಹಾಗೂ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳು ಪಾಲನೆಯಾಗುವುದು ಅನುಮಾನ. ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಈ ಹಿಂದೆಯೇ ಹೇಳಿದ್ದರು.

ಆದರೆ, ಇತರ ದೇಶಗಳಲ್ಲಿ ಭವಿಷ್ಯದಲ್ಲಿ ಏನಾಗಬುಹುದು ಎಂದು ಲ್ಯಾಂಚೋ ವಿವಿ ಹೇಳುತ್ತಿರುವ ಸಂದರ್ಭದಲ್ಲಿಯೇ ಚೀನಾದಲ್ಲಿ ಏನಾಗುತ್ತಿದೆ ಎಂದು ನಿಗೂಢವಾಗಿದೆ. ಚೀನಾ ಕೊರೊನಾ ಸೋಂಕಿತರು ಹಾಗೂ ಬಲಿಯಾದವರ ಬಗ್ಗೆ ಸರಿಯಾದ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಹಲವಾರು ಅನುಮಾನಗಳು ಚೀನಾ ಸುತ್ತ ಹೆಣೆದುಕೊಂಡಿದ್ದವು. ಈಗಲೂ ಆ ಅನುಮಾನಗಳು ಮುಂದುವರದಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights