ಭಾರತೀಯ ವಾಯುಸೇನೆಯ ಯುದ್ದ ವಿಮಾನ ಪತನ
ಭಾರತೀಯ ವಾಯುಪಡೆಗೆ ಸೇರಿದೆ ಮಿಗ್-29 ಯುದ್ಧ ವಿಮಾನ ಇಂದು ಬೆಳಗ್ಗೆ ಪಂಜಾಬ್‌ನಲ್ಲಿ ಪತನವಾಗಿದೆ ಎಂದು ತಿಳಿದುಬಂದಿದೆ.
ಪಂಜಾಬ್ ನ ನವಾನ್ ಶಹರ್ ನಲ್ಲಿ ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಯುದ್ಧ ವಿಮಾನ ಪತನಕ್ಕೂ ಮುನ್ನ ಪೈಲಟ್ ಪ್ಯಾರಾಚೂಟ್ ಹಾಕಿಕೊಂಡು ವಿಮಾನದಿಂದ ಜಿಗಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿರ್ಜನ ಪ್ರದೇಶದಲ್ಲಿ ವಿಮಾನಪತನವಾಗಿದ್ದರಿಂದ ಹೆಚ್ಚಿನ ಸಾವು-ನೋವು ಸಂಭವಿಸಿಲ್ಲ. ತಕ್ಷಣವೇ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿನೀಡಿದ್ದು, ಪೈಲಟ್ ರನ್ನು ರಕ್ಷಿಸಿದ್ದಾರೆ. ವಾಯುಸೇನೆಯ ಉನ್ನತಾಧಿಕಾರಿಗಳು ಕೂಡ ಅಪಘಾತ ಸ್ಥಳಕ್ಕೆ ಆಗಮಿಸುತ್ತಿದ್ದು, ಅಪಘಾತ ಮಾಹಿತಿ ಪಡೆಯಲಿದ್ದಾರೆ.
ವಿಮಾನ ಪತನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ತಾಂತ್ರಿಕ ದೋಷದಿಂದ ವಿಮಾನ ಪತನವಾಗಿರಬಹುದು ಎಂದು ಹೇಳಲಾಗುತ್ತಿದೆ.